Thursday, 12th December 2024

ಜು.೨೮ ರಂದು ಆಜೀವ ಸದಸ್ಯರ ವಾರ್ಷಿಕ ಮಹಾಸಭೆ

ತಿಪಟೂರು: ತಾಲ್ಲೂಕು ಕನ್ನಡ ಸಾಹಿತ್ಯ ಪರಿ?ತ್ತಿನ ಆಜೀವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ೨೮ ಜುಲೈ ಭಾನುವಾರ ಮಧ್ಯಾಹ್ನ ೨.೦೦ ಗಂಟೆಗೆ ತಿಪಟೂರು ತಾಲ್ಲೂಕಿನ ಕೆ.ಬಿ.ಕ್ರಾಸ್ ಶ್ರೀ ರಂಭಾಪುರಿ ಪ್ರೌಢಶಾಲಾ ಆವರಣದಲ್ಲಿ ಕರೆಯಲಾಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷ ಬಸವರಾಜಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ತಿಪಟೂರು ತಾಲ್ಲೂಕಿನಲ್ಲಿ ಸುಮಾರು ೧೫೦೦ ಕ್ಕೂ ಹೆಚ್ಚು ಆಜೀವ ಸದಸ್ಯರು ನೋಂದಣಿಯಾಗಿದ್ದು, ಈ ಪೈಕಿ ನಿಧನರಾದವರು ಹಾಗೂ ಸ್ಥಳದ ಬದಲಾವಣೆ ಮಾಡಿರುವ ಸದಸ್ಯರುಗಳ ಬಗ್ಗೆ ಮಾಹಿತಿ ಅಗತ್ಯವಿದೆ. ಈ ಸಭೆಯಲ್ಲಿ ಆಜೀವ ಸದಸ್ಯರ ಪಟ್ಟಿಯ ಪರಿ?ರಣೆ ಬಗ್ಗೆ ಚರ್ಚಿಸಲಾ ಗುತ್ತದೆ. ಪರಿ?ರಣೆ ಮಾಡಲಾದ ಅಂತಿಮ ಆಜೀವ ಸದಸ್ಯರ ಪಟ್ಟಿ ತಯಾರಿಸಿ, ಕೇಂದ್ರ ಸಾಹಿತ್ಯ ಪರಿ?ತ್ತಿಗೆ ಕಳುಹಿಸಬೇಕಾಗಿದೆ.

ತಾಲ್ಲೂಕು ಸಾಹಿತ್ಯ ಪರಿ?ತ್ತಿನ ವಾರ್ಷಿಕ ಆದಾಯ ಮತ್ತು ವೆಚ್ಚಗಳು, ಈ ವ?ದ ಹೋಬಳಿ ಮತ್ತು ತಾಲ್ಲೂಕು ಸಾಹಿತ್ಯ ಸಮ್ಮೇಳನಗಳು ಹಾಗೂ ಇತರೆ ವಿಚಾರಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಬೇಕಾಗಿದೆ. ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರುಗಳು ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸ ಬೇಕೆಂದು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.