ತುಮಕೂರು : ಆಧುನಿಕ ಬದುಕಿನ ಕ್ರಮಗಳ ನಡುವೆ ಕಳೆದುಹೋಗುತ್ತಿರುವ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಹಿರಿಮೆ ಅರಿವಾಗುವುದಕ್ಕೆ ಸುಗ್ಗಿಯಂಥ ಹಬ್ಬಗಳು ಅಗತ್ಯವಾಗಿ ಬೇಕು ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಬಿ. ಜಯಣ್ಣ ಹೇಳಿದರು.
ವಿದ್ಯಾವಾಹಿನಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ವಿದ್ಯಾನಿಧಿ ಆಯೋಜಿಸಿದ ವಿ-ಸುಗ್ಗಿ-2024 ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಅತಿಥಿಗಳಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಹೆಚ್ಚಿನ ಮಕ್ಕಳಿಗೆ ಇಂದು ಹಲವು ಬಗೆಯ ಧವಸಧಾನ್ಯಗಳ ಪರಿಚಯವೂ ಇರಲಿಕ್ಕಿಲ್ಲ ಎಂಬ ಪರಿಸ್ಥಿತಿಯಿದೆ. ಹಳ್ಳಿಯ ಬದುಕಿನ ರೀತಿ, ರೈತರ ಶ್ರಮ ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ವಿ-ಸುಗ್ಗಿ ನೆರವಾಗುತ್ತದೆ. ಅಲ್ಲದೇ ಪುನರಾವರ್ತನೆ, ಪರೀಕ್ಷೆಗಳ ಒತ್ತಡದಲ್ಲಿರುವ ಮಕ್ಕಳಿಗೆ ಕೊಂಚ ಮನಸ್ಸು ಹಗುರವಾಗಲು ಇದು ನೆರವಾಗುತ್ತದೆ ಎಂದರು.
ವಿದ್ಯಾನಿಧಿ ಉಪಪ್ರಾಂಶುಪಾಲ ವೇದಮೂರ್ತಿ ಉಪಸ್ಥಿತರಿದ್ದರು.
ಸುಗ್ಗಿ ಸಂಭ್ರಮದ ವಿಶೇಷ ಆಕರ್ಷಣೆಯಾಗಿ ಧವಸಧಾನ್ಯಗಳಿಂದ ರಂಗವಲ್ಲಿ ಬಿಡಿಸಲಾಗಿತ್ತು. ಗುಡಿಸಲಿನ ಮಾದರಿಯ ಜತೆಗೆ ಕೃಷಿಕಾರ್ಯಗಳಲ್ಲಿ ಬಳಕೆ ಮಾಡುವ ಉಪಕರಣಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಲವು ರೀತಿಯ ತಿನಿಸುಗಳ ಅಂಗಡಿ ಇಟ್ಟಿದ್ದರು.
ಬೆಂಕಿಯಿಲ್ಲದೆ ಅಡುಗೆ, ಮದರಂಗಿ, ಕೇಶವಿನ್ಯಾಸ, ತರಕಾರಿ, ಹಣ್ಣಿನಿಂದ ವಿವಿಧ ಮಾದರಿ, ಬಸ್ಕಿ ಹೊಡೆಯುವುದು, ಪುಶ್ ಅಪ್, ಹಗ್ಗ ಜಗ್ಗಾಟ ಮೊದ ಲಾದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಂಭ್ರಮದಿAದ ಭಾಗವಹಿಸಿದರು. ರ‍್ಯಾಂಪ್ ವಾಕ್, ಫ್ಲಾಶ್‌ಮಾಬ್ ಸೇರಿದಂತೆ ಅನೇಕ ಸಾಂಸ್ಕೃತಿಕ ವೈವಿಧ್ಯಗಳನ್ನು ವಿದ್ಯಾರ್ಥಿ,ನಿಯರು ಪ್ರದರ್ಶಿಸಿದರು.