Thursday, 12th December 2024

ಕೃಷ್ಣೇಗೌಡರಿಗೆ ೬೩ರ ಸಂಭ್ರಮ : ಹಲವು ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ : ಕೆಪಿಸಿಸಿ ಸೇವಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡರ ೬೩ ರ ಹುಟ್ಟುಹಬ್ಬದ ಸಂಭ್ರಮ ಕಾರ್ಯಕ್ರಮವನ್ನು ಫೆ.೧ ರಂದು ನಗರದಲ್ಲಿ ಆಚರಿಸಲಾಗುತ್ತಿದೆ. ರಾಜಕೀಯ ಹೊರತಾಗಿ ಕಾರ್ಯಕ್ರಮ ನಡೆಯುತ್ತಿದೆ.

ಕಾರ್ಯಕ್ರಮದ ನೇತೃತ್ವವನ್ನು ಪುತ್ರಿ ಮಾನಸ ಅಳಿಯ ಮಂಜುನಾಥ್ ವಹಿಸಿಕೊಂಡಿದ್ದಾರೆ.

ಮಡದಿ ವಿಮಲಮ್ಮನವರ ಸಮಾಧಿಗೆ ಭೇಟಿ, ಹಾಲುಗೊಣದ ಸಿದ್ದರಾಮೇಶ್ವರ ವಾಕ್ ಮತ್ತು ಶ್ರವಣ ಶಾಲೆಯಲ್ಲಿ ಸಿಹಿ ವಿತರಣೆ, ಮೆರವಣಿಗೆ ಸೇರಿ ಹಲವು ಕಾರ್ಯಕ್ರಮ ನಡೆಯಲಿದೆ. ಪಕ್ಷ ಹಾಗು ಸಮಾಜದ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಒಕ್ಕಲಿಗರ ಸಂಘದ ಉಪಾಧ್ಯಕ್ಷ, ಕನ್ನಡ ಸಂಘದ ಕಾರ್ಯದರ್ಶಿ, ಮುಂಜಾನೆ ಗೆಳೆಯರ ಬಳಗದ ಅಧ್ಯಕ್ಷ, ನೀರಾವರಿ ಹೋರಾಟ ಸಮಿತಿಯ ಸದಸ್ಯ ಸೇರಿದಂತೆ ಒಟ್ಟು ೧೯ ಹುದ್ದೆಗಳನ್ನು ಅಲಂಕರಿಸಿದ್ದಾರೆ.