Thursday, 21st November 2024

ಇಂದು ರಾಜ್ಯ ಬಜೆಟ್

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ 15ನ ಬಾರಿಯ ಚೊಚ್ಚಲ ರಾಜ್ಯ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಲು ಆರಂಭಿಸಿದ್ದಾರೆ.

ವಿಧಾನಸಭೆಯಲ್ಲಿ ತಮ್ಮ ಚೊಚ್ಚಲ ಅಯವ್ಯಯವನ್ನು ಮಂಡಿಸುತ್ತ ಮಾತನಾಡಿದ ಅವರು, ನನ್ನ 15ನೇ ಬಜೆಟ್ ಅನ್ನು ಮಂಡಿಸುತ್ತಿದ್ದೇನೆ. ಬಸವಾದಿ ತತ್ವ ನಮಗೆ ಪ್ರೇರಣೆಯಾಗಿದೆ. ದಾಸರ ಚಿಂತನೆ, ಸಂಪತ್ತಿನ ಸಮಾನ ಹಂಚಿಕೆಗೆ ಆಧಾರವಾಗಿದೆ ಎಂದರು.

ಆಗದು ಎಂದು, ಕೈಲಾಗದು ಎಂದು, ಕೈ ಕಟ್ಟಿ ಕುಳಿತರೇ ಸಾಗದು ಕೆಲಸವು ಮುಂದೆ ಎಂಬುದಾಗಿ ರಾಜ್ ಕುಮಾರ್ ಅವರ ಸಂಪತ್ತಿಗೆ ಸವಾಲ್ ಹಾಡನ್ನು ಉಲ್ಲೇಖಿಸುತ್ತಾ, ಆರ್ ಎನ್ ಜಯಗೋಪಾಲ್ ಹಾಡು ಹಾಡಿ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಆರಂಭಿಸಿದರು.

ಅದಕ್ಕೂ ಮುನ್ನ ಇಂದು ಅವರ ನೇತೃತ್ವದಲ್ಲಿ ನಡೆದಂತ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಯನ್ನು ಪಡೆದಿದ್ದಾರೆ.

ಸಿಎಂ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯ ಬಜೆಟ್ ಮಂಡನೆಗೂ ಮುನ್ನವೇ ವಿಶೇಷ ಸಚಿವ ಸಂಪುಟ ಸಭೆ ವಿಧಾನಸೌಧದಲ್ಲಿ ನಡೆಯಿತು. ಈ ಸಂಪುಟ ಸಭೆಯಲ್ಲಿ ರಾಜ್ಯ ಬಜೆಟ್ ಸಲ್ಲಿಸಿ ಅನುಮೋದನೆ ಪಡೆದರು.