Sunday, 15th December 2024

ವಿದ್ಯುತ್ ಶಾಕ್‌ನಿಂದ ಇಬ್ಬರು ಆಟೋ ಚಾಲಕರು ಸಾವು

ಮಂಗಳೂರು: ವಿದ್ಯುತ್ ಶಾಕ್‌ನಿಂದಾಗಿ ಇಬ್ಬರು ಆಟೋ ಚಾಲಕರು ಮೃತಪಟ್ಟಿದ್ದಾರೆ. ರಾಜು ಮತ್ತು ದೇವರಾಜು ಮೃತ ಆಟೋ ಚಾಲಕರಾಗಿದ್ದಾರೆ.

ಬೆಳಗ್ಗೆ ಆಟೋ ಸ್ವಚ್ಛ ಮಾಡುತ್ತಿದ್ದಾಗ ಆಟೋ ಚಾಲಕ ವಿದ್ಯುತ್ ತಂತಿ ಸ್ಪರ್ಶಿಸಿದ್ದ. ಈ ಸಂದರ್ಭದಲ್ಲಿ ಆತನ ರಕ್ಷಣೆಗೆ ಮತ್ತೋರ್ವ ಚಾಲಕ ತೆರಳಿದಾಗ ಈ ವೇಳೆ ಇಬ್ಬರಿಗೂ ಕರೆಂಟ್‌ ಶಾಕ್‌ ಹೊಡೆದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಭಾರೀ ಗಾಳಿ ಮಳೆಗೆ ವಿದ್ಯುತ್ ತಂತಿ ಮುರಿದು ಬಿದ್ದಿತ್ತು. ಇದರ ಅರಿವು ಇರದೆ ರಾಜು ಹಾಗೂ ದೇವರಾಜು ವಿದ್ಯುತ್‌ ತಂತಿ ಮೇಲೆ ಕಾಲಿಟಿದ್ದರಿಂದ ಈ ಅವಘಡ ಸಂಭವಿಸಿದೆ. ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.