Sunday, 15th December 2024

ತಿಪಟೂರಿನ ಸೊಸೆ ಈಗ ಸಾಹಿತ್ಯ ಕಲ್ಪತರು

ತಿಪಟೂರು: ತಿಪಟೂರಿನ “ಬಯಲುಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘವು ” ನೀಡುವ “ಸಾಹಿತ್ಯ ಕಲ್ಪತರು” ರಾಜ್ಯ ಮಟ್ಟದ ಪ್ರಶಸ್ತಿಗೆ ನಮ್ಮ ನಾಡಿನ ಹಿರಿಯ ಕವಯತ್ರಿ, ಅನುವಾದಕರು, ಪ್ರಬಂಧಕಾರರು, ಪ್ರಕಾಶಕರು ಆದ ಪ್ರೊ. ಎಂ.ಆರ್. ಕಮಲ ಅವರು ಭಾಜನರಾಗಿದ್ದಾರೆ.

ಈ ಪ್ರಶಸ್ತಿಯು ಹತ್ತು ಸಾವಿರ ನಗದು, ಫಲಕ ಮತ್ತು ಸನ್ಮಾನಗಳನ್ನು ಒಳಗೊಂಡಿದೆ ಯೆಂದು ಸಂಘದ ಪ್ರಧಾನ ಕರ‍್ಯರ‍್ಶಿ ಶ್ರೀ ಎನ್. ಬಾನುಪ್ರಶಾಂತ್ ಅವರು ತಿಳಿಸಿದ್ದಾರೆ.

ಕಮಲ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಜೀವಮಾನದ ಸಾಧನೆಗಾಗಿ ಅವರನ್ನು ಈ ಪ್ರಶಸ್ತಿಗಾಗಿ ಆಯ್ಕೆಮಾಡಲಾಗಿದೆಯೆಂದು ಪ್ರಶಸ್ತಿ ಘೋಷಣೆಯಲ್ಲಿ ಕಾರ್ಯದರ್ಶಿಯವರು ತಿಳಿಸಿದ್ದಾರೆ.

ಇದು ಸಂಘವು ಕೊಡಮಾಡುತ್ತಿರುವ ಮೂರನೆಯ ಪ್ರಶಸ್ತಿಯಾಗಿದ್ದು ಕಳೆದರೆಡರು “ಸಾಹಿತ್ಯ ಕಲ್ಪತರು” ಪ್ರಶಸ್ತಿಗೆ ಹಿರಿಯ ಕವಿಗಳಾದ ಶ್ರೀ ಡುಂಡಿರಾಜ್ ಮತ್ತು ಶ್ರೀ ಬಿ.ಆರ್. ಲಕ್ಷ್ಮಣರಾವ್ ಅವರುಗಳು ಭಾಜನರಾಗಿದ್ದರು. ಈ ವರ್ಷದ ಪ್ರಶಸ್ತಿಯು ತಿಪಟೂರಿನ ಸೊಸೆ, ಪಕ್ಕದ ಮೇಟಿಕರ‍್ಕೆಯ ಕವಯತ್ರಿ ಎಂ.ಆರ್. ಕಮಲ ಅವರನ್ನು ಆಯ್ಕೆ ಮಾಡಲಾಗಿದೆ.

ಸಾಹಿತಿ ಹೆಚ್.ಎಸ್. ಸತ್ಯನಾರಾಯಣ ಮತ್ತು ಸಾಹಿತಿ ತುರುವೇಕೆರೆ ಪ್ರಸಾದ್ ನೇತೃತ್ವ ಸಮಿತಿಯ ಹಿರಿಯ ಚಿಂತಕ ಉಜ್ಜಜ್ಜಿ ರಾಜಣ್ಣ, ಉಪನ್ಯಾಸಕರಾದ ಎಲ್.ಎಂ. ವೆಂಕಟೇಶ್, ಶಿಕ್ಷಕರಾದ ಪಟ್ಟಾಭಿರಾಮು, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆರ್.ಎಂ. ಕುಮಾರ ಸ್ವಾಮಿ, ಹಿರಿಯ ಪತ್ರರ‍್ತರಾದ ಸಂಜೆವಾಣಿ ರಮೇಶ್, ಸಂಯುಕ್ತ ರ‍್ನಾಟಕದ ಸತೀಶ್ ಯಲದಬಾಗಿ ರವರನ್ನೊಳಗೊಂಡ ಆಯ್ಕೆ ಸಮಿತಿಯು ಶ್ರೀಮತಿ ಎಂ.ಆರ್. ಕಮಲರವರನ್ನು ಆಯ್ಕೆ ಮಾಡಿದ್ದು ಅವರಿಗೆ ಸಂಘವು ಪ್ರೀತಿ ಪರ‍್ವಕವಾದ ಅಭಿನಂದನೆ ಸಲ್ಲಿಸುತ್ತದೆ.

ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ ೧೮ ರಂದು, ಸಂಜೆ ೬ ಗಂಟೆಗೆ, ತಿಪಟೂರು ನಗರದ ಶ್ರೀ ಸತ್ಯ ಗಣಪತಿ ಆಸ್ಥಾನ ಮಂಟಪದಲ್ಲಿ ಜರುಗಲಿದೆ. ಸಮಾರಂಭದಲ್ಲಿ ಶಿಕ್ಷಣ ಸಚಿವರಾದ ಬಿ.ಸಿ. ನಾಗೆಶ್, ಹಿರಿಯ ಪತ್ರರ‍್ತರು, ಬೆಂಗಳೂರು ದೂರರ‍್ಶನ ಕೆಂದ್ರದ ವಿಶ್ರಾಂತ ನರ‍್ದೇಶಕರು ಆಗಿರುವ ಜಿ.ಎಂ. ಶಿರಾಹಟ್ಟಿ, ಮಾಜಿ ಶಾಸಕರಾದ ಕೆ.ಷಡಕ್ಷರಿ, ಮಾದ್ಯಮ ಪರಿಣತ ಎಲ್.ಜಿ. ಜ್ಯೋತೀಶ್ವರ್, ಮುಖಂಡ ಲೋಕೇಶ್ಬರ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.