Saturday, 14th December 2024

ಕಲ್ಪತರು ನಾಡ ಹಬ್ಬ ‘ ಕಲ್ಪೋತ್ಸವ 2022’ ಕಾರ್ಯಕ್ರಮ

ಕಲ್ಪತರು ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ

ತಿಪಟೂರು : ಗ್ರಾಮೀಣ ಭಾಗದ ಬಡವರ ಆಶಾಕಿರಣವಾಗಿರುವ ಕುಮಾರ ಆಸ್ಪತ್ರೆಯ ವೈದ್ಯರಿಗೆ ಕಲ್ಪತರು ರತ್ನ ಪ್ರಶಸ್ತಿ ನೀಡುತ್ತಿರುವುದು ಹೆಚ್ಚಿನ ಜವಾಬ್ದಾರಿಯನ್ನು ನೀಡಿದಂತಾಗಿದೆ ಎಂದು ಕೆರೆಗೋಡಿ ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಗುರು ಪರದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು.

ನಗರದ ಬಯಲು ರಂಗಮoದಿರದಲ್ಲಿ ಶನಿವಾರ ರಾತ್ರಿ ವಿವಿಧ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಕಲ್ಪತರು ನಾಡ ಹಬ್ಬ ‘ ಕಲ್ಪೋತ್ಸವ ೨೦೨೨’ ಕಾರ್ಯಕ್ರಮ ವನ್ನು ಉದ್ಘಾಟಿಸಿ ಕುಮಾರ ಆಸ್ಪತ್ರೆಯ ವೈದ್ಯ ಡಾ.ಶ್ರೀಧರ್‌ಗೆ ಕಲ್ಪತರು ರತ್ನ ಪ್ರಶಸ್ತಿ ನೀಡಿ ಮಾತನಾಡಿದರು.

ಪ್ರಸ್ತುತ ದಿನಮಾನದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವ ಅನಿವಾರ್ಯತೆ ಎದುರಾಗಿದ್ದು, ಉತ್ತಮ ಆರೋಗ್ಯ ವಂತ ಸಮಾಜ ನಿರ್ಮಾಣ ಮಾಡಲು ವೈದ್ಯರ ಸಹಕಾರ ಆಗತ್ಯವಾಗಿದೆ. ಕೊರೊನಾ ಕಾಲಘಟ್ಟದಲ್ಲಿ ಪ್ರತಿಯೊಬ್ಬ ಮಾನವನ ಜೀವದ ಬೆಲೆಯೂ ಅರಿವಾಗಿದೆ. ಅಂತಹ ಸಂದರ್ಭದಲ್ಲಿ ದೃತಿಗೆಡದೇ ರೋಗಗಿಗಳಿಗೆ ಸೇವೆ ಸಲ್ಲಿಸಿದ ವೈದ್ಯರ ಕಾರ್ಯವೈಖರಿ ಸಮಾಜ ಮೆಚ್ಚುವಂತಹದ್ದಾಗಿದೆ. ಸರ್ಕಾರ ಸೇರಿದಂತೆ ಹಲವು ಸಮಘಸಂಸ್ಥೆಗಳು ಗೌರವ ನೀಡುತ್ತಿದ್ದು ತಿಪಟೂರಿನ ಸಂಘ-ಸ0ಸ್ಥೆಗಳ ವತಿ ಯಿಂದ ಗೌರವ ನೀಡುತ್ತಿರುವ ಶ್ಲಾಘನೀಯ ಕಾರ್ಯ ಎಂದರು.

ಕಲ್ಪತರು ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕುಮಾರ ಆಸ್ಪತ್ರೆಯ ವೈದ್ಯ ಡಾ.ಶ್ರೀಧರ್, ವೈದ್ಯ ವೃತ್ತಿಯನ್ನು ಮಾಡುತ್ತಾ ಬಂದಿದ್ದು, ಸಮಾಜದ ಬಡವರ್ಗದ ಜನರಿಗೂ ಉತ್ತಮ ಆರೋಗ್ಯ ದೊರಕುವಂತಾಗಲಿ ಎಂಬ ಉದ್ದೇಶದಿಂದ ಸೇವೆ ಮಾಡು ತ್ತಿದ್ದೇನೆ. ಪ್ರಶಸ್ತಿ, ಸನ್ಮಾನ, ಗೌರವಗಳು ಹೆಚ್ಚಿನ ಜವಾಬ್ದಾರಿ ತರಲಿದ್ದು ಸೇವೆಯನ್ನು ಯಥಾವತ್ತಾಗಿ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ, ಕುಪ್ಪೂರು ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾರ್ಜುನದೇಶೀಕೇಂದ್ರ ಸ್ವಾಮೀಜಿ, ವಾಲ್ಮೀಕಿ ಸಮುದಾಯ ಸಂಜೀವ ಸ್ವಾಮೀಜಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಮಾಜಿ ಶಾಸಕ ಕೆ.ಷಡಕ್ಷರಿ, ಕಾಂಗ್ರೆಸ್ ಮುಖಂಡರುಗಳಾದ ಲೋಕೇಶ್ವರ, ಸಿ.ಬಿ.ಶಶಿಧರ್, ಕೆ.ಟಿ.ಶಾಂತಕುಮಾರ್, ತಿಪಟೂರು ಕೃಷ್ಣ, ಜ್ಯೋತಿಗಣೇಶ್, ಬಜಗೂರು ಮಂಜುನಾಥ್ ಸೇರಿದಂತೆ ಹಲವರು ಇದ್ದರು.