ರವಿ ಪಾಟೀಲ ಹುಟ್ಟು ಹಬ್ಬ ಆಚರಣೆ
ರಾಯಚೂರು: ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲಪಡಿಸುವ ಕಾರ್ಯ ನಡೆಸುತ್ತಿದ್ದು ಈ ಬಾರಿ ಹೆಚ್ಚಿನ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗಳು ಗೆಲುವು ಸಾಧಿಸಲು ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ತಿಳಿಸಿದರು.
ನಗರದ ಮಂತ್ರಿ ಗಾರ್ಡನ್ ನಲ್ಲಿ ಈಚೆಗೆ ರವಿ ಪಾಟೀಲ್ ಪೌಂಡೇಶನ್ ಹಾಗೂ ಅವರ ಅಭಿಮಾನಿಗಳಿಂದ ಆಯೋಜಿಸಿದ್ದ ಜೆಡಿಎಸ್ ಮುಖಂಡ ರವಿ ಪಾಟೀಲ್ ಅವರ 44ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು ಮುಂದೆ ದೊಡ್ಡ ಮಟ್ಟದ ನಾಯಕರಾಗಿ ರೂಪಗೊಳ್ಳಲಿದ್ದಾರೆ. ಈ ಭಾಗದ ಜನರ ನಿರೀಕ್ಷೆಯಂತೆ ಕೆಲಸ ಮಾಡಲಿದ್ದಾರೆ. ಪಕ್ಷದ ರಾಜ್ಯ ಸಮಿತಿಯ ಆದೇಶದಂತೆ ರವಿ ಪಾಟೀಲರು ಕಾರ್ಯಕರ್ತರ ಮಧ್ಯೆ ಕೆಲಸ ಮಾಡಲಿ ದ್ದಾರೆ ಎಂದು ಹೇಳಿದರು.
ಜೆಡಿಎಸ್ ನಿಂದ ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ, ಯುವ ಸಬಲೀಕರಣ ಸೇರಿ ಪಂಚರತ್ನ ಉತ್ಸವ ಮಾಡುವ ಮೂಲಕ ಅಭಿವೃದ್ಧಿಗೆ ಗಮನ ಕೊಡುತ್ತೇವೆ. ರಾಜ್ಯದಲ್ಲಿ ಕೋಮು ದಳ್ಳುರಿ, ಧರ್ಮಾಧಾರಿತ ಆಡಳಿತ, ಯುವ, ಜನವಿರೋಧಿ ನೀತಿ ಅನುಸರಿಸು ತ್ತಿದ್ದು, ಸರ್ವ ಧರ್ಮಗಳ ಸಮನ್ವಯತೆ, ಶಾಂತಿಯ ತೋಟ ಕಾಣಬೇಕಾದರೆ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಉಪಾಧ್ಯಕ್ಷ ಮಹಾತೇಶ ಪಾಟೀಲ ಅತ್ತನೂರು ಮಾತನಾಡಿ, ಎರಡು ರಾಷ್ಟ್ರೀಯ ಪಕ್ಷಗಳನ್ನು ಬದಿಗಿರಿಸಿ ಮುಂಬರುವ ದಿನಗಳಲ್ಲಿ ಮತದಾರರು ಜೆಡಿಎಸ್ ಗೆ ಬಹುಮತ ನೀಡಲಿದ್ದಾರೆ. ಕುಮಾರಸ್ವಾಮಿ ದೇವರು, ಜನರನ್ನು ಪ್ರೀತಿಸುವ ಮನೋಭಾವ ಹೊಂದಿದ್ದಾರೆ. ಮತ್ತೊಮ್ಮೆ ಕುಮಾರಸ್ವಾಮಿಗೆ ಅವಕಾಶ ನೀಡಿದರೆ ರೈತರ, ದೀನ ದಲಿತರಿಗೆ, ರಾಜ್ಯದ ಸಮರ್ಪಕ ಅಭಿವೃಧ್ಧಿಗೆ ಶ್ರಮಿಸಲಿದ್ದಾರೆ. ನಗರ ಕ್ಷೇತ್ರ್ಕಕೆ ನಾನು ಟಿಕೆಟ್ ಪಡೆಯಲು ಯತ್ನಿಸಿದ್ದು ಪಕ್ಷದ ತೀರ್ಮಾನದಂತೆ ನಿರ್ಣಯವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ, ತಾಲ್ಲೂಕು ಘಟಕದ ಪದಾಧೀಕಾರಿಗಳು ಹಾಗೂ ರವಿ ಪಾಟೀಲ ಅಭಿಮಾನಿಗಳು ಸನ್ಮಾನಿಸಿ ಶುಭ ಕೋರಿದರು. ಈ ವೇಳೆ ಮುಖಂಡ ಅಕ್ಬರ್ ನಾಗುಂಡಿ, ರಾಮಕೃಷ್ಣ, ದಾನಪ್ಪ ಮತ್ತಿತರರು ಇದ್ದರು.