Thursday, 12th December 2024

ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಿಂದ ವೈಭವದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಕೊರಟಗೆರೆ: ಪಟ್ಟಣದ ಶ್ರೀ ರಣಬೈರೇಗೌಡ ಸಾಂಸ್ಕೃತಿಕ ವೇದಿಕೆ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಿಂದ ವೈಭವದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಗೌರವಾಧ್ಯಕ್ಷ ಮತ್ತು ಪಪಂ ಸದಸ್ಯ ಎ.ಡಿ.ಬಲರಾಮಯ್ಯ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದದಲ್ಲಿ ಸುದ್ದಿಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿ ನವೆಂಬರ್ ೧ ರಂದು ಕೊರಟಗೆರೆ ಪಟ್ಟಣದ ಕಾಳಿದಾಸ ಹೈಸ್ಕೂಲ್‌ನ ಕ್ರೀಡಾಂಗಣದಲ್ಲಿ ೬೬ ಕನ್ನಡ ರಾಜ್ಯೋತ್ಸವನ್ನು ಆಚರಿಸುತ್ತಿದ್ದೇವೆ. ಈ ಬಾರಿ ಕ್ಷೇತ್ರದಲ್ಲಿ ಎಲ್ಲಾ ಕೆರೆ ಕಟ್ಟೆ ಹಳ್ಳಗಳು ತುಂಬಿರುವುದರಿ0ದ ಕನ್ನಡ ರಾಜ್ಯೋತ್ಸವನ್ನು ಅದ್ದೂರಿಯಾಗಿ ಅರ್ಥ ಪೂರ್ಣವಾಗಿ ಆಚರಿಸಲಾಗುವುದು.

ಅಂದು ಕಾಳಿದಾಸ ಹೈಸ್ಕೂಲ್ ಮೈದಾನದಲ್ಲಿ ಸಂಜೆ ೬ ಗಂಟೆಗೆ ಆಟೋ ಚಾಲಕರಿಗೆ ಸಮವಸ್ತç ವಿತರಣೆ, ಸಮಾಜದ ವಿವಿಧ ಕ್ಷೇತ್ರದ ಗಣ್ಯರಿಗೆ ಸನ್ಮಾನ ಹಾಗೂ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಸಾವಿರಾರು ಜನರು ಈ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳುವರು. ಇದರ ಸಂಪೂರ್ಣ ಸಹಕಾರವನ್ನು ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ವಹಿಸುವರು ಎಂದರು.

ಡಾ.ಜಿ.ಪರಮೇಶ್ವರ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಪ.ಪಂ.ಸದಸ್ಯ ಕೆ.ಆರ್.ಓಬಳರಾಜು ಮಾತನಾಡಿ ಕನ್ನಡ ರಾಜ್ಯೋತ್ಸವ ದಿನದಂದು ಸಂಜೆ ೪. ಗಂಟೆಗೆ ಪಟ್ಟಣದ ಊರ್ಡಿಗೆರೆ ಕ್ರಾಸ್‌ನ ಕನಕ ವೃತ್ತದಿಂದ ತಾಯಿ ಭುವನೇಶ್ವರಿ ಭಾವಚಿತ್ರವನ್ನು ಆಟೋ ಚಾಲಕರು ಮತ್ತು ವಿವಿಧ ಸಂಘ ಸಂಸ್ಥೆಗಳೊ0ದಿಗೆ ಮೆರವಣಿಗೆ ಏರ್ಪಡಿಸಲಾಗುವುದು. ಅಂದು ಸಾವಿರಾರು ಜನರು ಕನ್ನಡಾಂಬೆಯ ಭಾವಚಿತ್ರ ಇರುವ ಟಿ-ಶರ್ಟ್ ಧರಿಸಿ ಕನ್ನಡ ಶಾಲನ್ನು ಅಲಂಕರಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಾಗುವುದು ಎಂದರು.

ಪಟ್ಟಣದ ಪ್ರತಿ ಮನೆ ಹಾಗೂ ಅಂಗಡಿಗಳಿಗೆ ಕನ್ನಡ ಬಾವುಟ ನೀಡಿ ನಮ್ಮ ನಾಡಿನ ಧ್ವಜವನ್ನು ಮನೆಗಳ ಮೇಲೆ ಆರಿಸು ವಂತೆ ಮಾಡಲಾಗುವುದು. ಪಟ್ಟಣದ ತುಂಬಾ ಕನ್ನಡ ಬಾವುಟ ಮತ್ತು ತೋರಣಗಳಿಂದ ಅಲಂಕರಿಸಿ ಕನ್ನಡ ಹಬ್ಬವನ್ನು ಮಾಡ ಲಾಗುವುದು. ಪ್ರತಿಯೊಬ್ಬ ಕನ್ನಡಿಗನನ್ನು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಾಗುವುದು. ಇದರ ಸಂಪೂರ್ಣ ನೇತೃತ್ವ ವನ್ನು ನಮ್ಮ ಕ್ಷೇತ್ರದ ಶಾಸಕರಾದ ಡಾ.ಜಿ.ಪರಮೇಶ್ವರ್ ರವರು ವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರುಗಳಾದ ಎಲ್.ರಾಜಣ್ಣ, ತುಮುಲ್ ನಿರ್ದೇಶಕ ಈಶ್ವರಯ್ಯ, ಪ.ಪಂ.ಸದಸ್ಯರುಗಳಾದ ನಾಗರಾಜು, ನಂದೀಶ್, ಮೈಲಾರಪ್ಪ, ಗಟ್ಲಹಳ್ಳಿ ಕುಮಾರ್, ಮಕ್ತಿಯಾರ್, ಸೈಯ್ಯದ್ ಸೈಫುಲ್ಲಾ, ರಾಘವೇಂದ್ರ, ಗೊಂದಿಹಳ್ಳಿ ರಂಗರಾಜು, ವಿನಯ್‌ಕುಮಾರ್, ಸುರೇಶ್.ಕೆ.ಎಂ., ಮಹೇಶ್, ಝಬೇರ್, ಮಹಮ್ಮದ್ ಇಸ್ಮಾಯಿಲ್, ಅರವಿಂದ್, ಜಯಮ್ಮ, ಲಕ್ಷö್ಮಮ್ಮ, ದೊಡ್ಡಯ್ಯ, ದೀಪಕ್, ಭೈರೇಶ್, ರಂಜಿತ್ ಸೇರಿದಂತೆ ಇತರರು ಭಾಗವಹಿಸಿ ದ್ದರು.