ಬೆಂಗಳೂರು: ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರಾದ ಕೈನೆಟಿಕ್ ಗ್ರೀನ್ ಎನರ್ಜಿ ಮತ್ತು ಪವರ್ ಲಿಮಿಟೆಡ್ ಸೊಲ್ಯೂಷನ್ಸ್ ಮೈಸೂರಿನಲ್ಲಿ ಹೊಸ ಡೀಲರ್ ಶಿಪ್ ಉದ್ಘಾಟನೆ ಮಾಡಿದೆ.
ಶ್ರೀ ಮಂಗೀಲಾಲ್ ಪದಮ್ ಚಂದ್ ಅವರು ಹಿಂದೂಸ್ತಾನ್ ಎಂಟರ್ ಪ್ರೈಸಸ್ ಗ್ರೀನ್ ಎಂಬ ಹೆಸರಿನ ಈ ಡೀಲರ್ ಶಿಪ್ ನ ಮಾಲೀಕತ್ವ ಹೊಂದಿದ್ದಾರೆ ಮತ್ತು ಅವರು ಈ ಡೀಲರ್ ಶಿಪ್ ಅನ್ನು ನಿರ್ವಹಿಸುತ್ತಾರೆ. ಡೀಲರ್ ಶಿಪ್ ನ ಪೂರ್ಣ ವಿಳಾಸ ಹೀಗಿದೆ- ಎಲ್397/ಎ, ಎಲ್42/ಎ, ಇರ್ವಿನ್ ರೋಡ್ ಲಸ್ಕರ್ ಮೊಹಲ್ಲಾ, ಮೈಸೂರು 570001. ಈ ಹೊಸ ಡೀಲರ್ ಶಿಪ್ ಉದ್ಘಾಟನೆಯು ಕರ್ನಾಟಕದಲ್ಲಿ ತನ್ನ ಉಪಸ್ಥಿತಿಯನ್ನು ವಿಸ್ತರಿಸುವ ಕಂಪನಿಯ ಬದ್ಧತೆಗೆ ಪೂರಕವಾಗಿ ಜರುಗಿದೆ.
ಕೈನೆಟಿಕ್ ಗ್ರೀನ್ ನ 2 ವೀಲರ್ಸ್ ವಿಭಾಗದ ಅಧ್ಯಕ್ಷರಾದ ಶ್ರೀ ಪಂಕಜ್ ಶರ್ಮಾ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ. ಶರ್ಮಾ ಅವರು ಹವಾಮಾನ ಬದಲಾವಣೆ ಸಮಸ್ಯೆ ಮತ್ತು ಮಾಲಿನ್ಯ ನಿವಾರಣೆಯಲ್ಲಿ ಎಲೆಕ್ಟ್ರಿಕ್ ವಾಹನಗಳು (ಇವಿಗಳು) ವಹಿಸುವ ಪ್ರಮುಖ ಪಾತ್ರದ ಕುರಿತು ಚರ್ಚೆ ನಡೆಸಿದರು. ಜೊತೆಗೆ ಸುಸ್ಥಿರ ಭವಿಷ್ಯ ಸಾಧಿಸುವ ನಿಟ್ಟಿನಲ್ಲಿ ಅವುಗಳ ಪ್ರಾಮುಖ್ಯತೆ ಮತ್ತು ಅವುಗಳನ್ನು ವ್ಯಾಪಕವಾಗಿ ಅಳವಡಿಸುವ ಅಗತ್ಯದ ಕುರಿತು ತಿಳಿಸಿದರು.
ಮೈಸೂರಿನಲ್ಲಿರುವ ಕೈನೆಟಿಕ್ ಗ್ರೀನ್ ನ ಹೊಸ ಡೀಲರ್‌ಶಿಪ್ ವಿಶಾಲವಾದ ಜಾಗವನ್ನು ಹೊಂದಿದ್ದು, ಅಲ್ಲಿ ಸರ್ವೀಸ್ ಗಾಗಿ ಉತ್ತಮ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ. ಭಾರತೀಯ ಗ್ರಾಹಕರ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಇ-ಲೂನಾ, ಇ- ಜುಲು ಮತ್ತು ಇ- ಜಿಂಗ್ ಮುಂತಾದ ಕೈನೆಟಿಕ್ ಗ್ರೀನ್ ನ ವೈವಿಧ್ಯಮಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಡೀಲರ್ ಶಿಪ್ ನಲ್ಲಿ ಪ್ರದರ್ಶಿಸಲಾಗುತ್ತದೆ. ಈ ಮಾಡೆಲ್ ಗಳನ್ನು ಸುಸ್ಥಿರತಾ ಕ್ರಮಗಳಿಂದ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ರಚಿಸಲಾಗಿದ್ದು, ಆಕರ್ಷಕ, ಗಮನಾರ್ಹ ಮತ್ತು ಮನಸೆಳೆಯುವ ವಿನ್ಯಾಸಗಳನ್ನು ಹೊಂದಿದೆ.
