Sunday, 15th December 2024

ಕಾಡುಗೊಲ್ಲರ ಅಭಿವೃದ್ಧಿ ನಿಗಮ ಅನುಷ್ಠಾನಗೊಳಿಸಲು ಬಿ.ಎಸ್.ವೈ.ಗೆ ಮನವಿ

ತುಮಕೂರು: ಇಂದು ತುಮಕೂರು ನಗರಕ್ಕೆ  ಆಗಮಿಸಿದ  ಮಾಜಿ ಮುಖ್ಯಮಂತ್ರಿ ಬಿ.ಎಸ್‌  ಯಡಿಯೂರಪ್ಪ ನವರನ್ನು ಕರ್ನಾಟಕ  ರಾಜ್ಯ  ಕಾಡುಗೊಲ್ಲ ಸಂಘದ  ತುಮಕೂರು ಜಿಲ್ಲಾ ಅಧ್ಯಕ್ಷ   ಎಮ್‌ . ಜೆ. ಶಿವಣ್ಣ , ಗುಬ್ಬಿ ಮುಖಂಡ  ಜುಂಜೇಗೌಡ  ನೇತೃತ್ವದಲ್ಲಿ ಬಿ.ಎಸ್‌.ಯಡಿಯೂರಪ್ಪನವರನ್ನು  ಭೇಟಿ  ಮಾಡಿ  ಸಂಘದ  ಪದಾಧಿ ಕಾರಿಗಳು ಕಾಡುಗೊಲ್ಲರ  ಅಭಿವೃದ್ಧಿ ನಿಗಮವನ್ನು  ತಾವು  ಘೋಷಣೆ  ಮಾಡಿರುವುದು ಸರಿಯಷ್ಟೆ,ಆದರೆ  ಕೊಡಲೇ   ಕಾಡುಗೊಲ್ಲರ  ಅಭಿವೃದ್ಧಿ  ನಿಗಮ  ಅನುಷ್ಠಾನಗೊಳಿ ಸಲು ಮುಖ್ಯಮಂತ್ರಿಗಳಿಗೆ ತಾವು ತಕ್ಷಣವೇ   ನಿರ್ದೇಶನ ನಿಡಲು   ಮನವಿ  ಮಾಡಿದರು.
ಕಳೆದ ಬಾರಿ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಡು ಗೊಲ್ಲ ಜನಾಂಗಕ್ಕೆ ಅಭಿವೃದ್ಧಿ ನಿಗಮ ಬಿ.ಎಸ್‌ .ಯಡಿಯೂರಪ್ಪ ಘೋಷಣೆ ಮಾಡಿರು ವುದು, ಕಾಡುಗೊಲ್ಲ ಜನಾಂಗಕ್ಕೆ  ಸಂತಸದ  ವಿಚಾರ  ಅದರಂತೆ ಕರ್ನಾಟಕದ  ಸಮಸ್ತ ಕಾಡುಗೊಲ್ಲ ಜನಾಂಗ ಅಭಿನಂದನೆ ಸಲ್ಲಿಸಿದೆ.
ತಾವು ತಮ್ಮ ರಾಜಕೀಯ ಅವಧಿಯಲ್ಲಿ ತೆಗೆದುಕೊಳ್ಳುವಂತಹ ನಿರ್ಧಾರಗಳು ಈ ರಾಜ್ಯದ ಭವಿಷ್ಯವನ್ನು ರೂಪಿಸಿವೆ, ಆದ್ದರಿಂದ ತಾವು ದಯಮಾಡಿ ಕಳೆದ ಶಿರಾ  ಉಪಚುನಾವಣೆಯಲ್ಲಿ ಕಾಡುಗೊಲ್ಲರಿಗೆ ಅಭಿವೃದ್ಧಿ ನಿಗಮವನ್ನು ಮಂಜುರು ಮಾಡಿದ್ದು ರಾಜ್ಯದ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿ ಕೂಡಲೇ ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಸುಮಾರು 500 ಕೋಟಿ ಹಣ ಬಿಡುಗಡೆಗೊಳಿಸಿ ಸಮಸ್ತ ಕಾಡುಗೊಲ್ಲರು ಆರ್ಥಿಕವಾಗಿ  ಸದೃಢರಾಗಿ  ಸಮಾಜದ  ಮುಖ್ಯವಾಹಿನಿಗೆ  ಬರಲು  ತಮ್ಮ  ಸಹಕಾರ  ಕಾಡುಗೊಲ್ಲರಿಗೆ ಅತ್ಯವಶ್ಯಕವಾಗಿದ್ದು ನೀವು ಮಾಡುವಂತಹ ಜನಾಂಗದ ಅಭಿವೃದ್ಧಿ ಕಾರ್ಯಕ್ಕೆ ಸಮಸ್ತ ಕಾಡುಗೊಲ್ಲ ಜನಾಂಗ ತಮ್ಮ ರಾಜಕೀಯ ಜೀವನದ ಜೊತೆಯಲ್ಲಿ ಹಾಗೂ ಭಾರತೀಯ ಜನತಾ ಪಕ್ಷದ ಪರವಾಗಿ ಮುಂಬರುವ ಚುನಾವಣೆಯಲ್ಲಿ  ಮುಂದುವರಿಯುತ್ತೇವೆ ಹಾಗೂ ಬೆಂಬಲಿಸುತ್ತೇವೆ ಎಂದು ಸಂಘದ ಪದಾಧಿಕಾರಿಗಳು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಸಮಸ್ತ ಕಾಡುಗೊಲ್ಲರ ಪರವಾಗಿ ಮನವಿ  ಸಲ್ಲಿಸಿದರು.
ಕಾಡುಗೊಲ್ಲರ ಸಂಘದ ಜಿಲ್ಲಾಧ್ಯಕ್ಷ ಎಂ ಜೆ ಶಿವಣ್ಣ ,ಚೇಳೂರು  ಜಿಲ್ಲಾಪಂಚಾಯಿತಿ ಭಾರತೀಯ ಜನತಾ ಪಕ್ಷದ ಸಂಭಾವ್ಯ ಅಭ್ಯರ್ಥಿ ಗುಡ್ಡದಹಳ್ಳಿ  ಬಸವರಾಜ್ , ಕಾಡುಗೊಲ್ಲರ ಮುಖಂಡರಾದ ಜುಂಜೇಗೌಡ , ಡಿ.ಕೆ .ಗಂಗಾಧರ್ ಬಿಳಿಕಲ್ಲ ಹಟ್ಟಿ ,ಸದಾಶಿವ ತಾಲೂಕು ಪ್ರಧಾನ ಕಾರ್ಯದರ್ಶಿ ಜಯಣ್ಣ ,ನಿವೃತ್ತ ಶಿಕ್ಷಕರಾದ ದೊಡ್ಡ ವೀರಯ್ಯ ವಕೀಲರಾದ ಕೆಂಪಣ್ಣ, ಪಾವಗಡ ಮುರಳಿ, ಮುದಿಯನ ಹಟ್ಟಿ ಶ್ರೀನಿವಾಸ್ ,ನರಸಿಂಹಮೂರ್ತಿ ಮತ್ತಿತರರು ಇದ್ದರು.