Thursday, 12th December 2024

ನ.9ರಂದು ಶ್ರೀಹಡಪದ ಅಪ್ಪಣ್ಣನವರ ಕಂಚಿನ ಮೂರ್ತಿ ಲೋಕಾರ್ಪಣೆ

ಇಂಡಿ: ನ.9ರಂದು ಶ್ರೀಹಡಪದ ಅಪ್ಪಣ್ಣನವರ ಕಂಚಿನ ಮೂರ್ತಿ ಲೋಕಾರ್ಪಣೆಗೊಳ್ಳಲ್ಲಿದ್ದು ಮಾಜಿ ಮುಖ್ಯ ಮಂತ್ರಿ ಕೇಂದ್ರದ ಮಾಜಿ ಸಚಿವರಾದ ಎಮ್ .ವೀರಪ್ಪ ಮೊಯ್ಲಿ ಉದ್ಘಾಟಿಸಲ್ಲಿದ್ದಾರೆ ಎಂದು ಹಡಪದ ಅಪ್ಪಣ್ಣನವರ ಸಮಾಜ ಅಧ್ಯಕ್ಷ ಸಿದ್ದು. ಎಂ ನಾವಿ, ಸಿದ್ದರಾಯ ಅಪ್ತಾಗಿರಿ ಜಂಟಿ ಹೇಳಿಕೆ ನೀಡಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಶ್ರೀಹಡಪದ ಅಪ್ಪಣ್ಣನವರ ಕಂಚಿನ ಮೂರ್ತಿ ಉದ್ಘಾಟನೆ ಹಾಗೂ ಇಂಡಿ ತಾಲೂಕಾ ಹಡಪದ ಅಪ್ಪಣ್ಣನವರ ಸಮಾಜದ ಜನಜಾಗೃತಿ ಸಮಾವೇಶ ಕಾರ್ಯಕ್ರಮ ಕೇಂದ್ರ ಮಾಜಿ ಸಚಿವ ಎಮ್ ವೀರಪ್ಪ ಮೋಯ್ಲಿ ಮೂರ್ತಿ ಉದ್ಘಾಟಿಸಲ್ಲಿದ್ದು ಈ ಕಾರ್ಯಕ್ರಮ ದಿವ್ಯಸಾನಿಧ್ಯ ಅನ್ನಧಾನಿ ಭಾರತಿ ಮಹಾಸ್ವಾಮಿಗಳು, ಪೂಜ್ಯ ಅಮೃತಾನಂದ ಮಹಾಸ್ವಾಮಿಗಳು, ಪೂಜೆ ಈಶಪ್ರಸಾದ ಸ್ವಾಮಿಗಳು, ಸ್ವರೂಪಾನಂದ ಸ್ವಾಮಿಗಳು ಸಾನಿಧ್ಯವಹಿಸಿಲ್ಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ಶಾಸಕ ಯಶವಂತರಾಯಗೌಡ ಪಾಟೀಲ, ಮುಖ್ಯ ಅತಿಥಿಗಳಾಗಿ ಸಂಸದ ರಮೇಶ ಜಿಗಜಿಣಗಿ, ವಿನಯಪೂರ ನಗರ ಶಾಸಕ ಬಸವನಗೌಡ ಪಾಟೀಲ (ಯತ್ನಾಳ), ವಿಠ್ಠಲ ಕಟಕದೊಂಡ. ಹಡಪದ ಅಪ್ಪಣ್ಣನವರ ಸಮಾಜ ರಾಜ್ಯಾಧ್ಯಕ್ಷ ಸಿದ್ದಣ್ಣಾ ಹಡಪದ, ಕಾಸುಗೌಡ ಬಿರಾದಾರ, ಬಿ.ಡಿ ಪಾಟೀಲ, ಸೇರಿದಂತೆ ಅನೇಕ ರಾಜಕೀಯ ಮುಖಂಡರು ,ಸಮಾಜದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮುಂಜಾನೆ ೯ -೦೦ ಗಂಟೆಗೆ ಶ್ರೀಹಡಪದ ಅಪ್ಪಣ್ಣನವರ ಕಂಚಿನ ಮೋರ್ತಿಯ ಮೇರವಣಿಗೆ ಸುಮಾರು ೧೦೦೧ ಮುತೈದಿಯರು ಕುಂಭ ಹೊತ್ತು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವುದು ಮೇರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಚಿಟಲಿಗೆ, ಬ್ಯಾಂಜೋ ವಿವಿಧ ವಾದ್ಯ ವೈಭೋಗಗಳೊಂದಿಗೆ ಮೆರವಣಿಗೆ ನಡೇಯುವುದು. ನಂತರ ೧೧-೦೦ ಗಂಟೆಗೆ ಹಡಪದ ಅಪ್ಪಣ್ಣನವರ ಮೋರ್ತಿ ಉದ್ಘಾಟನೆಗೊಳ್ಳಲಿದೆ ನಂತರ ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೇಯಲಿದೆ ಆದ್ದರಿಂದ ತಾಲೂಕಿನ ಸಮಾಜದ ಬಂಧು ಬಾಂಧವರು, ಸಾರ್ವಜನಿ ಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವೀಗೋಳಿಸಬೇಕು ಎಂದು ಪತ್ರಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಧ್ಯಕ್ಷ ಸಿದ್ದು ನಾವಿ. ಬಸವರಾಜ ನಾವಿ, ಶಿವಾನಂದ ನಾವಿ, ಸಂತೋಷ ಗೌಳಿ, ನಟರಾಜ ಗೌಳಿ, ಧೂಳ್ಳಪ್ಪ ನಾವಿ, ರಮೇಶ ನಾವಿ, ಎಸ್.ಎ ಅಪ್ತಾಗಿರಿ, ಪ್ರಶಾಂತ ಕಟ್ಟಿ, ಹಣಮಂತ ಭಾವಿಕಟ್ಟಿ, ಬಾಳು ಗೌಳಿ, ಗಡ್ಡೆಪ್ಪ ನಾವಿ ಸೇರಿದಂತೆ ಅನೇಕ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.