Sunday, 15th December 2024

ಕೆ.ಎಸ್.ಎನ್. ಅಭಿಮಾನಿ ಬಳಗದ ವತಿಯಿಂದ ಶಿವಾಭಿಮಾನಕ್ಕೆ ಭರ್ಜರಿ ಸಿದ್ದತೆ

ಮಾನ್ವಿ : ಪಟ್ಟಣದಲ್ಲಿ ಜು.೧೪ರಂದು ಕೆ.ಎಸ್.ಎನ್. ಅಭಿಮಾನಿ ಬಳಗದ ವತಿಯಿಂದ ನಡೆಯಲಿರುವ ಮಾಜಿ ಸಚಿವ ಹಾಗು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕರ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದಲ್ಲಿ ಭರ್ಜರಿಯಾಗಿ ನಡೆಯುತ್ತಿರುವ ಸಿದ್ದತೆಗಳು ನಡೆಯುತ್ತಿದ್ದು ಪಟ್ಟಣದ ಧ್ಯಾನ ಮಂದಿರದ ಆವರಣಕ್ಕೆ ಸಿಂಧನೂರು ಡಿ.ವೈ.ಎಸ್.ಪಿ. ವೆಂಕಟಪ್ಪ ನಾಯಕ ಭೇಟಿ ನೀಡಿ ಊಟದ ಸ್ಥಳ ಪರಿಶೀಲನೆ ನಡೆಸಿ ಉಟದ ಸಮಯದಲ್ಲಿ ಯಾವುದೇ ನೂಕುನುಗಲ್ಲು ಸಂಭವಿಸದ0ತೆ ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಯಚೂರು ಗ್ರಾಮೀಣ ಮಾಜಿ ಶಾಸಕ ಹಾಗೂ ಬಿ.ಜೆ.ಪಿ. ಎಸ್.ಟಿ. ಮೋರ್ಚಾದ ರಾಜ್ಯಧ್ಯಕ್ಷ ತಿಪ್ಪರಾಜ ಹವಾಲ್ದಾರ್ ಮಾತನಾಡಿ ಕೆ.ಶಿವನಗೌಡನಾಯಕರು ಕೇವಲ ದೇವದುರ್ಗ ಕ್ಷೇತ್ರಕ್ಕೆ ಸೀಮಿತರಾಗಿಲ್ಲ.

ಜಿಲ್ಲೇ ಸೇರಿದಂತೆ ಕಲ್ಯಾಣ ಕರ್ನಾಟಕದ ಪ್ರಭಾವಿ ನಾಯಕ ರಾಗಿದ್ದು ಅವರ ಅಭಿಮಾನಿ ಬಳಗದಿಂದ ಶಿವಾಭಿಮಾನ ಎನ್ನುವ ಕಾರ್ಯಕ್ರಮ ಗುರುವಾರ ನಡೆಯ ಲ್ಲಿದ್ದು, ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್. ಆವರಣದಲ್ಲಿನ ಮುಖ್ಯ ವೇದಿಕೆಯಲ್ಲಿ ಹುಟ್ಟು ಹಬ್ಬ ಕಾರ್ಯಕ್ರಮ ನಡೆಯ ಲಿದೆ.

