ಪೋಲೀಸರ ಫೈರಿಂಗ್ : ಇಬ್ಬರಿಗೆ ಗಾಯ
ಕೊಪ್ಪಳ/ಕಾರಟಗಿ : ಡಕಾಯಿತ ಸೇರಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಐವರು ಆರೋಪಿಗಳನ್ನು ಬಂಧಿಸುವ ಸಂದರ್ಭ ದಲ್ಲಿ ಪೊಲೀಸರು ಸಿನಿಮೀ ಯ ರೀತಿಯಲ್ಲಿ ಚೇಜ್ ಮಾಡಿ ಫೈರಿಂಗ್ ಮಾಡಿರುವಂತ ಘಟನೆ ಕಾರಟಗಿ ತಾಲೂಕಿನ ಮುಷ್ಟೂರು ಸಮೀಪ ನಡೆದಿದೆ. ಘಟನೆಯಲ್ಲಿ ಚಿಕ್ಕಜಾಲ ಇನ್ಸ್ಪೆಕ್ಟರ್ ಪ್ರವೀಣ್‌ಕುಮಾರ್, ಮುಖ್ಯಪೇದೆ ಹಾಗೂ ಇಬ್ಬರು ಆರೋಪಿಗಳಿಗೆ ಗಾಯಗಳಾಗಿವೆ.
ಬೆಂಗಳೂರಿನ ಚಿಕ್ಕಜಾಲ ಪೊಲೀಸರು ಡಕಾಯಿತಿ, ಕಳ್ಳತನ ಪ್ರಕರಣಕ್ಕೆ ಸಂಬ0ಧಿಸಿದ0ತೆ ಆರೋಪಿಗಳನ್ನು ಬೆನ್ನಟ್ಟಿ ಬಂದಿ ದ್ದಾರೆ. ಆರೋಪಿಗಳು ಗಂಗಾವತಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸಂಚರಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಜಾಲ ಬೀಸಿದರು. ಕಳ್ಳರು ತಮ್ಮ ಬುಲೇರೋ ಗೂಡ್ಸ್ ವಾಹನವನ್ನು ಮರಳಿ ಗ್ರಾಮದ ಟೋಲ್ ಬಳಿ ನಿಲ್ಲಿಸಿ ಮಲಗಿದ್ದಾರೆ. ಆದರೆ ಟೋಲ್ ಗೇಟ್‌ನಲ್ಲಿ ಫಾಸ್ಟ್ ಟ್ಯಾಗ್ ಮೂಲಕ ಹಣ ಕಟ್ಟಾಗಿದೆ. ಆರೋಪಿಗಳು ಟೋಲ್ ಮೂಲಕ ಹೋಗಿರುವುದನ್ನು ಖಚಿತ ಪಡಿಸಿಕೊಂಡ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಅಲ್ಲೇ ವಾಹನ ನಿಲ್ಲಿಸಿ ಮಲಗಿದ್ದ ಆರೋಪಿಗಳು ಕ್ಯಾಬಿನ್ ನಲ್ಲಿ ಇಬ್ಬರು ಹಾಗೂ ವಾಹನದ ಹಿಂದೆ ಮೂವರು ಮಲಗಿದ್ದಾರೆ.
ಈ ವೇಳೆ ಆರೋಪಿಗಳನ್ನು ಬಂಧಿಸಲು ನಾಲ್ಕು ಜನ ಪೊಲೀಸರು ಬುಲೇರೋ ವಾಹನದಲ್ಲಿ ಹತ್ತಿದ್ದಾರೆ. ಆಗ ಎಚ್ಚರಗೊಂಡ ಕಳ್ಳರು ವಾಹನ ಚಲಾಯಿಸಿ ಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ನರಸಾಪುರ, ಮುಷ್ಟೂರು ಮಾರ್ಗದ ಮೂಲಕ ವೇಗ ವಾಗಿ ವಾಹನ ಚಲಾಯಿಸಿಕೊಂಡು ಬಂದಿದ್ದಾರೆ. ಪೋಲೀಸರು ಸಹ ಸಿನಿಮೀಯ ರೀತಿಯಲ್ಲಿ ಚೇಜ್ ಮಾಡಿದ್ದಾರೆ. ಆರೋಪಿಗಳ ವಾಹನ ಕಾಲುವೆಗೆ ಬಿದ್ದಿದೆ. ಆರೋಪಿಗಳು ಮುಷ್ಟೂರು ಸಮೀಪ ಸಿಕ್ಕಿ ಬಿದ್ದಾಗ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಇದರಿಂದ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಆರೋಪಿಗಳಾದ ಶಂಕರ್ ಹಾಗೂ ಅಶೋಕ್ ಎಂಬುವರಿಗೆ ಗುಂಡು ತಗುಲಿದ್ದು, ಗಂಗಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ, ಇನ್ಸ್ಪೆಕ್ಟರ್ ಪ್ರವೀಣ್ ಕುಮಾರ್ ಹಾಗೂ ಮುಖ್ಯಪೇದೆ ಬಸವರಾಜ ನಾಯಕ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಂಬಣ್ಣ, ಪರುಶುರಾಮ ಹಾಗೂ ಅಡಿವೆಪ್ಪ ಎಂಬುವರನ್ನು ಬಂಧಿಸಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಡಿವೈಎಸ್ಪಿ ರುದ್ರೇಶ್ ಉಜ್ಜಿನಕೊಪ್ಪ, ಗಂಗಾವತಿ ಗ್ರಾಮೀಣ ಸಿಪಿಐ ಮಂಜುನಾಥ್, ಕಾರಟಗಿ ಠಾಣೆ ಪಿಐ ವೀರಭದ್ರಯ್ಯ ಹಿರೇಮಠ ಇದ್ದರು. ಘಟನೆ ನಡೆದ ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ಮಾಡಿದರು.
***
ಆರೋಪಿಗಳ ಬಂಧನಕ್ಕೆ ತೆರಳಿದಾಗ ಪೊಲೀಸರ ಮೇಲೆ ದಾಳಿ ನಡೆದಿದೆ. ಆಗ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಇಬ್ಬರು ಆರೋಪಿಗಳಿಗೆ ಬುಲೆಟ್ ತಗುಲಿದೆ. ಇನ್ಸ್ಪೆಕ್ಟರ್ ಪ್ರವೀಣ್‌ಕುಮಾರ್ ಹಾಗೂ ಮುಖ್ಯಪೇದೆ ಬಸವರಾಜ ನಾಯಕಗೆ ಸಣ್ಣಪುಟ್ಟ ಗಾಯಗಳಾಗಿವೆ. ಒಟ್ಟು ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಅರುಣಾ0ಗ್ಷು ಗಿರಿ, ಕೊಪ್ಪಳ ಎಸ್‌ಪಿ