ತುಮಕೂರು: ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಕನ್ನಡ ಸ್ಥಿತಿ-ಗತಿ ಸ್ಥಳೀಯತೆ ಎಂಬ ಸರ್ವದೇಶೀಯತೆ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಕುಣಿಗಲ್ ಸರ್ಕಾರಿ ಪ್ರಥಮ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ಗೋವಿಂದರಾಯ ಮಾತನಾಡಿ ನಾವು ಸ್ಥಳೀಯತೆಯ ಅರಿವು ಇರಬೇಕು. ಕನ್ನಡ ಭಾಷೆಗೆ ಅದರದೇ ಆದಂತಹ ಇತಿಹಾಸ ಇದೆ. ಹಳೆಗನ್ನಡದಿಂದ ಹೊಸಗನ್ನಡದವರೆಗೆ ಸಾತತ್ಯ ಇದೆ. ಉಳಿದ ಭಾಷೆಗಳಿಗೆ ಈ ರೀತಿಯ ಸಾತತ್ಯ ಇದೆ. ನಮ್ಮ ಭಾಷೆಯ ಸಾಹಿತ್ಯ ಸ್ಥಳೀಯತೆಯೊಂದಿಗೆ ಬೆಳೆದು ಬಂದಿದೆ. ಗ್ರೀಕ್ ಲ್ಯಾಟಿನ್ ಭಾಷೆಗಳಂತೆಯೇ ಕನ್ನಡ ಭಾಷೆಯು ಬೌದ್ಧಿಕ ಪ್ರೌಢಿಮೆಯನ್ನು ಹೊಂದಿರುವ ಭಾಷೆಯಾಗಿದೆ. ಕನ್ನಡ ಭಾಷೆ ಎಲ್ಲವನ್ನೂ ಒಳಗೊಂಡು ಬೆಳೆದು ಬಂದಿದೆ. ಕವಿರಾಜಮಾರ್ಗ ಕೃತಿ ಸ್ಥಳೀಯತೆಯನ್ನು ಪ್ರತಿಪಾದಿಸುತ್ತದೆ. ಹಲವು ಕನ್ನಡಗಳ್ ಎಂದು ಹೇಳುತ್ತಾನೆ. ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ ಜಿ.ಟಿ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಶ್ರೀನಿವಾಸ್, ಆಂತರಿಕ ಗುಣಮಟ್ಟ ಭರವಸೆಯ ಕೋಶದ ಸಂಚಾಲಕರಾದ ಪ್ರೊ.ಪುಷ್ಪಾಂಜಲಿ, ಪ್ರೊ.ನಿವೇದಿತ, ಪ್ರೊ.ದುಗ್ಗೇನಹಳ್ಳಿ ಸಿದ್ದೇಶ, .ಪ್ರೊ.ಅಕ್ಷಯ್, ಪ್ರೊ.ಯೋಗಲಕ್ಷ್ಮಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.