ಗುಬ್ಬಿ: ದಾಳಿಯಲ್ಲಿ ಅಕ್ರಮ ಮಧ್ಯ ಮಾರಾಟಕ್ಕೆ ತಂದಿದ್ದ 5.4 ಲೀಟರ್ ಮದ್ಯ ಹಾಗೂ ಮಾರಾಟ ಮಾಡುತ್ತಿದ್ದ ಬಸವರಾಜು ಎಂಬ ವ್ಯಕ್ತಿಯನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಕಡಬ ಹೋಬಳಿ ಬ್ಯಾಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲಚಿಹಳ್ಳಿ ಗ್ರಾಮದ ಕಾಲೋನಿಯಲ್ಲಿ ಬಸವರಾಜು ಎಂಬ ವ್ಯಕ್ತಿ ಅಕ್ರಮ ವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಸೋಮವಾರ ಬೆಳಿಗ್ಗೆ ಮನೆ ಮೇಲೆ ದಾಳಿ ನಡೆಸಲಾಗಿದೆ.
ದಾಳಿಯಲ್ಲಿ ಮಾರಾಟಕ್ಕೆ ತಂದಿದ್ದ 5.4 ಲೀಟರ್ ಮದ್ಯವನ್ನು ಹಾಗೂ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಸವರಾಜು ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ಆತನ ಮೇಲೆ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಬಕಾರಿ ನಿರೀಕ್ಷಕಿ ವನಜಾಕ್ಷಿ ತಿಳಿಸಿದರು.
ದಾಳಿಯಲ್ಲಿ ಅಬಕಾರಿ ಇಲಾಖೆ ಸಬ್ ಇನ್ಸ್ ಪೆಕ್ಟರ್ ಗಳಾದ ಶಿವಣ್ಣ, ಗಂಗಯ್ಯ, ಸಿಬ್ಬಂದಿಗಳಾದ ತಿಮ್ಮಯ್ಯ, ಶಿವಕುಮಾರ್, ಗಂಗರಾಜು, ವಿಶ್ವರೂಪ್, ಶಿವಕುಮಾರ್ ಇದ್ದರು.