Thursday, 12th December 2024

ಕೆಂಪೇಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಗಣರಾಜ್ಯೋತ್ಸವ

ಚಿಕ್ಕಬಳ್ಳಾಪುರ: ನಗರ ಹೊರವಲಯದ ಕೆಂಪೇಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ೭೪ ನೇ ಗಣರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣವನ್ನು ಪ್ರಾಂಶು ಪಾಲರಾದ ಪ್ರೋ.ಬಿ.ಜಿ.ಶೋಭಾ ಅವರು ನೆರವೇರಿಸಿದರು.

ನಂತರ ಮಾತನಾಡಿದ ಅವರು, ಪ್ರತಿಯೊಬ್ಬರು ದೇಶಭಕ್ತಿ, ದೇಶಪ್ರೇಮ, ನೆಲ, ಜಲ, ಸಂಸ್ಕೃತಿ ಗಳ ಬಗ್ಗೆ ಹೆಚ್ಚು ಆಸಕ್ತಿಯನ್ನು ಬೆಳಸಿಕೊಂಡು ಉತ್ತಮ ಪ್ರಜೆಗಳಾಗಿ ಬದುಕಬೇಕು. ಇದರಿಂದ ಸದೃಢ ರಾಷ್ಟ್ರ ನಿರ್ಮಾಣವಾಗಲಿದೆ. ಯಾವುದೇ ಜಾತಿ, ಧರ್ಮ, ಭಾಷೆಯ ಬೇಧವಿಲ್ಲದೇ ಎಲ್ಲರೂ ಭಾರತೀಯರೆಂಬ ಭಾವನೆಯನ್ನು ಬೆಳಸಿಕೊಳ್ಳಬೇಕೆಂದರು ಎಂದರು.

ಭಾರತವು ಸ್ವಾತಂತ್ರ‍್ಯ ನಂತರ ೧೯೫೦ ರ ಜನವರಿ ೨೬ ರಂದು ತನ್ನದೇ ಸಂವಿಧಾನವನ್ನು ಜಾರಿಗೊಳಿಸಿ ಸ್ವತಂತ್ರ ಗಣತಂತ್ರ ರಾಷ್ಟ್ರವಾಯಿತು. ಇದರಿಂದಾಗಿ ಜನವರಿ ೨೬ ಭಾರತೀಯ ರಿಗೆ ಮಹತ್ವದ ದಿನವಾಗಿದ್ದು, ಪ್ರತಿಯೊಬ್ಬರು ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿಯಾದ ಎಂ.ಎ.ಮಹೇಶ್, ಆರ್.ನಾಗಮಣಿ, ಎಸ್.ಶ್ರೀನಾಥ್, ಜೆ.ನಂದಿನಿ, ಎಂ.ಎ.ಶೈಲಾ, ಆರ್.ಗಾಯತ್ರಿ, ಕೆ.ಎಂ.ಮ0ಜುನಾಥ್, ವೈ.ವಿ.ಮಂಜುನಾಥ್, ಎಚ್.ಆರ್.ಉಮಾದೇವಿ, ಚಕ್ರವರ್ತಿ, ಸ್ವಾತಿ, ಕೆ.ಎಂ.ಮ0ಜುನಾಥ್, ಕೆ.ಶ್ರೀಕಾಂತ್, ವಿ.ಬಿ.ರವಿ ಕುಮಾರ್, ಎಂ.ಶಿವಕುಮಾರ್, ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.