ರವಿ ಮಾಲೀಕತ್ವದ ಸ್ಟೀಲ್ ಅಂಗಡಿ ಮುಂದೆ ಬೈಕ್ ಟಚ್ ಆಗಿದ್ದಕ್ಕೆ ಗಲಾಟೆ ನಡೆಯುತಿತ್ತು. ಆ ಸಂದರ್ಭದಲ್ಲಿ ರವಿ ಗಲಾಟೆ ಬಿಡಿಸಲು ಹೋಗಿದ್ದು, ಅನ್ಯಕೋಮಿನ ಇಬ್ಬರು ರವಿಯ ಮುಖಕ್ಕೆ ಚಾಕು ಹಾಕಿದ್ದಾರೆ. ಪ್ರಕರಣ ಖಂಡಿಸಿ ಮಾಲೂರು ಬಸ್ ನಿಲ್ದಾಣದಲ್ಲಿ ಆರ್ಎಸ್ಎಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಾಕು ಇರಿದವರು ಗಾಂಜಾ ಸೇವಿಸಿದ್ದು, ಗಲಾಟೆ ಬಿಡಿಸಿ ವಾಪಸ್ ಆಗುವಾಗ ಚಾಕು ಇರಿ ದಿದ್ದರು. ಆರೋಪಿಗಳಲ್ಲಿ ಒಬ್ಬ ಆಟೋ ಚಾಲಕನಾಗಿದ್ದು, ಇನ್ನೊಬ್ಬ ಚಿಕನ್ ಅಂಗಡಿ ಯಲ್ಲಿ ಕೆಲಸ ಮಾಡುವವನಾಗಿದ್ದಾನೆ. ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ.
ಸದ್ಯ ಮಾಲೂರು ಪೊಲೀಸ್ ಠಾಣೆ ಬಳಿ ಆರ್ಎಸ್ಎಸ್ ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ.