Tuesday, 15th October 2024

ವಾಕ್-ಶ್ರವಣ ಶಸ್ತ್ರಚಿಕಿತ್ಸಾ ಕೇಂದ್ರ ಲೋಕಾರ್ಪಣೆ ಜೂ.8 ಕ್ಕೆ

ತುಮಕೂರು: ಪಾವಗಡ ತಾಲೂಕಿನ ಗಡಿ ಭಾಗದಲ್ಲಿ ಜೂ ೮ ರಂದು ವಾಕ್ ಮತ್ತು ಶ್ರವಣ ಶಸ್ತ್ರಚಿಕಿತ್ಸಾ ಕೇಂದ್ರ ಆರಂಭಿಸಲಾಗುತ್ತಿದೆ ಎಂದು ಪಾವಗಡದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಜಪಾನಂದಾಜೀ ಹೇಳಿ ದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಸ್ವಾಮಿ ವಿವೇಕಾನಂದ ನಗರ ಪಾವಗಡ ಹಾಗೂ ಡಾ. ಎಸ್.ಆರ್.ಚಂದ್ರಶೇಖರ್ ಮತ್ತು ಶ್ರವಣ ಸಂಸ್ಥೆ ಬೆಂಗಳೂರು ವತಿಯಿಂದ ಇನ್ಫೋಸಿಸ್ ಫೌಂಡೇಶನ್ ಸಂಸ್ಥೆ ಸಹಯೋಗದೊಂದಿಗೆ ಜೂ. ೮ ರಂದು ಬೆಳಗ್ಗೆ ೧೧ ಗಂಟೆಗೆ ಆರಂಭಿಸಲಾಗುತ್ತಿದೆ ಎಂದರು.
ಮಹಾನಗರಗಳಲ್ಲಿ ದೊರೆಯುವ ಶ್ರವಣ ಹಾಗೂ ವಾಕ್ ದೋಷಗಳ ಪತ್ತೆ ಹಚ್ಚುವಿಕೆ ಹಾಗೂ ಸರಿಪಡಿಸುವಿಕೆಗೆ ತಜ್ಞರ ಸಹಕಾರದಿಂದ ನ್ಯೂನತೆ ಇರುವವರಿಗೆ ಎಲ್ಲ ರೀತಿಯ ಅಭ್ಯಾಸವನ್ನು ಹಾಗೂ ಪರಿಕರಗಳನ್ನು ನೀಡು ವಂತಹ ಯೋಜನೆಯಾಗಿದೆ. ಪಾವಗಡದಂತಹ ಹಿಂದುಳಿದ ಗ್ರಾಮಾಂತರ ಪ್ರದೇಶದಲ್ಲಿ ಆಧುನಿಕ ತಂತ್ರಜ್ಞಾನ ದೊ0ದಿಗೆ ಈಗಾಗಲೇ ನೇತ್ರ ಚಿಕಿತ್ಸೆಗಳನ್ನು, ಕುಷ್ಠರೋಗ, ಕ್ಷಯರೋಗ, ಹೆಚ್.ಐವಿ, ಏಡ್ಸ್ ಮುಂತಾದ ಯೋಜನೆ ಗಳೊಂದಿಗೆ ಇದೀಗ ಸಂಪೂರ್ಣ ಸುಸಜ್ಜಿತವಾದ ಇ.ಎನ್.ಟಿ. ವಿಭಾಗವನ್ನು ನವೀಕರಿಸಿ ಜೊತೆಗೆ ನೂತನ ಆಡಿಯೋಮೆಟ್ರಿ ಸೆಂಟರ್ ಮುಂತಾದವುಗಳನ್ನು ಹಾಗೂ ಬೆಂಗಳೂರಿನ ಡಾ.ಎಸ್.ಆರ್.ಚಂದ್ರಶೇಖರ್ ಸಂಸ್ಥೆಯ ಸಹಕಾರದೊಂದಿಗೆ ಪ್ರತಿ ದಿನ ಈ ಯೋಜನೆಯ ಮೂಲಕ ನೂರಾರು ಜನರಿಗೆ ಸಹಾಯ ನೀಡುವ ಯೋಜನೆಯಾಗಿದೆ ಎಂದರು.
ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆ ಮೆಡಿಕಲ್ ಕಾಲೇಜು ಹಿರಿಯ ಪ್ರಾಧ್ಯಾಪಕಿ ಮುಖ್ಯಸ್ಥೆ ಡಾ. ಭಾರತಿ ಎಂ.ಬಿ. ಅಖಿಲ ಭಾರತ ಕಿವಿ, ಮೂಗು, ಗಂಟಲು ತಜ್ಞರ ಸಂಘದ ಅಧ್ಯಕ್ಷ ಮತ್ತು ನಿರ್ದೇಶಕ ಕೃಷ್ಣಾರೆಡ್ಡಿ, ಡಿಹೆಚ್‌ಒ ಡಾ.ಮಂಜುನಾಥ್ ಭಾಗವಹಿಸಲಿದ್ದಾರೆ ಎಂದರು.