ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ನಗರದ ಸೂಪರ್ ಮಾರ್ಕೆಟ್ನಲ್ಲಿ ನಿರ್ಮಿಸಿರುವ ನೂತನ ನಗರ ಸಾರಿಗೆ ಬಸ್ ನಿಲ್ದಾಣವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸುವರು.
ಇದೇ ವೇಳೆ, ಕಲ್ಯಾಣರಥ (ಮಲ್ಟಿ ಎಕ್ಸೆಲ್ ಎ.ಸಿ ಸ್ಲೀಪರ್) ಹಾಗೂ ಅಮೋಘವರ್ಷ (ನಾನ್ ಎ.ಸಿ. ಸ್ಲೀಪರ್) ಬಸ್ಗಳ ಲೋಕಾರ್ಪಣೆ ನಡೆಯಲಿದೆ.
ಈ ಸಮಾರಂಭದಲ್ಲಿ ಕಲಬುರಗಿ ವಿಭಾಗ-1 ಹಾಗೂ ವಿಭಾಗ-2ರ ಒಟ್ಟು 121 ಚಾಲಕರು ಅಪಘಾತ ರಹಿತ ಸೇವೆ ಸಲ್ಲಿಸಿದ್ದು, ಅವರಿಗೆ ಬೆಳ್ಳಿ ಪದಕ ವಿತರಣೆಯೂ ಜರುಗಲಿದೆ.
ಸೇವಾ ಅವಧಿಯಲ್ಲಿ ಮೃತಪಟ್ಟ ನಿಗಮದ ನೌಕರರ ಅರ್ಹ ಅವಲಂಬಿತರಿಗೆ ನಿಗಮದಲ್ಲಿ ಕೆಲಸದ ನೇಮಕಾತಿ ಆದೇಶ ಪತ್ರಗಳನ್ನೂ ವಿತರಿಸಲಾಗು ವುದು. ನಿಗಮದಲ್ಲಿ ಸೇವಾ ಅವಧಿಯಲ್ಲಿ ಮೃತಪಟ್ಟ 8 ಅಧಿಕಾರಿ/ಸಿಬ್ಬಂದಿ ಕುಟುಂಬದವರಿಗೆ ತಲಾ ₹10 ಲಕ್ಷ ಆಂತರಿಕ ಗುಂಪು ವಿಮಾ ಪರಿಹಾರದ ಮೊತ್ತದ ಚೆಕ್ಗಳನ್ನೂ ವಿತರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಕೆಕೆಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಪ್ರಕಟಣೆ ಮೂಲಕ ಕೋರಿದ್ದಾರೆ.