ತುಮಕೂರು: ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ರಾಜ್ಯಾದ್ಯಂತ 40 ಕ್ಷೇತ್ರಗಳಲ್ಲಿ ಮುಂದಿನ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಸವರಾಜು ಎಸ್.ಡಿ., ಪ್ರಭಾರ ಅಧ್ಯಕ್ಷ ಡಿ.ಕೆ.ಗಂಗಾಧರಯ್ಯ ಅವರುಗಳು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, ಕಾಡುಗೊಲ್ಲರ ಮಕ್ಕಳಿಗೆ ಜಾತಿ ಪ್ರಮಾಣ ಪತ್ರ ವಿತರಿಸಲು ಸುತ್ತೊಲೆ, ಜತೆಗೆ ಕಾಡುಗೊಲ್ಲ ಅಭಿವೃದ್ದಿ ನಿಗಮಕ್ಕೆ ಚಾಲನೆ ನೀಡಬೇಕು. ಬುಡಕಟ್ಟು ಪಂಗಡಕ್ಕೆ ಸೇರಿದ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡದ ಜಾತಿ ಪಟ್ಟಿಗೆ ಸೇರಿಸಬೇಕೆಂಬುದು ನಮ್ಮ ನಾಲ್ಕು ದಶಕಗಳ ಬೇಡಿಕೆಯಾಗಿದೆ.ಲೋಕೂರು ವರದಿ ಹೆಸರಿಸಿರುವ ಎಲ್ಲಾ ಲಕ್ಷಣಗಳನ್ನು ಕಾಡುಗೊಲ್ಲ ಸಮುದಾಯ ಹೊಂದಿದೆ ಎಂಬುದನ್ನು ಡಾ.ಅನ್ನಪೂರ್ಣಮ್ಮ ವರದಿ ಸ್ಪಷ್ಟಪಡಿಸಿದೆ.ಎಲ್ಲಾ ವಿಷಯಗಳಲ್ಲಿಯೂ ಹಿಂದುಳಿದಿರುವ ಈ ಸಮುದಾಯವನ್ನು ಎಸ್ಟಿ ಜಾತಿ ಪಟ್ಟಿಗೆ ಸೇರಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದಲ್ಲಿ ಆಡಳಿತ ನಡೆಸಿದ ಎಲ್ಲಾ ರಾಜಕೀಯ ಪಕ್ಷಗಳು ಕಾಡುಗೊಲ್ಲರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿವೆ.ದೇಶದಲ್ಲಿ ಸುಮಾರು 12 ಜಿಲ್ಲೆಗಳ 40 ತಾಲೂಕುಗಳಲ್ಲಿ ಮಾತ್ರ ಕಾಡುಗೊಲ್ಲರಿದ್ದು, ಸುಮಾರು 6.50 ಜನಸಂಖ್ಯೆ ಯನ್ನು ಹೊಂದಿದೆ.ಎಎಡಿ ಲೂಯಿಸ್ ಮತ್ತು ಪ್ರಾನಿನ್ಸ್ ಅವರ ಪ್ರಕಾರ ಆದಿಮ ಬಡುಕಟ್ಟು ಸಂಸ್ಕೃತಿ ಹೊಂದಿರುವ ರಾಜ್ಯ 17 ಸಮುದಾಯಗಳಲ್ಲಿ ಕಾಡುಗೊಲ್ಲ ಸಮುದಾಯವೂ ಒಂದು ಎಂದು ತಿಳಿಸಿದೆ.
