Sunday, 15th December 2024

ನಮ್ಮ ದೇಶದ ಮಹಾನಾಯಕರ ಇತಿಹಾಸ ತಿಳಿಯುವುದು ಅತಿ ಮುಖ್ಯ : ಸಚಿವ ಬಿ.ಸಿ ನಾಗೇಶ್

ತಾಲ್ಲೂಕಿನಾದ್ಯಾಂತ ನಾಡಪ್ರಭು ಕೆಂಪೆಗೌಡ ಪ್ರತಿಮೆ ಅದ್ದೂರಿ ಮೆರಮಣಿಗೆ

ತಿಪಟೂರು: ದೇಶಕ್ಕೆ ಬ್ರೀಟೀಷರು ಬಂದು ಆಡಳಿತ ವ್ಯವಸ್ಥೆಯನ್ನು ರೂಪಿಸಿದವರು ಎಂಬ ಕೆಟ್ಟ ಕಲ್ಪನೆಯನ್ನು ಮಕ್ಕಳಿಗೆ ಮೆಕಾಲೆ ಶಿಕ್ಷಣ ಪದ್ದತಿಯಿಂದ ತಿಳಿಸಲಾಗಿದೆ ಆದರೆ ನಮ್ಮ ದೇಶದಲ್ಲಿ ರಾಜ ಮಹಾ ರಾಜರು ಉತ್ತಮ ಆಡಳಿತ ನೀಡಿದ್ದಾರೆ ಎಂಬುದನ್ನು ಪ್ರಸ್ತುತ ಶಿಕ್ಷಣ ಪದ್ದತಿಯಲ್ಲಿ ತಿಳಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.

ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಮತ್ತಿಹಳ್ಳಿ, ಬೈರಾಪುರ, ಕರೀಕೆರೆ, ಸಿದ್ದಾಪುರ, ಕೊನೇಹಳ್ಳಿ, ಹಾಗೂ ಮುಂತಾದ ಗ್ರಾಮಗಳ ಗ್ರಾಮ ದೇವಾಸ್ಥಾನದ ಹತ್ತಿರ ನಾಡಪ್ರಭು ಕೆಂಪೆಗೌಡ ಪ್ರತಿಮೆಗೆ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭವ್ಯ ಭಾರತಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇರುವುದು ಇಂದಿನ ಮಕ್ಕಳಿಗೆ ಗೊತ್ತಿಲ್ಲ. ಇಂತಹ ದೇಶದಲ್ಲಿ ನಾಡಪ್ರಭು ಕೆಂಪೆಗೌಡ ಅಂತ0ಹ ಮಹಾನ್ ನಾಯಕರು ರಾಜ ಮಹಾರಾಜರು ಜನಪರವಾಗಿ ಜನರ ಹಿತಕ್ಕಾಗಿ ಆಡಳಿತವನ್ನು ಜನರ ಮನಸ್ಸಿನಲ್ಲಿ ಅಜಾರಮರವಾಗಿದ್ದಾರೆ ಆದರೆ ಮೆಕಾಲೆ ಶಿಕ್ಷಣ ಪದ್ದತಿಯು ಮರೆ ಮಾಚಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರಿಂದ ನವಂಬರ್ ೧೧ ರಂದು ಅನಾವರಣಗೊಳ್ಳುತ್ತಿರುವ ೧೦೮ ಅಡಿ ಎತ್ತರದ ನಾಡಪ್ರಭು ಕೆಂಪೆಗೌಡ ಪ್ರತಿಮೆಯ ಕೆಳಗಡೆ ಪ್ರತಿ ಗ್ರಾಮದಿಂದ ಭೂಮಿತಾಯಿಯನ್ನು ಪೂಜೆ ಮಾಡಿ ಸಂಗ್ರಹಿಸುತ್ತಿರುವ ಮಣ್ಣನ್ನು ತಳಹದಿ ಯಲ್ಲಿ ಹಾಕುವ ಕೆಲಸ ವನ್ನು ತಾಲ್ಲೂಕಿನಾದ್ಯಾಂತ ಮಾಡಲಾಗುತ್ತಿದೆ ಎಂದರು.

ಕರ‍್ಯಕ್ರಮದಲ್ಲಿ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ಅದ್ಯಕ್ಷ ಚನ್ನಬಸವಣ್ಣ, ಸದಸ್ಯರಾದ ಹರೀಶ್ ಎಮ್.ಪಿ, ರೇಣುಕಮ್ಮ ಓಂಕಾರ ಮೂರ್ತಿ, ರಮೇಶ್, ಪವಿತ್ರರಘು, ನಟರಾಜು, ಗ್ರೇಟ್ ೨ ತಹಶೀಲ್ದಾರ್ ಜಗನ್ನಾಥ್, ಸಿಡಿಪಿಒ ಓಂಕಾರಪ್ಪ, ಪ್ರೇಮಾ, ರಾಜಸ್ವ ನೀರಿಕ್ಷಕರು ರವಿಕುಮಾರ್, ಪಿಡಿಒ ಗೋಪಿ ನಾಥ್, ಸಮಾಜ ಸೇವಕ ಅರಣ್ಯ ಶಶಿಧರ್‌ಭೈರಾಪುರ, ಲಿಂಗರಾಜು ಮತ್ತಿಹಳ್ಳಿ, ಬೋಜೆಗೌಡ, ಮಾಜಿ ಗ್ರಾ ಪಂ ಸದಸ್ಯ ಪರಮೇಶ್, ಲಿಂಗರಾಜು, ಗಂಗಾಧರ, ಮಲ್ಲೇಶ್, ಕಿಸಾನಸಂಘದ ಗ್ರಾಮ ಘಟಕದ ಅದ್ಯಕ್ಷ ಶಿವಾನಂದಸ್ವಾಮಿ, ಪಟೇಲ್ ಜಯಣ್ಣ, ಅಶೋಕ್ ಮಾದಿಹಳ್ಳಿ, ಪ್ರದೀಪ್ ಕರೀಕೆರೆ, ಹಾಲು ಉತ್ಪಾದಕರ ಸಂಘದ ಅದ್ಯಕ್ಷ ಜಯಣ್ಣ, ಪಂಚಾಕ್ಷರಯ್ಯ, ಉಮೇಶ್ ಅಂಚೆಕೊಪ್ಪಲು, ದಿನೇಶ್, ಲತೇಶ್, ಅರುಣ್ ಕುಮಾರ್, ಗ್ರಾಮಲೆಕ್ಕಕಿರು, ಪಂಚಾಯಿತಿ ಸಿಬ್ಬಂದಿಯವರು ಸ್ರೀಶಕ್ತಿ ಸಂಘ, ಆರೋಗ್ಯ ಇಲಾಖೆ, ಹಾಗೂ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.