ಚಿಕ್ಕನಾಯಕನಹಳ್ಳಿ : ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಸಂಬ೦ಧಿಸಿದ೦ತೆ ಸೆ. ೨೯ರ ಶುಕ್ರವಾರ ಕರೆ ನೀಡಲಾಗಿರುವ ಕರ್ನಾಟಕ ಬಂದ್ ಗೆ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಬೆಂಬಲ ಸೂಚಿಸಿದೆ.
ಈ ಕುರಿತು ಪತ್ರಿಕೆಯೊಂದಿಗೆ ಪ್ರಧಾನ ಕಾರ್ಯದರ್ಶಿ ಯದುಕುಮಾರ್ ಮಾತನಾಡಿ ಕಾವೇರಿ ನೀರಿನ ವಿಚಾರದಲ್ಲಿ ತಮಿಳು ನಾಡು ಹಠಮಾರಿ ಧೋರಣೆ ಅನುಸರಿಸುತ್ತಿದೆ. ಕಾವೇರಿ ನೀರು ಸಾಕಷ್ಟು ಇದ್ದಾಗ ಆ ನೀರನ್ನು ತಮಿಳುನಾಡಿಗೆ ಹರಿಸಿದ್ದೇವೆ. ಈಗ ಕುಡಿಯಲು ನಮಗೆ ನೀರಲ್ಲದಿದ್ದರೂ ತಮಿಳುನಾಡಿಗೆ ಹೇಗೆ ನೀರು ಬಿಡಬೇಕು ಎಂದು ಪ್ರಶ್ನಿಸಿದರು. ಕರ್ನಾಟಕ ಬಂದ್ ಗೆ ಸಂಪೂರ್ಣ ಬೆಂಬಲ ನೀಡುವಂತೆ ತಾಲ್ಲೂಕಿನ ಜನತೆಗೆ ರೈತ ಸಂಘಗಳು ಮನವಿ ಮಾಡಿದೆ.