Sunday, 15th December 2024

ಇಂದಿನಿಂದ ಮೂರು ದಿನ ಕಿತ್ತೂರು ಉತ್ಸವ

ಬೆಳಗಾವಿ : ಜಿಲ್ಲೆಯ ಚನ್ನಮ್ಮನ್ನ ಕಿತ್ತೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ರಾಜ್ಯ ಸರ್ಕಾರವು ಕಿತ್ತೂರು ಉತ್ಸವವನ್ನು ರಾಜ್ಯ ಮಟ್ಟದಲ್ಲಿ ಉತ್ಸವವಾಗಿ ಆಚರಿಸುತ್ತಿದೆ.

ಸಂಜೆ 7 ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಿತ್ತೂರು ಉತ್ಸವ ಉದ್ಘಾಟಿಸ ಲಿದ್ದು, ಅ.23,24,25 ರಂದು ಕಾರ್ಯಕ್ರಮಗಳು ನಡೆಯಲಿವೆ. ಮೂರು ದಿನಗಳ ಉತ್ಸವ ದಲ್ಲಿ ಮೂರು ವೇದಿಕೆಗಳನ್ನು ನಿರ್ಮಿಸಲಾಗಿದೆ.

ಕಿತ್ತೂರು ರಾಣಿ ಚನ್ನಮ್ಮ ಮುಖ್ಯ ವೇದಿಕೆ ಹಾಗೂ ರಾಜಾ ಮಲ್ಲಸರ್ಜ ವೇದಿಕೆ ಹಾಗೂ ಸಂಗೊಳ್ಳಿ ರಾಯಣ್ಣ ವೇದಿಕೆಗಳಲ್ಲಿ ಮೂರು ದಿನಗಳವರೆಗೆ ವೈದ್ಯವಿದ್ಯಮಯ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅ.24 ರಂದು ಮಹಿಳೆಯರಿಗೆ ಮೀಸಲಿಡ ಲಾಗಿದೆ. ಮಹಿಳಾ ಸಬಲೀಕರಣ ಬಗ್ಗೆ ವಿಚಾರಗೋಷ್ಠಿಗಳು ಜರುಗಲಿವೆ.