Sunday, 15th December 2024

ಕಾರ್ತಿಕ ಮಾಸದ ಲಕ್ಷದೀಪೋತ್ಸವ

ಗುಬ್ಬಿ: ತಾಲೂಕಿನ ಸಿ.ಎಸ್.ಪುರ ಹೋಬಳಿಯ ಅಂಕಳಕೊಪ್ಪ ಮಜರೆ ವೀರಣ್ಣನಗುಡಿ ಗ್ರಾಮದಲ್ಲಿ ಶ್ರೀ ವೀರಭದ್ರ ಸ್ವಾಮಿಯವರ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಹಾಗೂ ಬೆಳ್ಳಿ ಪಲ್ಲಕ್ಕಿ ಉತ್ಸಹ ಬಹಳ ಅದ್ದೂರಿಯಾಗಿ ನಡೆಯಿತು.

ಮುಂಜಾನೆಯಿಂದಲೂ ಗಣಪತಿ ಪ್ರಾರ್ಥನೆ, ಗಂಗಾಪೂಜೆ, ಮಹಾಸಂಕಲ್ಪ, ಪುಣ್ಯಹ ವಾಚನ, ಪಂಚಗವ್ಯ, ಕಳಸ ಸ್ಥಾಪನೆ ಮಾಡಿ, ಗಣಪತಿ ಹೋಮ, ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ಸ್ವಾಮಿ ಅವರಿಗೆ ಮೂಲ ಮಂತ್ರ ಹೋಮದ ನಂತರ ಪೂರ್ಣಹುತಿ, ದೇವರ ವಿಗ್ರಹಕ್ಕೆ ವಿಶೇಷ ಪುಷ್ಪಾಲಂಕಾರ, ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ರಾತ್ರಿ ದೇವಾಲಯ ಮುಂಭಾಗದಲ್ಲಿ ಲಕ್ಷಾಂತರ ದೀಪಗಳನ್ನು ಭಕ್ತಾದಿಗಳು ಬೆಳಗುವ ಮೂಲಕ ಲಕ್ಷ ದೀಪೋತ್ಸವಕ್ಕೆ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ತುರುವೇಕೆರೆ ಕ್ಷೇತ್ರದ ಮಾಜಿ ಶಾಸಕ ಮಸಾಲ ಜಯರಾಮ್, ದೇವಾಲಯದ ಅದ್ಯಕ್ಷ ಪುಟ್ಟಸ್ವಾಮಿ, ಕಾರ್ಯಾಧ್ಯಕ್ಷ ಎಂ.ವಿ. ಬಸವ ರಾಜು, ಕಾರ್ಯದರ್ಶಿ ಟಿ .ಎನ್ ಶಿವರುದ್ರಯ್ಯ, ಟ್ರಸ್ಟ್ ನ ಎಲ್ಲಾ ಸದಸ್ಯರು, ಮುಖಂಡರಾದ ವಿ.ಡಿ.ರಾಮು, ರಮೇಶ್, ಬಾನುಪ್ರಕಾಶ್, ವಿಶ್ವನಾಥ್, ಆನಂದ್ ಕುಮಾರ್, ಇಡುಗೂರು ರವಿ, ಗೌತಮ್, ಸೇರಿದಂತೆ ಇನ್ನಿತರರು ಹಾಜರಿದ್ದರು.