ಇಂಡಿ: ಇಂಡಿ- ತಾಲೂಕಿನ ಕೊಟ್ನಾಳ ಗ್ರಾಮದಲ್ಲಿ ಶನಿವಾರ ಶ್ರೀಯಲ್ಲಮ್ಮಾದೇವಿಯ ಮಾಲಗಂಭ ವಿಶೇಷ ಪೂಜೆ ಹಾಗೂ ಧರ್ಮ ಸಭೆ ನಡೆಯಿತು.
ಈ ಸಂಧರ್ಬದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಉಪನ್ಯಾಸಕ ಮಹೇಶ ಕಾಂಬಳೆ ಮಾತನಾಡಿ ಶ್ರೀರೇಣುಕಾ ಯಲ್ಲಮ್ಮಾ ಯಲ್ಲರ ತಾಯಿ ಎಲ್ಲಮ್ಮ ಭಕ್ತಿಯಿಂದ ಶೃದ್ಧೆಯಿಂದ ನಮಿಸಿದರೆ ಬೇಡಿದವರಿಗೆ ಇಷ್ಠಾರ್ಥಿಗಳನ್ನು ಪೂರೈಸುವ ಮಹಾದಿವ್ಯಶಕ್ತಿ ಆಗಿದ್ದಾಳೆ. ಶ್ರೀಯಲ್ಲಮ್ಮಾ ಮಹಾತಾಯಿಗೆ ಶ್ರೀರೇಣುಕಾ, ಆದಿಶಕ್ತಿ, ಜಗದಂಬಾ ,ಜಗನ್ಮಾತೆ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಕೊಟ್ನಾಳ ಗ್ರಾಮದ ಪುಟ್ಟ ಗ್ರಾಮ ಇದ್ದರೂ ಸಹಿತ ಬೃಹತ್ ಕೊಟೆ ಹೊಂದಿದೆ. ದೇಶಮುಖ್ಯ ಎಂಬ ಮನೇತನದವರು ಪ್ರಖ್ಯಾತರಾಗಿದ್ದು ಇಲ್ಲಿ ಪ್ರಮುಖ ಕೋಟೆ ಇದ್ದು ಶ್ರೀಯಲ್ಲಮ್ಮಾದೇವಿಯ ದೇವಿಯ ಗುಡಿಯ ಹತ್ತಿರ ಕೋಟೆ ವಿಹಂಗಮವಾಗಿದೆ, ದೇಶಮುಖ ಮನೇತನದವರಿಗೆ ತಾಯಿ ಆರ್ಶೀವಾದ ಇದೆ ಎಂಬುದು ಇತಿಹಾಸ.
ಜಾತ್ರೆ ಹಬ್ಬ ಹರಿದಿನಗಳು ಸಾಮರಸ್ಯದ ಸಂಕೇತ ಇಂತಹ ಆಚರಣೆಗಳಿಂದ ಜನರಲ್ಲಿ ಸೌರ್ಹಾದತೆ ಮೂಡುತ್ತದೆ ,ಭಾರತ ಭಾವೈಕ್ಯತೆಯ ಬೀಡು ಪಂಡಿತ ನೇಹರು ಹೇಳಿದಂತೆ ಮಲ್ಪಿಪಲ್ಲ ಪಾಟ್ ಎಂದಿದ್ದಾರೆ. ಕೊಟ್ನಾಳ ಗ್ರಾಮದ ಸರ್ವಜರು ಜಾತ್ಯಾತೀತ ಆಚರಣೆ ಮಾಡಿರುವುದು ಇಡೀ ಗ್ರಾಮಕ್ಕೆ ಸಂಧಗೌರವ ಎಂದರು.
ಭಾರತ ದೇಶ ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ ಕೊಟ್ನಾಳ ಗ್ರಾಮ ಇತಿಹಾಸದ ಪುಟದಲ್ಲಿದೆ. ಸರ್ವಶಕ್ತಿ ಮಾತೆ ಯಲ್ಲಮ್ಮ ಯಲ್ಲರ ಅಮ್ಮ ಇಡೀ ಮಾನವ ಕುಲಕೋಟಿಯನ್ನು ಉದ್ದರಿಸಿದ್ದಾಳೆ. ವಿಶ್ವಾಸ ನಂಬಿಕೆ ಇದ್ದವರಿಗೆ ಕಾಮದೇನು ಕಲ್ಪವೃಕ್ಷ ಬೇಡಿದ ಭಕ್ತರಿಗೆ ಇಷ್ಠಾರ್ಥಿಪೂರೈಸುತ್ತಾಳೆ ಎಂದು ವಿಶ್ವವಾಣಿ ಪತ್ರಕರ್ತ ಶರಣು ಕಾಂಬಳೆ ಹೇಳಿದರು.
ಮಹೇಶ ಕಾಂಬಳೆ, ಬಾಸ್ಕರ ಹೊಸಮನಿ, ವಿಜಯಕುಮಾರ ಕಾಂಬಳೆ, ರವಿ ಕಾಂಬಳೆ,ಬಸವರಾಜ ದೊಡಮನಿ, ಮಂಜುನಾಥ ಕಾಂಬಳೆ, ಪರಶುರಾಮ ಕಾಂಬಳೆ, ಅನೀಲ ಹೊಸಮನಿ, ಹಣಮಂತ ಕಟ್ಟಿಮನಿ, ಹೊನ್ನಪ್ಪ ಕಾಂಬಳೆ, ಯಲ್ಲಪ್ಪ ಕಾಂಬಳೆ, ಚೆನ್ನಬಸು ಹೊಸಮನಿ, ಹುಸೇನನಿ ಹೊಸಮನಿ, ಹುಚ್ಚಪ್ಪ ಕಾಂಬಳೆ, ಯೋಗೆಶ ಕಾಂಬಳೆ, ಸಾಗರ ಕಾಂಬಳೆ, ಗಣೇಶ ಹೊಸಮನಿ, ಮುತಪ್ಪ ಕಾಂಬಳೆ, ಚಂದ್ರಕಾAತ ಗೊಡೇಕರ, ಮುತ್ತಪ್ಪ ಗೊಡೇಕರ್,ರವಿಕುಮಾರ ಪೂಜಾರಿ, ಸುರೇಶ ಪೂಜಾರಿ, ವಿಶ್ವನಾಥ ಪೂಜಾರಿ ,ಸಿದ್ದಪ್ಪ ಹೊಸಮನಿ, ಸುರೇಶ ಕಾಂಬಳೆ,ರಾಹುಲ ಹೊಸಮನಿ,ರಾಹುಲ ಕಾಂಬಳೆ, ದಿಲೀಪ ಕಾಂಬಳೆ, ಈರಣ್ಣಾ ಕಾಂಬಳೆ,ಮಲ್ಲಪ್ಪ ಪೂಜಾರಿ, ಸಾಯಬಣ್ಣಾ ಕಾಂಬಳೆ, ಮಾಳಪ್ಪ ಕಾಂಬಳೆ.ಸAತೋಷ ಕಾಂಬಳೆ ಸೇರಿದಂತೆ ಅನೇಕರು ಇದ್ದರು.