ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ಯುವ ಘಟಕ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಉದ್ಘಾ ಟಿಸಿ ಮಾತನಾಡಿದರು.
ವೀರಶೈವ-ಲಿಂಗಾಯತ ಸಮಾಜ ಈ ಹಿಂದೆ ಸ್ವಲ್ಪ ಆರ್ಥಿಕ ಹಾಗೂ ಸಾಮಾಜಿಕವಾಗಿ ಉತ್ತಮವಾಗಿತ್ತು. ಆದರೆ ಕೃಷಿಯನ್ನೇ ನಂಬಿದ್ದ ಸಮುದಾಯವು ಕೃಷಿ ಕಾಯಕಕ್ಕೆ ದೊಡ್ಡ ಹೊಡೆತ ಪರಿಣಾಮ, ಸಮುದಾಯ ಹಾಗೂ ಒಳ ಪಂಗಡಗಳು ತೀವ್ರ ಕಷ್ಷಕ್ಕೆ ಒಳಗಾಗಿವೆ. ಹೀಗಾಗಿ ಒಬಿಸಿ ಪಟ್ಟಿಯಲ್ಲಿ ಸೇರಿಸುವುದರ ಜತೆಗೆ ಒಳ ಮೀಸಲಾತಿ ಕಲ್ಪಿಸಿದಲ್ಲಿ ಮಾತ್ರ ನ್ಯಾಯ ಸಿಕ್ಕಂತಾಗುತ್ತದೆ ಎಂದು ಹೇಳಿದರು.
ವೀರಶೈವ-ಲಿಂಗಾಯತ ಸಮುದಾಯ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರದ ಪರಿಣಾಮ ಕೇಂದ್ರದ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಹುದ್ದೆಗಳನ್ನು ಪಡೆಯಲಿಕ್ಕಾಗುತ್ತಿಲ್ಲ. ಅದೇ ರೀತಿ ಕೇಂದ್ರೀಯ ವಿವಿ ಸೇರಿ ಇತರ ಸಂಸ್ಥೆಗಳಲ್ಲಿ ಸಮಾಜದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಮಾಜದ ತಾಳ್ಮೆ ಯನ್ನು ಪರೀಕ್ಷಿಸದೇ ಬೇಡಿಕೆ ಸಾಕಾರಗೊಳಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಲು ಹಿಂದೇಟು ಹಾಕುವುದಿಲ್ಲ ಖಂಡ್ರೆ ಗುಡುಗಿದರು.
ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಸಹ ಮಾತನಾಡಿದರು. ಚೌದಾಪುರಿ ಹಿರೇಮಠದ ರಾಜಶೇಖರ ಶಿವಾ ಚಾರ್ಯರು, ಮಾದನಹಿಪ್ಪರಗಾ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.