Tuesday, 24th September 2024

Kalaburagi News: ಸಿಎಂ ರಾಜೀನಾಮೆ ನೀಡಿ, ತನಿಖೆ ಎದುರಿಸಬೇಕು-ಆಂದೋಲ ಶ್ರೀ

ಕಲಬುರಗಿ: ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶ ಹೈ‌ಕೋರ್ಟ್ ಎತ್ತಿ ಹಿಡಿದ ಹಿನ್ನಲೆ ಸಿಎಂ ರಾಜೀನಾಮೆ ನೀಡಬೇಕು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಆಂದೋಲದ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿಗಿಂತ ಮುಖ್ಯಮಂತ್ರಿ, ಪ್ರಧಾನಿ ದೊಡ್ಡವರಲ್ಲ ಅನ್ನೋದು ನ್ಯಾಯಾಲಯ ಸಾಬೀತು ಪಡಿಸಿದೆ. ರಾಜ್ಯದ ಮುಖ್ಯಮಂತ್ರಿ ತನಿಖೆ ಎದುರಿಸಲು ಸಿದ್ದರಾಗಬೇಕು. ಭ್ರಷ್ಟಾಚಾರ ನಡೆದಿರುವ ಬಗ್ಗೆಯ ದಾಖಲೆಗಳನ್ನು ತಿದ್ದುಪಡಿ ಮಾಡಿದಾಗಲೇ ಆರೋಪಿಯಾಗಿದ್ದಾರೆ. ಇವತ್ತು ಆ ಪ್ರಕರಣವನ್ನು ಹೈಕೋರ್ಟ್ ಸಾಬೀತು ಪಡೆಸಿದೆ. ಹೀಗಾಗಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಸಿದ್ದರಾಮಯ್ಯ ಗೆ ಸಾಥ್ ಕೊಟ್ಟ ಸಚಿವರು ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಬೇಕು. ಸಿದ್ದರಾಮಯ್ಯ ಆಡಳಿತಕ್ಕೆ ಬಂದ ನಂತರ ಹಿಂದು ಧಾರ್ಮಿಕ ಶ್ರದ್ದಾಕೇಂದ್ರ ಮೇಲೆ ದಬ್ಬಾಳಿಕೆ ನಡೆಸಿಕೊಂಡು ಬಂದಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ ವರವಾಗದೆ, ಶಾಪವಾಗಿ ತಟ್ಟಿದೆ. ಹೇಸಿಗೆ ಪಾಪ ತನ್ನ ಮನದಲ್ಲೆ ಇಟ್ಟುಕೊಂಡು ಕಾಶಿಗೆ ಹೊದರೆ ಏನಾಯ್ತೋ ಅನ್ನೋ ಜಾನಪದ ಗೀತೆ ಹೇಳಿ ಸ್ವಾಮೀಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾರ್ಮಿಕವಾಗಿ ಟಾಂಗ್ ಕೊಟ್ಟ ಅವರು, ಆರೋಪ ಕೇಳಿ ಬಂದಾಗ ಮಾರುತಿ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿಕೊಂಡು ಬಂದರು ಸಹ ಅದು ಫಲಪ್ರದವಾಗಲಿಲ್ಲ ಎಂದು ಸಿಎಂ ವಿರುದ್ದ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Kalaburagi_incident: ಸಿದ್ದ ಸಿರಿ ಇಥೆನಾಲ್ ಕಾರ್ಖಾನೆ ಮರು ಸ್ಥಾಪನೆಗೆ ಆಗ್ರಹ, ರೈತ ಮುಖಂಡರ ಬಂಧನ