ಡೀಲರ್ ಶಿಪ್ ವಿಸ್ತರಣೆಯ ಕುರಿತು ಮಾತನಾಡಿದ ಕೈನೆಟಿಕ್ ಗ್ರೀನ್ ನ 2 ವೀಲರ್ ಬಿಸಿನೆಸ್ ಅಧ್ಯಕ್ಷ ಪಂಕಜ್ ಶರ್ಮಾ ಅವರು, “ನಮ್ಮ ಹೊಸ ಡೀಲರ್ ಶಿಪ್ ಅನ್ನು ಮೈಸೂರಿನಲ್ಲಿ ಉದ್ಘಾಟಿಸಲು ನಾವು ಸಂತೋಷ ಗೊಂಡಿದ್ದೇವೆ. ಕರ್ನಾಟಕದಾದ್ಯಂತ ನಮ್ಮ ಹೆಜ್ಜೆಗುರುತನ್ನು ವಿಸ್ತರಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಭಾರತದಾದ್ಯಂತ ಎಲೆಕ್ಟ್ರಿಕ್ ಸಾರಿಗೆ ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಮತ್ತು ಎಲೆಕ್ಟ್ರಿಕ್ ಸಾರಿಗೆಯನ್ನು ಮುಖ್ಯವಾಹಿನಿಗೆ ತರುವ ನಮ್ಮ ಬದ್ಧತೆಗೆ ಈ ಡೀಲರ್ ಶಿಪ್ ಉದ್ಘಾಟನೆ ಸಾಕ್ಷಿಯಾಗಿದೆ. ನಮ್ಮ ಶೋರೂಮ್ ನ ಶ್ರದ್ಧಾವಂತ ತಂಡವು ಪರಿಣಿತ ಮಾರ್ಗದರ್ಶನ ನೀಡುವ ಮೂಲಕ ಗ್ರಾಹಕರಿಗೆ ಸಹಾಯ ಮಾಡುತ್ತದೆ. ಗ್ರಾಹಕರು ಖರೀದಿ ಸಂದರ್ಭದಲ್ಲಿ ಅತ್ಯುತ್ತಮ ಅನುಭವ ಗಳಿಸುವಂತೆ ನೋಡಿಕೊಳ್ಳುತ್ತದೆ. ಸರ್ವೀಸ್ ಸಪೋರ್ಟ್ ಒದಗಿಸುತ್ತದೆ. ಗ್ರಾಹಕರು ವಿವೇಕಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯವಾಗುವಂತೆ ಮಾಹಿತಿ ನೀಡುತ್ತದೆ” ಎಂದು ಹೇಳಿದರು.
ಇದಕ್ಕೆ ಪೂರಕವಾಗಿ ಮಾತನಾಡಿದ ಹಿಂದೂಸ್ತಾನ್ ಎಂಟರ್ ಪ್ರೈಸಸ್ ಗ್ರೀನ್ ಮೈಸೂರಿನ ಮಾಲಿಕರಾದ ಶ್ರೀ ಮಂಗೀಲಾಲ್ ಪದಮ್ ಚಂದ್, “ಕೈನೆಟಿಕ್ ಗ್ರೀನ್ ಸಂಸ್ಥೆಯ ಜೊತೆಗೆ ಪಾಲುದಾರರಾಗಲು ನಾವು ತುಂಬಾ ಉತ್ಸುಕರಾಗಿದ್ದೇವೆ ಮತ್ತು ಅವರು ನಮ್ಮ ತೋರಿಸಿದ ಬೆಂಬಲ ಮತ್ತು ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಕೃತಜ್ಞರಾಗಿರುತ್ತೇವೆ. ಗ್ರಾಹಕರಿಗೆ ಉನ್ನತ ದರ್ಜೆಯ ಸೇವೆ ಮತ್ತು ಪರಿಣತ ಮಾಹಿತಿ ಒದಗಿಸುವ ಮೂಲಕ ಅವರು ವಿವೇಕಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಗ್ರಾಹಕರಿಗೆ ಸಹಾಯ ಮಾಡುವುದು, ಜೊತೆಗೆ ಆ ಮೂಲಕ ಅವರು ವಿಶ್ವ ದರ್ಜೆಯ ಸರ್ವೀಸ್ ಪಡೆಯುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಇವಿ ಮಾರುಕಟ್ಟೆಯು ತ್ವರಿತ ಬೆಳವಣಿಗೆ ಕಾಣುತ್ತಿರುವ ಈ ಹೊತ್ತಿನಲ್ಲಿ ಮೈಸೂರಿನಲ್ಲಿ ಪರಿಸರ ಸ್ನೇಹಿ ಸಾರಿಗೆ ಉತ್ಪನ್ನಗಳನ್ನು ಒದಗಿಸುವಲ್ಲಿ ಈ ಡೀಲರ್ ಶಿಪ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನನಗೆ ವಿಶ್ವಾಸವಿದೆ” ಎಂದು ಹೇಳಿದರು.