Friday, 22nd November 2024

ಕೆಆರ್‌ಎಸ್‌ ಜಲಾಶಯದಲ್ಲಿ 2.50 ಅಡಿ ನೀರು ಭರ್ತಿ

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಕೆಆರ್‌ಎಸ್‌  ಜಲಾಶಯ ದಲ್ಲಿ 2.50 ಅಡಿ ನೀರು ಭರ್ತಿಯಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್‌ ಡ್ಯಾಂಗೆ ಎರಡು ದಿನಗಳ ಅವಧಿಯಲ್ಲಿ 3 ಟಿಎಂಸಿಯಷ್ಟು ನೀರು ಶೇಖರಣೆಯಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆಆರ್‌ಎಸ್‌ ಜಲಾ ಶಯಕ್ಕೆ ಒಳ ಹರಿವಿನ ಪ್ರಮಾಣವೂ ಹೆಚ್ಚಾಗಿದೆ. ಇದರಿಂದ 24 ಗಂಟೆಯಲ್ಲಿ 2.50 ಅಡಿ ನೀರು ಭರ್ತಿಯಾಗಿದೆ.

ಶನಿವಾರ 82 ಅಡಿಯಷ್ಟಿದ್ದ ಜಲಾಶಯದ ನೀರಿನ ಮಟ್ಟ ಭಾನುವಾರ 84.50 ಅಡಿಗಳಿಗೆ ತಲುಪಿದೆ. ಕೆಆರ್‌ಎಸ್‌ ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಹೊಂದಿದೆ.

ಕೆಆರ್ಎಸ್ಇಂದಿನನೀರಿನಮಟ್ಟ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 84.50 ಅಡಿಗಳು
ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ
ಇಂದಿನ ಸಾಮರ್ಥ್ಯ – 12.915 ಟಿಎಂಸಿ
ಒಳ ಹರಿವು – 14,556 ಕ್ಯೂಸೆಕ್
ಹೊರ ಹರಿವು – 367 ಕ್ಯೂಸೆಕ್