Thursday, 12th December 2024

ದಿನಸಿ ಮಾರುವ ರೀತಿಯಲ್ಲಿ ಅಕ್ರಮ ಮದ್ಯ ಮಾರಾಟ

ತಿಪಟೂರು: ಕರ್ನಾಟಕ ರಾಜ್ಯ ಅಬಕಾರಿ ಇಲಾಖೆ ಸೂಚನೆಯ ಹಾಗೂ ಸುತ್ತೋಲೆಯ ಮೇರೆಗೆ ನಿಗದಿತ ಸಮಯ ಹಾಗೂ ನಿಗದಿತ ಬೆಲೆಗೆ ಮಧ್ಯ ಮಾರಾಟ ಮಾಡಲು ಅನುಮತಿ ನೀಡಿದ್ದು, ವಿಪರ್ಯಾಸವೆಂದರೆ ತಾಲೂಕಿನಾದ್ಯಂತ ಸರಕಾರದ ನಿಯಮವನ್ನು ಗಾಳಿಗೆ ತೂರಿ ಬೆಳಗ್ಗೆ ಆರು ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಅನುಮತಿ ಇಲ್ಲದೆ ಗ್ರಾಮೀಣ ಪ್ರದೇಶ ದಲ್ಲಿರುವ ಹಲವಾರು ದಿನಸಿ ಅಂಗಡಿಗಳಲ್ಲಿ,ದಿನಸಿ ಮಾರುವ ರೀತಿಯಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ.

ತಿಪಟೂರು ನಗರದ ಹಲವಾರು ಬಾರ್ ಗಳಲ್ಲಿ ಮುಂಜಾನೆ 5:50 ಗಂಟೆಯಿಂದಲೇ ಬಾಟಲ್ ಅಥವಾ ಟೆಟ್ರಾ ಪ್ಯಾಕ್ ನ ಮೇಲೆ ಮುದ್ರಿಸಿರುವ ಬೆಲೆಗಿಂತ  10 ರಿಂದ 20 ರೂಪಾಯಿಗಳವರೆಗೆ ಹೆಚ್ಚಿಗೆ ಹಣ ಪಡೆದು ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರು ವುದು ಸರ್ವೇಸಾಮಾನ್ಯವಾಗಿದೆ.

ಸರಕಾರಕ್ಕಾಗಲಿ, ಸರಕಾರದ ನಿಯಮಕ್ಕಾಗಲಿ ಮತ್ತು ಸರಕಾರಿ ಅಧಿಕಾರಿಗಳ ಭಯವಿಲ್ಲದೆ ಮಾರಾಟ ಮಾಡಲಾಗುತ್ತಿದೆ.ಅಕ್ರಮ ಮಧ್ಯ ಮಾರಾಟ ಮಾಡುತ್ತಿರುವುದರ ಬಗ್ಗೆ ತಿಪಟೂರು ಅಬಕಾರಿ ಇಲಾಖೆಯವರಿಗೆ ಮಾಹಿತಿ ಇದ್ದರೂ ಕೂಡ ಯಾವುದೇ ರೀತಿಯ ಸೂಕ್ತ ಕ್ರಮ ಕೈಗೊಳ್ಳದೆ ಹಾಗೊಮ್ಮೆ ಹೀಗೊಮ್ಮೆ ತಂಡ ವಸೂಲಿ ಮಾಡುತ್ತಿದ್ದು,ಇರುವುದರ ಅಕ್ರಮವಾಗಿ ಮಧ್ಯ ಮಾರಾಟ ಮಾಡುವುದರ ವಿರುದ್ಧ ಯಾವುದೇ ರೀತಿಯಾದ ಸೂಕ್ತ ಕ್ರಮ ಕೈಗೊಳ್ಳದೆ ಇರುವುದರ ಕಾರಣ ಹಲವಾರು ಅನುಮಾನ ಗಳು ಹುಟ್ಟಿಕೊಂಡಿವೆ.

ಈ ಕೂಡಲೇ ಸಂಬಂಧಪಟ್ಟ ಅಬಕಾರಿ ಇಲಾಖೆಯ ಉನ್ನತ ಅಧಿಕಾರಿಗಳು ಇತ್ತ ಗಮನ ಹರಿಸಿ ಇಂತಹ ಅಕ್ರಮ ಮಧ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.