Sunday, 8th September 2024

ಚುನಾವಣಾ ಸಂಚಾರಿ ಜಾಗೃತ ದಳದ ಬೇಟೆ : ಲಕ್ಷಾಂತರ ಮೌಲ್ಯದ ಎಲ್ ಇ ಡಿ ಬಲ್ಬ್ಗಳು ವಶಕ್ಕೆ

ತಿಪಟೂರು : ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಂಚಲು ತಂದಿದ್ದ ಲಕ್ಷಾಂತರ ಮೌಲ್ಯದ ಇಂನ್ವೆAಟರ್ ಲ್ಯಾಂಪ್ ಹಾಗೂ ಎಲ್ ಇ ಡಿ ಬಲ್ಬ್ಗಳನ್ನು ಚುನಾವಣಾ ಸಂಚಾರಿ ಜಾಗೃತ ದಳ ವಶಕ್ಕೆ ಪಡೆದಿದ್ದಾರೆ.

ತಿಪಟೂರು ತಾಲ್ಲೂಕಿನ ಬಂಡಿಹಳ್ಳಿ ಗೇಟ್ ಬಳಿಯಲ್ಲಿ ಸಂಚಾರಿ ಜಾಗೃತ ದಳ ವಾಹನ ತಪಾಸಣೆ ಮಾಡುವಾಗ ಕೆ.ಎ.೨೫ ಬಿ ೨೧೬೦ ಸರಕು ವಾಹನದಲ್ಲಿ ಸುಮಾರು ೬,೮೪,೦೦೧/- ಲಕ್ಷ ಮೌಲ್ಯದ ಎಲ್.ಇ.ಡಿ.ಬಲ್ಬ್ಗಳು ದೊರೆತಿದ್ದು ಸಮರ್ಪಕ ವಿಳಾಸ ಇಲ್ಲದ ಕಾರಣ ಅನುಮಾನಾ ಸ್ಪದವಾಗಿರುವುದರಿಂದ ವಶಕ್ಕೆ ಪಡೆದಿದ್ದಾರೆ.

ವಾಹನವು ಬೆಂಗಳೂರಿನ ಆಸ್ಪೆöÊರ್ ಅಂಡ್ ಇನ್ನೋವೆಟಿವ್ ಅಡ್ವಿಟೈಸಿಂಗ್ ಪ್ರೆöÊ.ಲಿ ನಿಂದ ತಿಪಟೂರಿನ ಅಸ್ಪಷ್ಟ ವಿಳಾಸ #೫೩೨/೩೭೭, ೪ನೇ ಮುಖ್ಯರಸ್ತೆ, ಕೆ.ಆರ್.ಬಡಾವಣೆಗೆ ಸಾಗಿಸಲಾಗುತ್ತಿತ್ತು. ಈ ವಾಹನದಲ್ಲಿ ಬಜಾಬ್ ೧೦ ಡಬ್ಲೂ ಇಂನ್ವೆAಟರ್ ಲ್ಯಾಂಪ್‌ಗಳ ೬೦ ಬಾಕ್ಸ್ ೭೨೦ ಸಂಖ್ಯೆಯ ಬಲ್ಬ್ಗಳು ಇದ್ದವು.

ಸಂಚಾರಿ ಜಾಗೃತ ದಳದ ಚುನಾವಣಾ ಅಧಿಕಾರಿ ಎಚ್.ಆರ್.ಚಂದ್ರಶೇಖರ್ ನೇತೃತ್ವದ ತಂಡವೂ ವಿಳಾಸ ಇಲ್ಲದ ಕಾರಣ ಅನುಮಾನಾಸ್ಪದವಾಗಿ ಇರುವುದರಿಂದ ಲಾರಿಯ ಚಾಲಕ ರೇಣುಕಯ್ಯ, ಲಾರಿ ಕೆ.ಎ.೨೫ ಬಿ ೨೧೬೦ ಸರಕು ವಾಹನ ಹಾಗೂ ೬.೮೪ ಲಕ್ಷ ಮೌಲ್ಯದ ಎಲ್.ಇ.ಡಿ.ಬಲ್ಬ್ಗಳನ್ನು ವಶಕ್ಕೆ ಪಡೆದಿದ್ದಾರೆ.

error: Content is protected !!