Sunday, 15th December 2024

ಚಂದ್ರ ಗ್ರಹಣ: ಸಂಜೆ ದೇವರ ದರ್ಶನಕ್ಕೆ ಅವಕಾಶವಿಲ್ಲ

ಮೈಸೂರು: ಶನಿವಾರ ಚಂದ್ರ ಗ್ರಹಣವಿರುವ ಹಿನ್ನೆಲೆಯಲ್ಲಿ, ಸಂಜೆ 6 ಗಂಟೆ ನಂತರ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.

ಗ್ರಹಣ ಕಾಲದಲ್ಲಿ ದೇವಾಲಯದಲ್ಲಿ ಪೂಜಾ ಕಾರ್ಯ ಜರುಗಲಿದ್ದು, ನಂತರ ಭಾನುವಾರ ಬೆಳಿಗ್ಗೆ 7.30ಕ್ಕೆ ಜನರಿಗೆ ದರ್ಶನಕ್ಕೆ ದೇವಸ್ಥಾನ ತೆರೆಯಲಿದೆ. 6 ಗಂಟೆಗೆ ಉತ್ಸವ ಮೂರ್ತಿ ದೇವಸ್ಥಾನಕ್ಕೆ ವಾಪಸ್ ಆಗಲಿದೆ.

ಮೂರ್ತಿ ದೇವಸ್ಥಾನಕ್ಕೆ ಬರುತ್ತಿದ್ದಂತೆ ದೇವಸ್ಥಾನ ಬಂದ್ ಆಗಲಿದೆ. ಈ ನಡುವೆ ಚಂದ್ರಗ್ರಹಣ ಹಿನ್ನೆಲೆ ಕುಕ್ಕೆ ದೇವಳದ ಪ್ರಧಾನ ಅರ್ಚಕರ ನಿರ್ದೇಶನ ದಂತೆ ಭಕ್ತರಿಗೆ ಶ್ರೀದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಅ.28ರಂದು ಶನಿವಾರ ರಾತ್ರಿಯ ಮಹಾಪೂಜೆ ಸಾಯಂಕಾಲ 6.30ಕ್ಕೆ ಮುಕ್ತಾಯಗೊಳ್ಳಲಿದೆ. ಆ ಬಳಿಕ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ ಅಂತ ಅಡಳಿತ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.