Saturday, 14th December 2024

ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಸಿಇಟಿ ೨೦೨೪ ಪರೀಕ್ಷೆ

ತಿಪಟೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಯುವ ಸಿಇಟಿ ೨೦೨೪ ಪರೀಕ್ಷೆ ಗಳನ್ನು ನಗರದ ಮೂರು ಕೇಂದ್ರಗಳಲ್ಲಿ ಬುಧವಾರ ಮತ್ತು ಗುರುವಾರ ನಡೆಸಲಾಗುವುದು ಎಂದು ತಾಲೂಕು ನೋಡಲ್ ಪ್ರಾಂಶುಪಾಲ ಎಂ.ಡಿ ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಮ್ಮ ಜಿಲ್ಲೆಯಲ್ಲಿ ಅತ್ಯಧಿಕ ೮೮೮ ವಿದ್ಯಾರ್ಥಿಗಳು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬರೆಯಲಿದ್ದು ೭೨೦ ವಿದ್ಯಾರ್ಥಿಗಳು ಬಾಲಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬರೆಯುತ್ತಿದ್ದು ಕಲ್ಪತರು ಪದವಿಪೂರ್ವ ಕಾಲೇಜಿನಲ್ಲಿ ೩೬೦ ವಿದ್ಯಾರ್ಥಿಗಳು ಒಟ್ಟಾರೆಯಾಗಿ ೧೯೪೮ ನಗರದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಇಂದು ಬೆಳಗ್ಗೆ ೧೦:೩೦ಕ್ಕೆ ಜೀವಶಾಸ್ತ್ರ, ೧೨:೩೦ಕ್ಕೆ ಗಣಿತಶಾಸ್ತ್ರ ಬರೆಯಲಿದ್ದು ನಾಳೆ ಶುಕ್ರವಾರ ಇದೇ ಸಮಯದಲ್ಲಿ ಬೌತಶಾಸ್ತ್ರ ಮತ್ತು ರಾಸಾಯನಶಾಸ್ತ್ರ ಪರೀಕ್ಷೆ ವಿದ್ಯಾರ್ಥಿಗಳು ಬರಲಿದ್ದಾರೆ.

ಸುಸೂತ್ರವಾಗಿ ನಡೆಸಲು ವ್ಯವಸ್ಥಿತವಾದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪರೀಕ್ಷಾರ್ಥಿಗಳು ಯಾವುದೇ ಕೈಗಡಿಯಾರ, ಮೊಬೈಲ್ ತುಂಬು ತೋಳಿನ ಶರ್ಟ್, ಮತ್ತು ಶೂಗಳನ್ನು ಧರಿಸುವಂತಿಲ್ಲ ವಿದ್ಯಾರ್ಥಿನಿಯರು, ಆವರಣ ಕ್ಯಾಲುಕುಲೇಟರ್ , ಬ್ಲೂಟೂತ್, ವೈಟ್ ಫ್ಲೂಯಿಡ್ ಎಲೆಕ್ಟ್ರಾನಿಕ್ ಉಪಕರಣಗಳು, ಪೇಪರ್ ಚೀಟಿ ಪುಸ್ತಕ ಮುಂತಾದವುಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.