Friday, 22nd November 2024

ಫೆಬ್ರವರಿಯಲ್ಲಿ ಎರಡು ಹಂತದಲ್ಲಿ ಕರಾವಳಿ ಧ್ವನಿ ಯಾತ್ರೆ

ಮಂಗಳೂರು: ಪ್ರಜಾಧ್ವನಿ ಮಾದರಿಯಲ್ಲಿಯೇ ‘ಕರಾವಳಿ ಧ್ವನಿ ಯಾತ್ರೆ’ ನಡೆಸಲು ಕಾಂಗ್ರೆಸ್ ಸಭೆಯಲ್ಲಿ ನಿರ್ಧರಿಸಲಾಗಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ನಡೆದ ಆರು ಜಿಲ್ಲೆಗಳ ಪಕ್ಷದ ಪ್ರಮುಖರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕ ನಡೆಸಿರುವ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ಫೆಬ್ರವರಿ 5ರಿಂದ ಫೆಬ್ರವರಿ9ರವರೆಗೆ ಮೊದಲ ಹಂತದ ಕರಾವಳಿ ಧ್ವನಿ ರಥಯಾತ್ರೆ ಆರಂಭವಾಗಲಿದೆ. ಬಳಿಕ ಎರಡನೇ ಹಂತದ ರಥಯಾತ್ರೆ ಫೆಬ್ರವರಿ 16 ರಿಂದ ಮಾರ್ಚ್ 10ರವರೆಗೆ ಎಲ್ಲಾ ಕಡೆ ಸಂಚರಿಸ ಲಿದೆ.

ಕರಾವಳಿ ಧ್ವನಿ ಯಾತ್ರೆಯು ಫೆಬ್ರವರಿ 5ರಂದು ಸುಳ್ಯದಲ್ಲಿ ಆರಂಭಗೊಳ್ಳಲಿದೆ. 30 ದಿನಗಳ ಕಾಲ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕ ಮಗಳೂರು ಮತ್ತು ಮಡಿಕೇರಿಯಲ್ಲಿ ಕರಾವಳಿ ಧ್ವನಿ ಯಾತ್ರೆ ನಡೆಯಲಿದೆ‌.‌ ಬಿ.ಕೆ ಹರಿಪ್ರಸಾದ್, ಆರ್.ವಿ ದೇಶಪಾಂಡೆ, ಮಧು ಬಂಗಾರಪ್ಪ ಸೇರಿ ದಂತೆ ಕರಾವಳಿಯ ಪ್ರಮುಖ ನಾಯಕರು ಈ ಯಾತ್ರೆಯ ನೇತೃತ್ವ ವಹಿಸಲಿದ್ದಾರೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಯಾತ್ರೆ ಸಂಚರಿಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

ಬಳಿಕ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ ಸುರ್ಜೇವಾಲ, “ಕರಾವಳಿಯನ್ನು ಬಿಜೆಪಿ ಕೋಮು ವಿಷ ಭಿತ್ತಿ ಫ್ಯಾಕ್ಟರಿ ಮಾಡಿಕೊಂಡಿದೆ. ಬಸವರಾಜ ಬೊಮ್ಮಾಯಿ ಅತ್ಯಂತ ದುರ್ಬಲ ಮುಖ್ಯಮಂತ್ರಿ, ಗೃಹ ಸಚಿವ ಕಲರ್ ನೋಡಿ ಆಡಳಿತ ಮಾಡಿದರೆ ಸಾಮರಸ್ಯ ನೆಲೆಸಲು ಸಾಧ್ಯವೇ..? ಬಿಜೆಪಿಯ ಕೋಮುವಾದದ ಫ್ಯಾಕ್ಟರಿಯನ್ನು ಸಾಮರಸ್ಯದ ಫ್ಯಾಕ್ಟರಿ ಮಾಡುತ್ತೇವೆ ಎಂದರು.

 
Read E-Paper click here