Thursday, 12th December 2024

ಕಾಗಿಣಾ ನದಿ ಪ್ರವಾಹಕ್ಕೆ ಸಿಲುಕಿ ದಂಪತಿ ಸಾವು

ಕಲಬುರಗಿ: ಕಾಗಿಣಾ ನದಿ ಪ್ರವಾಹಕ್ಕೆ ಸಿಲುಕಿ, ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ದಂಪತಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಜೆಟ್ಟೂರ್ ಗ್ರಾಮದ ಬಳಿ ನಡೆದಿದೆ.

ನೆರೆಯ ತೆಲಂಗಾಣದ ಮಂತಟ್ಟಿ ಗ್ರಾಮದ ಬುಗ್ಗಪ್ಪ (60) ಹಾಗೂ ಅವರ ಪತ್ನಿ ಯಾದಮ್ಮ‌ (55 ) ಸಾವನ್ನಪ್ಪಿರುವ ದಂಪತಿಗಳು. ಬಸಿರಾಬಾದ್ ನಲ್ಲಿ ತರಕಾರಿ ವ್ಯಾಪಾರ ಮುಗಿಸಿಕೊಂಡು ಮನೆಗೆ ಹೋಗುವಾಗ ಈ ಘಟನೆ ಸಂಭವಿಸಿದೆ.

ಮಂಗಳವಾರ ತಡರಾತ್ರಿ ಯಾದಮ್ಮ ಅವರ ಶವ ಪತ್ತೆಯಾದರೆ, ಬುಧವಾರ ಅವರ ಪತಿ ಬುಗ್ಗಪ್ಪ ಅವರ ಶವ ಪತ್ತೆಯಾಗಿದೆ. ಈ ಕುರಿತು ಸುಲೆಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.