Thursday, 12th December 2024

ಆಂಜನೇಯಸ್ವಾಮಿ ಮೂರ್ತಿ ಭವ್ಯ ಮೆರವಣಿಗೆ

ಕೋಲಾರ: ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ನಾಗರಿಕರ ಸಹಕಾರದೊಂದಿಗೆ ನಿರ್ಮಿಸಿರುವ ವೀರಾಂಜನೇಯಸ್ವಾಮಿ ಯ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲು ತಂದಿರುವ ಆಂಜನೇಯಸ್ವಾಮಿಯ ಮೂರ್ತಿಯನ್ನು ಪಟ್ಟಣದಲ್ಲಿ ಭವ್ಯ ಮೆರವಣಿಗೆ ಯ ಮೂಲಕ ಪ್ರಾಣಪ್ರತಿಷ್ಠಾಪನ ಸ್ಥಳಕ್ಕೆ ತರಲಾಯಿತು.

ದಿಗಂಬರೇಶ್ವರ ಮಠದಿಂದ ಪೂರ್ಣಕುಂಬದೊಂದಿಗೆ, ಶಾಲಾ ಮಕ್ಕಳ ಜಯಕಾರ ದೊಂದಿಗೆ, ವಾದ್ಯ ಮೇಳಗಳೊಂದಿಗೆ ಹೊರಟ ಮೆರವಣಿಗೆ ಪಟ್ಟಣದ ಪ್ರಮುಕ ವೃತ್ತಗಳ ಮೂಲಕ ಹಾಯ್ದು ವೀರಾಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ತಲುಪಿತು, ಮೆರವಣಿಗೆಯಲ್ಲಿ ಸಮಸ್ತ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಇದ್ದರು.

ಪಟ್ಟಣದ ಹಿಂದು, ಮುಸ್ಲಿಂ ಮುಖಂಡರು ಮೆರವಣಿಗೆಯಲ್ಲಿ ಭಾಗಿಯಾಗಿ ಭಾವೈಕ್ಯತೆ ಯನ್ನು ಪ್ರಚೂರಪಡಿಸಿದರು.

ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ, ಸಿ.ಎಸ್ ಗಿಡ್ಡಪ್ಪಗೋಳ, ಹಣಮಂತ ಬೆಳ್ಳುಬ್ಬಿ, ಅಂಜುಮನ್ ಕಮೀಟಿ ಅಧ್ಯಕ್ಷ ಅಲ್ಲಾಭಕ್ಷ ಬಿಜಾಪುರ, ಸಿ.ಎಂ ಗಣಕುಮಾರ, ವಿರುಪಾಕ್ಷೀ ಕೋಲಕಾರ, ಶೇಕಪ್ಪ ಗಾಣಗೇರ, ಹನೀಪ ಮಕಾನದಾರ, ಬಾಬು ಬಜಂತ್ರಿ, ಸಲೀಮ ಕೊತ್ತಲ್ ಇದ್ದರು.