Thursday, 12th December 2024

ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ವ್ಯಕ್ತಿ ಸಾವು

ಕೋಲಾರ: ಎಮ್ಮೆಗಳನ್ನು ಮೇಯಿಸಲು ಹೋದ ಸಂದರ್ಭ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ವ್ಯಕ್ತಿಯೊಬ್ಬ ಮೃತಪಟ್ಟಿ ದ್ದಾರೆ.

ಪಟ್ಟಣದ ನಂದಪ್ಪ ಸಂಗಪ್ಪ ಸೊನ್ನದ(೬೫) ಎಂಬ ವ್ಯಕ್ತಿ ಪಟ್ಟಣದ ಸಮೀಪ ಗರಸಂಗಿ ಕೆರೆಯ ಪಕ್ಕದಲ್ಲಿ ಎಮ್ಮೆಗಳನ್ನು ಮೇಯಿಸಲು ಹೋದ ಸಂದರ್ಭ ಹಳ್ಳದ ನೀರಿನ ರಭಸಕ್ಕೆ ಎಮ್ಮೆಗಳು ಕೊಚ್ಚಿಕೊಂಡು ಹೋಗುತ್ತಿರುವುದನ್ನು ತಪ್ಪಿಸಲು ಹೋಗಿ ಸಾವಿಗಿಡಾಗಿದ್ದಾನೆ.

ಒಂದು ಎಮ್ಮೆ ಸಹ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದೆ. ಸ್ಥಳಕ್ಕೆ ತಹಸೀಲ್ದಾರ ಪಿ.ಜಿ ಪವಾರ್ ಪಿ.ಎಸ್.ಐ ಪ್ರೀತಮ್ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.