ಆದರೂ ಇದುವರೆಗೂ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಜಾತಿ ಪಟ್ಟಿಗೆ ಸೇರಿಸದೆ ಶೈಕ್ಷಣಿಕವಾಗಿ,ರಾಜಕೀಯ ವಾಗಿ,ಆರ್ಥಿಕವಾಗಿ,ಸಾಮಾಜಿಕವಾಗಿ ಹಿಂದುಳಿಯುವಂತೆ ಮಾಡಿವೆ.ಮೈಸೂರು ಮಹಾರಾಜರ ಕಾಲದಲ್ಲಿ ನಡೆದ ಜಾತಿ ಗಣತಿ ಯಲ್ಲಿಯೂ ಕಾಡುಗೊಲ್ಲ ಸಮುದಾಯದ ಹೆಸರಿದೆ.ಆದರೆ 1931ರ ನಂತರ ಈ ಹೆಸರು ಜಾತಿಪಟ್ಟಿಗಳಲ್ಲಿ ಕಾಣದಾಗಿ, ಗೊಲ್ಲ, ಯಾದವ ಎಂಬ ಹೆಸರುಗಳು ಚಾಲ್ತಿಗೆ ಬಂದಿವೆ.ಆದಿಮ ಸಂಸ್ಕೃತಿಯ ಕಾಡುಗೊಲ್ಲ ರಿಗೂ, ಗೊಲ್ಲರಿಗೂ ಯಾವುದೇ ಸಂಬಂಧ ವಿಲ್ಲ. ಕಾಡುಗೊಲ್ಲರ ಹೆಸರಿನಲ್ಲಿ ಗೊಲ್ಲ, ಅಥವಾ ಯಾದವ ಸಮುದಾಯ ಸರಕಾರಿ ಸವಲತ್ತು ಪಡೆದು, ನಮ್ಮನ್ನು ವಂಚಿಸು ತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯಾದ್ಯಂತ ಕಾಡುಗೊಲ್ಲರ ಹೆಚ್ಚಿನ ಸಂಖ್ಯೆಯಲ್ಲಿರುವ ಸುಮಾರು 40 ವಿಧಾನಸಭಾ ಕ್ಷೇತ್ರಗಳಲ್ಲಿಯೂ ನಮಗೆ ವಿರುದ್ದವಾಗಿ ರುವ ಎಲ್ಲಾ ಶಾಸಕರನ್ನು ಮನೆಗೆ ಕಳುಹಿಸುವ ಕೆಲಸವನ್ನು ಮುಂದಿನ ಚುನಾವಣೆಯಲ್ಲಿ ಮಾಡಲಿದ್ದೇವೆ ಎಂಬ ಎಚ್ಚರಿಕೆ ಯನ್ನು ಕಾಡುಗೊಲ್ಲ ಮುಖಂಡರು ನೀಡಿದರು.
ಕಳೆದ 2020ರ ಶಿರಾ ಉಪಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಬಿಜೆಪಿ ರಾಜ್ಯಾಧ್ಯಕ್ಷ ನಳಿನಿ ಕುಮಾರ್ ಕಟೀಲ್ ಹಾಗೂ ಇತರೆ ನಾಯಕರು ಕಾಡುಗೊಲ್ಲರ ಅಭಿವೃದ್ದಿ ನಿಗಮ ಜಾರಿಗೆ ತಂದಿದ್ದರು. ಆದರೆ 2 ವರ್ಷ ಕಳೆದರು ಅದನ್ನು ನೊಂದಾವಣೆ ಮಾಡಿಲ್ಲ.ನಿಗಮಕ್ಕೆ ನೀಡಿದ್ದ 17 ಕೋಟಿ ಅನುದಾನವನ್ನು ಹಿಂದಪಡೆದು, ಅತಂತ್ರ ಸ್ಥಿತಿಗೆ ತಳ್ಳಿದ್ದಾರೆ. ಕೂಡಲೇ ನಿಗಮವನ್ನು ನೊಂದಾಯಿಸಿ,ಅನುದಾನವನ್ನು ಬಿಡುಗಡೆ ಮಾಡಿ,ಕಾಡುಗೊಲ್ಲರಿಗೆ ಸರಕಾರಿ ಸವಲತ್ತು ದೊರೆಯು ವಂತೆ ಮಾಡಬೇಕೆಂಬುದು ನಮ್ಮ ಒತ್ತಾಯವಾಗಿದೆ.
ಇದರ ಜತೆಗೆ ನಮ್ಮ ಸಮುದಾಯದ ಮಕ್ಕಳಿಗೆ ಕಾಡುಗೊಲ್ಲ ಜಾತಿ ಸರ್ಟಿಪಿಕೇಟ್ ನೀಡಲು ರಾಜ್ಯದ 1225 ಗೊಲ್ಲರಹಟ್ಟಿ ಗಳಲ್ಲಿಯೂ ಆಂದೋಲನ ನಡೆಸಬೇಕೆಂಬುದು ನಮ್ಮ ಆಗ್ರಹವಾಗಿದೆ.ಒಂದು ವೇಳೆ ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳ ದಿದ್ದರೆ ಮೊದಲ ಹಂತವಾಗಿ ರಾಷ್ಟ್ರೀಯ ಹೆದ್ದಾರಿಗಳಿಗೆ ನಮ್ಮ ಜೀವಾನಾಧಾರವಾಗಿರುವ ಕುರಿಗಳನ್ನು ಬಿಟ್ಟು ರಸ್ತೆ ತಡೆ ನಡೆಸಲಿದ್ದೇವೆ.ಸರಕಾರ ಕಿವಿಗೊಡದಿದ್ದರೆ ಕುರಿಗಳೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.
ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿಯೂ ಶಾಸಕಿ ಶ್ರೀಮತಿ ಪೂರ್ಣೀಮ ಶ್ರೀನಿವಾಸ್ ಅವರು, ಕಾಡುಗೊಲ್ಲರ ಹೆಸರು ಹೇಳಿ, ಸವಲತ್ತುಗಳನ್ನು ವಂಚಿಸುತಿದ್ದಾರೆ.ಈ ಬಾರಿ ಅವರಿಗೆ ಕಾಡುಗೊಲ್ಲರು ಸರಿಯಾಗಿ ಬುದ್ದಿ ಕಲಿಸಲಿದ್ದೇವೆ. ಶೇ 1ರಷ್ಟು ಜನರಿಗೆ ಶೇ10ರ ಇಡಬ್ಲುಎಸ್ ಮೀಸಲಾತಿ ನೀಡಿದಾಗ ಮಾತನಾಡದ ಗೊಲ್ಲರು, ಯಾದವರು, ಕಾಡುಗೊಲ್ಲರಿಗೆ ಮೀಸಲಾತಿ ಬಂದಾಗ ಅಡ್ಡಗಾಲು ಹಾಕುತ್ತಿದ್ದಾರೆ.ಯಾವ ಶಾಸಕರು, ಸಂಸದರು ನಮ್ಮ ಪರವಾಗಿ ವಿಧಾನಸಭೆಯಲ್ಲಾಗಲಿ, ವಿಧಾನಪರಿಷತ್ತಿನಲ್ಲಾಗಲಿ ಮಾತನಾಡುತ್ತಿಲ್ಲ.
ಮುಂದಿನ ದಿನಗಳಲ್ಲಿ ಇವರೆಲ್ಲರಿಗೂ ಬುದ್ದಿ ಕಲಿಸುತ್ತೇವೆ ಎಂದು ಕಾಡುಗೊಲ್ಲ ಮುಖಂಡರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಲ್ಲಾ ತಾಲೂಕುಗಳಿಂದ ಆಗಮಿಸಿದ್ದ ತಾಲೂಕು ಮುಖಂಡರುಗಳಾದ ತಿಮ್ಮಣ್ಣ ತಿಮ್ಮಪ್ಪನಹಟ್ಟಿ, ಗುಡ್ಡದಹಳ್ಳಿ ಬಸವರಾಜು, ರವಿಯಾದವ್,ಈಶ್ವರಪ್ಪ,ಭದ್ ರೇಗೌಡ,ಶ್ರೀನಿವಾಸ್,ಈರಣ್ಣ,ಗುರಲಿಂ ಗಯ್ಯ,ಸದಾಶಿವು, ಮಲ್ಲಿಕಾರ್ಜುನ್, ದೊಡ್ಡವೀರಯ್ಯ, ಹಾಲೇಗೌಡ,ಕೃಷ್ಣಕುಮಾ ರ್,ಸಿದ್ದರಾಜು, ಜಯಣ್ಣ,ಹೊನ್ನೇಶ್, ಮಂಜುನಾಥ್,ದೊಡ್ಡಯ್ಯ, ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Read E-Paper click here