Sunday, 15th December 2024

ತಾಲೂಕಿಗೆ ಹೇಮಾವತಿ ನೀರನ್ನು ಪರಿಚಯಿಸಿದ್ದು ವಾಸಣ್ಣ : ಮುಖಂಡ ಕೆ ಆರ್ ವೆಂಕಟೇಶ್

ಗುಬ್ಬಿ: ತಾಲೂಕಿನ ಎಂಎನ್ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮಲಾಪುರದಲ್ಲಿ ನಡೆದ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿ ತಾಲೂಕಿನ ಎಲ್ಲಾ ಕೆರೆಗಳಿಗೂ ಹೇಮಾವತಿ ನೀರನ್ನು ಹರಿಸುವ ಮೂಲಕ ನೀರಗಂಟಿಯಾಗಿ ಕೆಲಸ ನಿರ್ವಹಿಸಿದ್ದಾರೆ.
ಕೆಲವು ನಾಯಕರು ಹೇಮಾವತಿ ನೀರನ್ನು ತಂದದ್ದು ನಾವು ಎಂದು ಸುಳ್ಳು ಹೇಳುತ್ತಿದ್ದಾರೆ ಅವರಿಗೆ ನಾಲೆಯ  ತೂಬುಗಳು ಎಲ್ಲಿವೇ ಎಂಬುದೇ ಗೊತ್ತಿಲ್ಲ ಅಭಿವೃದ್ಧಿಗಾಗಿ ಬಿಡುಗಡೆ ಯಾದ ನೂರು ಕೋಟಿ ರೂ ಹಣವನ್ನು ಕೋಮುವಾದಿ ಬಿಜೆಪಿ ನಾಯಕರ ಕೈವಾಡದಿಂದ ಸರ್ಕಾರ ವಾಪಸ್ ತೆಗೆದುಕೊಂಡಿದೆ
ಇವುಗಳನ್ನೆಲ್ಲ ಧಿಕ್ಕರಿಸಿ ಜಾತ್ಯಾತೀತ ನಾಯಕ ಅಭಿವೃದ್ಧಿಯ ಹರಿಕಾರ ವಾಸಣ್ಣನವರನ್ನು ಬೆಂಬಲಿಸಿ ಎಂದು ತಿಳಿಸಿದರು.
ಮುಖಂಡ ಗುರು ರೇಣುಕಾರಾಧ್ಯ ಮಾತನಾಡಿ ಜೆಡಿಎಸ್ ತಾಲೂಕ್ ಅಧ್ಯಕ್ಷನಾಗಿ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ರಾಜ್ಯದಲ್ಲಿ ಹೆಚ್ಚು ಸದಸ್ಯತ್ವ ಹೊಂದಿದ ಕ್ಷೇತ್ರವಾಗಿ ಮಾಡಲಾಯಿತು.  ಕುಮಾರಸ್ವಾಮಿಯವರ ನಿರ್ಲಕ್ಷದಿಂದ ಪಕ್ಷ ಅಸ್ತಿತ್ವ ವನ್ನು ಕಳೆದುಕೊಳ್ಳುವ ಹಂತ ತಲುಪಿದೆ.  ಮೋಸದ ರಾಜಕಾರಣ ತಿಳಿದು ಸ್ವಯಂ ಪ್ರೇರಿತರಾಗಿ ರಾಜೀನಾಮೆ ಸಲ್ಲಿಸು ತ್ತಿದ್ದಾರೆ ಎಂದು ತಿಳಿಸಿದರು.
ಮುಖಂಡ ಕೋಟೆ ಕಲ್ಲೇಶ್ ಮಾತನಾಡಿ ಕುಮಾರಸ್ವಾಮಿಯವರೆ ಎದುರಾಳಿಯಾಗಿ ಚುನಾವಣೆಗೆ ಸ್ಪರ್ಧಿಸಿದರು ಅತಿ ಹೆಚ್ಚು ಮತನೀಡಿ ವಾಸಣ್ಣನವರನ್ನು ಗೆಲ್ಲಿಸುತ್ತೇವೆ. ಎಲ್ಲಾ ಜನಾಂಗವನ್ನು ಸಮನಾಗಿ ಕಾಣುವ ವ್ಯಕ್ತಿತ್ವವುಳ್ಳ ವಾಸಣ್ಣನವರ ಹಿಂದೆ ಸಾವಿರಾರು ಪ್ರಾಮಾಣಿಕ ಕಾರ್ಯಕರ್ತರಿದ್ದೇವೆ 20,000 ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜುಂಜೇಗೌಡ, ಸಿದ್ದಲಿಂಗಯ್ಯ, ಕಾಂತರಾಜು, ಪಾಂಡುರಂಗಯ್ಯ, ಪಟೇಲ್ ಸೀಬೆಗೌಡ, ಗಂಗರಾಜು, ಸಿದ್ದಲಿಂಗಪ್ಪ, ಲೋಕೇಶ್, ಕೋಟೆ ಕಲ್ಲೇಶ್, ದೇವರಾಜು, ರಂಗಸ್ವಾಮಿ (ಪಾಂಡು), ಸೋಮಶೇಖರ್, ಮುಂತಾದವ ರಿದ್ದರು.

Read E-Paper click here