Saturday, 14th December 2024

ರಾಮ ಮಂದಿರ ಉದ್ಘಾಟನೆಗೆ ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ಆಹ್ವಾನ

ಕೊಪ್ಪಳ: ಅಯೋಧ್ಯೆಯಲ್ಲಿ ನಿರ್ಮಾಣವಾಗಿರೋ ಶ್ರೀರಾಮ ಮಂದಿರ ಉದ್ಘಾಟನೆಗೆ ಕೊಪ್ಪಳದ ಗವಿಸಿದ್ದೇಶ್ವರ ಸ್ಚಾಮೀಜಿಗಳನ್ನು ವಿಶ್ವ ಹಿಂದೂ ಪರಿಷತ್ ಮುಖಂಡರು ಶನಿವಾರ ಆಹ್ವಾನ ನೀಡಿದರು.

ಕೊಪ್ಪಳದ ಗವಿಸಿದ್ದೇಶ್ವರ ಸಂಸ್ಥಾನ‌ಮಠಕ್ಕೆ ಭೇಟಿ ನೀಡಿದ ವಿಶ್ವ ಹಿಂದು ಪರಿಷತ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಆಹ್ವಾನ ನೀಡಿದರು. ಜ.22ರಂದು ಉದ್ಘಾನೆಗೊಳ್ಳಲಿರುವ ಮಂದಿರ ಉದ್ಘಾಟನೆಯ ಸು ಸಂಧರ್ಭದಲ್ಲಿ ಭಾಗವಹಿಸಲು ಕೋರಿದರು. ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ಹಾಗೂ ಆಹ್ವಾನ ಪತ್ರಿಕೆ ವಿತರಿಸಿ ಭವ್ಯ ಕ್ಷಣಕ್ಕೆ ಸಾಕ್ಷಿಯಾಗುವಂತೆ ಮನವಿ ಮಾಡಿದರು. ದೇಶಾದ್ಯಂತ ಹಲವು ಮಠಾಧೀಶರು,‌ ಗಣ್ಯರಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ.

ಸಂಘ ಪರಿವಾರದ ಉತ್ತರ ಪ್ರಾಂತ ಸಂಚಾಲಕ ಬಸವರಾಜ ಡಂಬಳ, ಬಿಜೆಪಿ ಬಳ್ಳಾರಿ ವಿಭಾಗ ಸಹ ಪ್ರಭಾರಿ ಚಂದ್ರು ಪಾಟೀಲ್ ಹಲಗೇರಿ, ಸುನಿಲ್ ಹೆಸರೂರು, ಅಪ್ಪಣ್ಣ ಪದಕಿ, ವಕ್ತಾರ ಮಹೇಶ ಅಂಗಡಿ ಸೇರಿ ಇತರರು ಇದ್ದರು.