Thursday, 12th December 2024

ಮಂಡ್ಯ ಕೃಷಿ ವಿ.ವಿ ಸ್ಥಾಪನೆಗೆ ಪರಿಶಿಲನಾ ಸಮಿತಿ ರಚನೆ

ಬೆಂಗಳೂರು: ಮಂಡ್ಯ ಜಿಲ್ಲೆಯ ವಿ.ಸಿ ಫಾರ್ಮ್ ನಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಪರಿಶೀಲನೆಗಾಗಿ ಆರು ಮಂದಿ ತಜ್ಞರ ಸಮಿತಿ ರಚಿಸಿ‌ ಆದೇಶ ಹೊರಡಲಿಸಲಾಗಿದೆ.

ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ ರಾಜೇಂದ್ರ ಪ್ರಸಾದ್ ಅವರು ಸಮಿತಿಯ ಅಧ್ಯಕ್ಷರಾಗಿದ್ದು ಧಾರವಾಡ ಕೃಷಿ ವಿಶ್ವ ವಿದ್ಯಾನಿಲಯದ ಕುಲಪತಿ ಡಾ ಪಿ.ಎಲ್ ಪಾಟೀಲ್ ಬೆಂಗಳೂರು ಕೃಷಿ ವಿ.ವಿ ನಿವೃತ್ತ ಕುಲ ಸಚಿವರಾದ ಡಾ ಎ.ಬಿ ಪಾಟೀಲ್, ಬೆಂಗಳೂರು ಕೃಷಿ.ವಿ.ವಿ ನಿವೃತ್ತ ಆಡಳಿತಾಧಿಕಾರಿ ಡಾ ಕೆ.ಎಂ ಹರಿಣಿಕುಮಾರ್ ಆಡಳಿತ ಸುಧಾರಣಾ ಇಲಾಖೆಯ ನಿವೃತ್ತ ಜಂಟಿ ಕಾರ್ಯದರ್ಶಿ ಚಂದ್ರಹಾಸ್ ಜಿ ತಾಳೂಕರ ಅವರುಗಳು ಸಮಿತಿಯ ಸದಸ್ಯರಾಗಿದ್ದು ಧಾರವಾಡ ಕೃಷಿ ವಿ.ವಿ ಶೈಕ್ಷಣಿಕ ನಿರ್ದೇಶಕರಾದ ಡಾ ವಿ.ಆರ್ ಕಿರೇಸೂರ್ ಅವರನ್ನು ಸದಸ್ಯ ಸಂಚಾಲಕರ ನ್ನಾಗಿ ನೇಮಿಸಲಾಗಿದೆ.

ಫೆ15 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು‌ ಮಂಡಿಸಿದ ಬಜೆಟ್ ನಲ್ಲಿ ಮಂಡ್ಯ ವಿ.ಸಿ ಫಾರ್ಮನಲ್ಲಿ ಕೃಷಿ ವಿವಿ ಸ್ಥಾಪನೆ ಕುರಿತು ಪರಿಶೀಲನೆಗೆ ತಜ್ಞರ ಸಮಿತಿ ರಚಿಸುವ ಬಗ್ಗೆ ಘೋಷಣೆ ಮಾಡಲಾಗಿತ್ತು . ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಗಮನ ಹರಿಸಿ ಒಂದು ತಿಂಗಳೊಳಗಾಗಿ
ತಜ್ಞರ ಸಮಿತಿ ರಚನೆಯಾಗುವಂತೆ ಕ್ರಮವಹಿಸಿದ್ದಾರೆ. ಮಂಡ್ಯ ಜಿಲ್ಲೆಯ ಜನರು ಇದಕ್ಕಾಗಿ ಕೃಷಿ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.