Sunday, 15th December 2024

ಕೊಡಗು ಜಿಲ್ಲೆಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ: ಕರ್ನಾಟಕ ಅರಣ್ಯ ಇಲಾಖೆಯ ಜೊತೆಗೆ ಬಿಸ್ಲೆರಿ ಇಂಟರ್‌ನ್ಯಾಷನಲ್ ಸಹಭಾಗಿತ್ವ

ಜಿಲ್ಲೆಯಲ್ಲಿ ಮರುಬಳಕೆ ಚಟುವಟಿಕೆಯನ್ನು ನಡೆಸಲು ಬಿಸ್ಲೆರಿ ಜೊತೆಗೆ ಕರ್ನಾಟಕ ಅರಣ್ಯ ಇಲಾಖೆಯಿಂದ ಅಭಿಯಾನ

ಮಲ್ದರೆ: ಕೊಡಗು ಜಿಲ್ಲೆಯ ಮಲ್ದರೆಯಲ್ಲಿ ದೊಡ್ಡ ಮಟ್ಟದ ಅರಣ್ಯ ಸ್ವಚ್ಛತೆ ಕಾರ್ಯಕ್ರಮವನ್ನು ಬಿಸ್ಲೆರಿ ಇಂಟರ್‌ನ್ಯಾಷನಲ್ ಸಹಭಾಗಿತ್ವದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಆಯೋಜಿಸಿದೆ. ಮಲ್ದರೆ ಯಿಂದ ಮುತ್ತೂರು ಅಭಯಾರಣ್ಯದವರೆಗೆ ಸುಮಾರು 10 ಕಿ.ಮೀವರೆಗೆ ಸ್ವಚ್ಛತಾ ಅಭಿಯಾನ ವನ್ನು ನಡೆಸಲಾಗಿದೆ.

ತಂಡವು ಒಟ್ಟು 810ಕಿಲೋ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಜೈವಿಕವಾಗಿ ವಿಘಟನೆಯಾಗದ ತ್ಯಾಜ್ಯವನ್ನು ಸಂಗ್ರಹಿಸಿದೆ. ಅಷ್ಟೇ ಅಲ್ಲ, ಸೈನೇಜ್ ಬೋರ್ಡ್‌ ಗಳನ್ನು ನೆಟ್ಟು, ಸರಿಯಾದ ತ್ಯಾಜ್ಯ ವಿಲೇವಾರಿ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿದೆ. ಅಷ್ಟೇ ಅಲ್ಲ, ಮರುಬಳಕೆಯನ್ನು ಉತ್ತೇಜಿಸಿ, ಕಸ ಎಸೆಯುವುದನ್ನು ತಪ್ಪಿಸಲು ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್‌ನ ಪರಿಣಾಮ ಮತ್ತು ಬಳಸಿದ ಪ್ಲಾಸ್ಟಿಕ್ ಅನ್ನು ಸಂಗ್ರಹಿಸುವ ವಿಧಾನದ ಬಗ್ಗೆ ತಿಳಿವಳಿಕೆಯನ್ನೂ ಮೂಡಿಸಲು ಯತ್ನಿಸಿದೆ.

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಟೈಗರ್ ರಿಸರ್ವ್‌ ಫಾರೆಸ್ಟ್‌ನ ಡಿಆರ್‌ಎಫ್‌ಒ ಶ್ರೀ ಚಿನ್ನವಿಶೇರಾ ಹೇಳುವಂತೆ “ಪರಿಸರ ಸುಸ್ಥಿರತೆಯನ್ನು ಖಾತ್ರಿ ಪಡಿಸುವ ನಿಟ್ಟಿನಲ್ಲಿ ಈ ಪಾಲುದಾರಿಕೆ ಅತ್ಯಂತ ಮಹತ್ವದ್ದಾಗಿದೆ. ಬಾಟಲ್ಸ್ ಫಾರ್ ಚೇಂಜ್‌ ಎಂಬ ಕಾರ್ಯಕ್ರಮದ ಅಡಿಯಲ್ಲಿ ಮರುಬಳಕೆ ಪ್ರಯತ್ನ ದಲ್ಲಿ ಬಿಸ್ಲೆರಿ ಇಂಟರ್‌ನ್ಯಾಷನಲ್‌ ಸಹಕಾರ ಮತ್ತು ಸಕ್ರಿಯ ತೊಡಗಿಸಿಕೊಳ್ಳುವಿಕೆಯನ್ನು ನಾವು ಮೆಚ್ಚುತ್ತೇವೆ. ಕರ್ನಾಟಕಕ್ಕೆ ಪರಿಸರ ಸ್ನೇಹಿ ಭವಿಷ್ಯ ವನ್ನು ರೂಪಿಸುವುದಕ್ಕೆ ನಾವು ನಿರಂತರವಾಗಿ ಶ್ರಮಿಸುತ್ತೇವೆ.”

ಸಹಭಾಗಿತ್ವದ ಬಗ್ಗೆ ಮಾತನಾಡಿದ ಬಿಸ್ಲೆರಿ ಇಂಟರ್‌ನ್ಯಾಷನಲ್ ಪ್ರೈ. ಲಿ ಸುಸ್ಥಿರತೆ ಮತ್ತು ಕಾರ್ಪೊ ರೇಟ್ ವ್ಯವಹಾರಗಳ ನಿರ್ದೇಶಕ ಕೆ. ಗಣೇಶ್ ಮಾತನಾಡಿ “ನಮ್ಮ ಬಾಟಲ್ಸ್ ಫಾರ್ ಚೇಂಜ್ ಕಾರ್ಯಕ್ರಮದ ಮೂಲಕ ಪರಿಸರ ಸಂರಕ್ಷಣೆಯನ್ನು ಉತ್ತೇಜಿಸಲು ಕರ್ನಾಟಕ ಅರಣ್ಯ ಇಲಾಖೆಯ ಜೊತೆಗೆ ಸಹಭಾಗಿತ್ವ ವಹಿಸಿರುವುದಾಗಿ ಘೋಷಿಸುವುದು ನಮಗೆ ಖುಷಿಯ ಸಂಗತಿಯಾಗಿದೆ. ಧನಾತ್ಮಕ ಬದಲಾವಣೆಯನ್ನು ಪ್ರೋತ್ಸಾಹಿಸಲು ಮತ್ತು ಸುಸ್ಥಿರ ಭವಿಷ್ಯವನ್ನು ಪೋಷಿಸಲು ನಮಗೆ ಈ ಪಾಲುದಾರಿಕೆಯು ಪೂರಕವಾಗಿರಲಿದೆ.”

ಸುಸ್ಥಿರ ಅಭಿವೃದ್ಧಿ ಉಪಕ್ರಮಗಳ ಮೂಲಕ ಸಮುದಾಯಗಳ ಮೇಲೆ ಧನಾತ್ಮಕ ಮತ್ತು ದೀರ್ಘಕಾಲೀನ ಪರಿಣಾಮವನ್ನು ಉಂಟು ಮಾಡುವ ಗುರಿ ಹೊಂದಿರುವ ಲಾಭೋದ್ದೇಶ ರಹಿತ ಸಂಸ್ಥೆ ಸಂಪ್ರಭಾವ್‌ ಫೌಂಡೇಶನ್‌ ಪರಿಣಾಮಕಾರಿಯಾಗಿ ತ್ಯಾಜ್ಯವನ್ನು ನಿರ್ವಹಿಸುವುದು ಮತ್ತು ಸಾಮಗ್ರಿಗಳನ್ನು ಮರುಬಳಕೆ ಮಾಡುವ ವಿಷಯದಲ್ಲಿ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಗುರಿ ಹೊಂದಿದೆ. ಈ ಸಂಸ್ಥೆಯು ಎನ್‌ಜಿಒ ಪಾಲುದಾರನಾಗಿದೆ. ಈ ಸಂಸ್ಥೆಯು ಕೊಡಗಿನ ಅಭ್ಯತ್‌ಮಂಗಲ ಮೂಲದ್ದಾಗಿದೆ.