Saturday, 12th October 2024

ಲಕ್ಷದವರೆಗೂ ಬಡ್ಡಿರಹಿತ ಸಾಲ ಸೌಲಭ್ಯ : ಅಕ್ಬರ್ ಪಾಷ

ದಾರುಸ್ಸಲಾಮ್ ಸೌಹಾರ್ದ ಸಹಕಾರಿ ಆರಂಭ

ಮಾನವಿ : ತಾಲೂಕಿನಲ್ಲಿ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಬಡ್ಡಿರಹಿತ ಒಂದು ಲಕ್ಷದವರೆಗೂ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ ಎಂದು ದಾರು ಸ್ಸುಲಾಮ್ ಸೌಹಾರ್ದ ಸಹಕಾರಿಯನ್ನು ಆರಂಭವಾಗಲಿದ್ದು ಅಕ್ಟೋಬರ್ 13 ರ ಗುರುವಾರಂದು ಸಹಕಾರಿ ಉದ್ಘಾಟನೆಯಾಗಲಿದೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ಮತ್ತು ಸಹಕಾರಿಯ ಅಧ್ಯಕ್ಷ ಸೈಯದ್ ಅಕ್ಬರ್ ಪಾಷ ಹೇಳಿದರು.

ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ದಾರುಸ್ಸಲಾಮ್ ಫೌಂಡೇಷನ್ ಟ್ರಸ್ಟ್ ಜನ ಸೇವಾ ಕಾರ್ಯಕ್ರಮಗಳಿಗಾಗಿ ಸ್ಥಾಪನೆಗೊಂಡಿರು ವಂತಹ ಸಂಸ್ಥೆ ಈ ಸಂಸ್ಥೆಯು ಸುಮಾರು ವರ್ಷಗಳಿಂದ ಜನ ಪರ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.

ಇದರಲ್ಲಿ ಪ್ರಮುಖವಾಗಿ ವಿಧವೆಯರಿಗೆ ಪ್ರತಿ ತಿಂಗಳು ಪಿಂಚಣಿ, ಕೋವಿಡ್ ಲಾಕ್ ಡೌನ್ ಸಂಧರ್ಭದಲ್ಲಿ ಬಡವರಿಗೆ, ಶಿಕ್ಷಕರಿಗೆ ಆಹಾರದ ಕಿಟ್ ವಿತರಣೆ ಸೇರಿದಂತೆ ಇನ್ನು ಹಲವಾರು ಜನಪರ ಕಾರ್ಯಕ್ರಮಗಳನ್ನು ನೆರವೇರಿಸಲಾಗಿದೆ.

ಇದೀಗ ಮಾನ್ವಿಯಲ್ಲಿರುವ ಸಣ್ಣ ಪುಟ್ಟ ವ್ಯಾಪಾರಿಗಳಿಗೆ, ಬಡವರಿಗೆ ಬಡ್ಡಿ ರಹಿತ ಸಾಲ ಕೊಡಲು ದಾರುಸ್ಸ ಲಾಮ್‌ ಸೌಹಾರ್ದ ಸಹಕಾರಿ ಸಂಘ ವನ್ನು ಸ್ಥಾಪನೆ ಮಾಡಲಾಗಿದೆ. ಈ ಸಹಕಾರಿ ಸಂಘದ ಮೂಲಕ ಬಂಗಾರದ ಮೇಲೆ 0 % ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಲಾಗುವುದು. ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಬೀದಿ ಬದಿ ವ್ಯಾಪಾರಿಗಳಿಗೆ ಮತ್ತು ಕಷ್ಟ ಕಾಲದ ಲ್ಲಿರುವ ಬಡವರಿಗೆ ಸಹಾಯ ಮಾಡಲು ಈ ಸಂಸ್ಥೆಯನ್ನು ಸ್ಥಾಪನೆ ಮಾಡಲಾಗುತ್ತಿದೆ.

ಯಾವುದೇ ಜಾತಿ ಭೇದ ಭಾವ ಗಳಿಲ್ಲದೆ ಈ ಸಂಸ್ಥೆಯಲ್ಲಿ ಅವಶ್ಯಕತೆಗೆ ಅನುಗುಣವಾಗಿ ಒಬ್ಬರಿಗೆ ರೂ. 10,000/ ದಿಂದ ಒಂದು ಲಕ್ಷದಷ್ಟು ಸಾಲ ನೀಡಲಾಗುವುದು. ಈಗಾಗಲೇ ನಗರದ ಪ್ರತಿಷ್ಠಿತ ವ್ಯಾಪಾರಸ್ಥರು ಸಹಕಾರಿ ಸಂಘದ ಜೊತ ಕೈ ಜೋಡಿಸಿದ್ದಾರೆ ಇದಕ್ಕೆ ಈಗಾಗಲೇ ಆಡಳಿತ ಮಂಡಳಿ ಯನ್ನು ಆಯ್ಕೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಹಕಾರಿಯ ಉಪಾಧ್ಯಕ್ಷ ಯೂಸುಫ್ ಖಾನ್ ನಿರ್ದೇಶಕರಾದ ಮಹಮ್ಮದ್ ರಫಿ, ಸಾದಿಕ್ ಪಾಶ, ಮುಹಮ್ಮದ್ ಸಲಿಂ, ಸಬೀರ್ ಪಾಷ,ಅಮೀರ್ ಸಿದ್ದಖಿ,ಎಂ ಎ ಎಚ್ ಮುಖೀಂ,ಮಹಮ್ಮದ್ ಹುಸೇನ್, ಜೀಶಾನ್ ಆಖಿಲ್ ಉಪಸ್ಥಿತರಿದ್ದರು.