Sunday, 15th December 2024

ಕ.ಸಾ.ಪ. ಮಾಜಿ ಅಧ್ಯಕ್ಷ ಮೇಜರ್ ಡಿ.ಚಂದ್ರಪ್ಪ ನಿಧನ

ತುಮಕೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು ಹಾಗೂ ಪ್ರೊ. ಮೇಜರ್ ಡಿ.ಚಂದ್ರಪ್ಪ (76 ವರ್ಷ) ಅವರು ಜೂ.8ರಂದು ಮಧ್ಯಾಹ್ನ 2 ಗಂಟೆಯಲ್ಲಿ ನಿಧನ ಹೊಂದಿದರು.

ಚಂದ್ರಪ್ಪ ಅವರು ಕಳೆದ ಒಂದು ವಾರದಿಂದ ಅನಾರೋಗ್ಯ ಕ್ಕೆ ತುತ್ತಾಗಿ ಸಿದ್ಧಗಂಗಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ನಿಧನ ಹೊಂದಿದ್ದಾರೆ. ಮೇಜರ್ ಡಿ.ಚಂದ್ರಪ್ಪ ಅವರು ತಮ್ಮ ಅಧ್ಯಾಪಕ ವೃತ್ತಿಯಿಂದ ನಿವೃತ್ತಿ ಹೊಂದಿದ ನಂತರ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದರು.

ಕಳೆದ ಎರಡು ಕ.ಸಾ.ಪ.ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಚಟುವಟಿಕೆ ಯಿಂದಲೇ ಇದ್ದ ಚಂದ್ರಪ್ರನವರು ಕಳೆದ ವಾರ ತೀವ್ರ ಅನಾರೋಗ್ಯ ಕ್ಕೆ ತುತ್ತಾಗಿ ಆಸ್ಪತ್ರೆ ಗೆ ದಾಖಲಾಗಿದ್ದರು. ಮೃತರು ಮೂವರು ಹೆಣ್ಣು ಮಕ್ಕಳು, ಪತ್ನಿ, ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.

ಗುಬ್ಬಿ ತಾಲ್ಲೂಕಿನ ಕುಪ್ಪೂರು ಪಾಳ್ಯದ ಅವರ ತೋಟದಲ್ಲಿ ನಾಳೆ ಬೆಳಿಗ್ಗೆ 11ಕ್ಕೆ ನಡೆಯಲಿದೆ.