ಹುಟ್ಟು ಹಬ್ಬಕ್ಕೆ ರಾಜ್ಯ ಸರಕಾರದ ಪ್ರಮುಖ ಸಚಿವ ವಸತಿ ಸಚಿವ ವಿ.ಸೋಮ್ಮಣ್ಣ, ಸಾರಿಗೆ ಸಚಿವರಾದ ಶ್ರೀರಾಮುಲು, ಸಣ್ಣ ಕೈಗಾರಿಕೆ ಸಚಿವರಾದ ಸಿ.ಸಿ.ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಬಿ ಪಾಟೀಲ್ ಮುನೆನಕೊಪ್ಪ, ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ್ ರೇವೂರು, ಗಣಿ ಸಚಿವರಾದ ಹಾಲಪ್ಪ ಆಚಾರ್, ಸಂಸದರಾದ ರಾಜಾ ಅಮರೇಶ್ವರ ನಾಯಕ, ಹಾಗೂ ರಾಜ್ಯದ ಪ್ರಮುಖ ಮಠಗಳ ಗುರುಗಳು, ಸ್ವಾಮಿಗಳು, ಸರ್ವಧರ್ಮದ ಧಾರ್ಮಿಕ ಗುರುಗಳು, ಪಕ್ಷತೀತವಾಗಿ ರಾಜ್ಯ ಹಾಗೂ ಕೇಂದ್ರದ ಶಾಸಕರು, ಸಂಸದರು, ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೇಗಳ ಸುಮಾರು ೫೦ ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಹುಟ್ಟು ಹಬ್ಬದಲ್ಲಿ ಭಾಗವಹಿಸ ಲಿದ್ದಾರೆ ಎಂದು ತಿಳಿಸಿದರು.

ಭರ್ಜರಿ ಭೋಜನ :ಹುಟ್ಟು ಹಬ್ಬಕ್ಕೆ ಆಗಮಿಸುವ ಅಭಿಮಾನಿಗಳಿಗೆ ಉತ್ತರ ಕರ್ನಾಟಕ ಶೈಲಿಯ ಊಟದ ವ್ಯವಸ್ಥೆಯನ್ನು ಮಾಡಿದ್ದು ಬಿಜಾಪುರ ಜಿಲ್ಲೇಯ ನುರಿತ ಬಾಣಸಿಗರ ತಂಡವೇ ಪಟ್ಟಣದ ಧ್ಯಾನ ಮಂದಿರದಲ್ಲಿ ಬೀಡು ಬಿಟ್ಟಿದ್ದು ತಂಡದ ಮುಖ್ಯ ಅಡುಗೆಯವರಾದ ನಿಲ್ಲಪ್ಪ ನೂರೊಂದಪ್ಪ ಗಾವಳಾಗಿ ನೇತೃತ್ವದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.

೫೦ ಸಾವಿರ ಜನಕ್ಕೆ ೫ ಕ್ವಿಂಟಾಲ್ ಎಣ್ಣೆ ಬದನೆಕಾಯಿ,೬ ಕ್ವಿಂಟಾಲ್ ಹೆಸರು ಕಾಳು, ೧೫ ನೂರು ಲೀಟರ್ ಮೊಸರು,೬೦ಸಾವಿರ ಕಡಕ್ ರೊಟ್ಟಿ,ಶೇಂಗಾ ಚಟ್ನಿ, ಸಿಹಿಗಾಗಿ ಬೂಂದಿ ಲಾಡು, ಅನ್ನ ಸಾಂಬರ್ ಸೇರಿದಂತೆ ಅನೇಕ ಖಾದ್ಯಗಳನ್ನು ತಯಾರಿಸುವ ಸಿದ್ದತೆಗಳನ್ನು ಸುಮಾರು ೩೦೦ಕ್ಕೂ ಹೆಚ್ಚು ಅಡುಗೆ ಸಿಬ್ಬಂದಿ ನಡೆಸುತ್ತಿದ್ದಾರೆ.

ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್.ಆವರಣದಲ್ಲಿನ ಮುಖ್ಯ ವೇದಿಕೆಯ ಹತ್ತಿರ ಹಾಗೂ ಪಟ್ಟಣದ ಧ್ಯಾನ ಮಂದಿರದ ಆವರಣದಲ್ಲಿ ಕಾರ್ಯ ಕ್ರಮಕ್ಕೆ ಆಗಮಿಸುವ ಅಭಿಮಾನಿಗಳಿಗೆ ಎರಡು ಕಡೆ ಬೆಳಿಗ್ಗೆ ೮ರಿಂದ ಊಟದ ವ್ಯವಸ್ಥೆ ನಡೆಯಲಿದೆ.