Saturday, 14th December 2024

ಮಂಗಳೂರು ಆಟೋ ಬ್ಲಾಸ್ಟ್: ನಕಲಿ ಆಧಾರ್ ಕಾರ್ಡಿನ ಅಸಲಿ ವ್ಯಕ್ತಿ ತುಮಕೂರು ರೈಲ್ವೆ ಸಿಬ್ಬಂದಿ

ತುಮಕೂರು: ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಮಂಗಳೂರಿನಲ್ಲಿ ಆಟೋ ಸ್ಪೋಟ ಪ್ರಕರಣದಲ್ಲಿ ಪತ್ತೆಯಾದ ಆಧಾರ್ ಕಾರ್ಡ್ ತುಮಕೂರಿನಲ್ಲಿ ಕೆಲಸ ಮಾಡುತ್ತಿರುವ ರೈಲ್ವೆ ಸಿಬ್ಬಂದಿಯ ದಾಗಿದ್ದು ಆತನನ್ನು ಎಸ್‌ಪಿ ರಾಹುಲ್‌ಕುಮಾರ್ ಶಹಾಪುರ್ ವಾಡ್ ವಿಚಾರಣೆ ನಡೆಸಿದ್ದಾರೆ.
ಮಂಗಳೂರಿನ ಹೊರವಲಯದ ನಾಗುರಿಯಲ್ಲಿ ನ. ೧೯ ರಂದು ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಗಾಯಾಳು ವ್ಯಕ್ತಿ ಬಳಿ ಆಧಾರ್ ಕಾರ್ಡ್ ಪತ್ತೆಯಾಗಿದ್ದು ಅದು ಪ್ರೇಮರಾಜ್ ಹುಟಗಿ ಎಂದು ಇತ್ತು. ಆದರೆ ಅಸಲಿ ಪ್ರೇಮರಾಜ್ ಹುಟಗಿ ತುಮಕೂರಿನಲ್ಲಿ ರೈಲ್ವೆ ಟ್ರಾಕ್ ಮೇನ್‌ಟೈನರ್ ಆಗಿ ಕೆಲಸ ಮಾಡುತ್ತಿದ್ದು ಆಟೋದಲ್ಲಿ ಪತ್ತೆಯಾದ ಆಧಾರ್ ಕಾರ್ಡ್ ನಕಲಿ ಎಂದು ತಿಳಿದುಬಂದ ಬೆನ್ನಲ್ಲೇ ಅಸಲಿ ವ್ಯಕ್ತಿಯ ವಿಚಾರಣೆ ಪ್ರಾರಂಭವಾಗಿದೆ. ತುಮಕೂರಿನಲ್ಲಿ ರೈಲ್ವೆ ಟ್ರಾಕ್ ಮೇನ್‌ಟೈನರ್ ಆಗಿ ಕೆಲಸ ಮಾಡುತ್ತಿರುವ ಪ್ರೇಮರಾಜ್ ಹುಟಗಿ ಹುಬ್ಬಳ್ಳಿ ಮೂಲದವರಗಿದ್ದು ತುಮಕೂರಿನ ಹಿರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿ ದ್ದಾರೆ.
ಎರಡು ಬಾರಿ ಕಳೆದಿತ್ತು ಆಧಾರ್ ಕಾರ್ಡ್: ಇನ್ನು ಪ್ರಕರಣ ಸಂಬಂಧ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪುರ್ ವಾಡ್ ಅವರನ್ನು ಭೇಟಿ ಮಾಡಿರುವ ಪ್ರೇಮರಾಜ್ ಹುಟಗಿ ಕಳೆದ ಎರಡು ವರ್ಷದಲ್ಲಿ ಎರಡು ಬಾರಿ ಆಧಾರ್ ಕಾರ್ಡ್ ಕಳೆದುಕೊಂಡಿದ್ದಾಗಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದವ ರೊಂದಿಗೆ ಮಾತನಾಡಿದ್ದು ನಾನು ಹುಟ್ಟಿ ಬೆಳೆದಿದ್ದು ಹುಬ್ಬಳ್ಳಿಯಲ್ಲಿ ನನ್ನ ಶಿಕ್ಷಣ ನಡೆದಿದ್ದೂ ಸಹ ಹುಬ್ಬಳ್ಳಿಯಲ್ಲಿಯೇ ರೈಲ್ವೇ ಇಲಾಖೆಯಲ್ಲಿ ತುಮಕೂರಿನಲ್ಲಿ ರೈಲ್ವೆ ಟ್ರಾಕ್ ಮೇನ್‌ ಟೈನರ್ ಆಗಿ ಕಳೆದ ಮೂರೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದೇನೆ.
ನಾನು ಎರಡು ಬಾರಿ ಆಧಾರ್ ಕಾಡ್ ð ಕಳೆದುಕೊಂಡಿದ್ದೇನೆ. ಒಮ್ಮೆ ಧಾರವಾಡದಿಂದ ಬೆಳಗಾವಿಗೆ ಬಸ್‌ನಲ್ಲಿ ಬರುವಾಗ ಆಧಾರ್ ಕಾರ್ಡ್ ಕಳೆದುಕೊಂಡಿದ್ದು ಮತ್ತೆ ಅರ್ಜಿ ಹಾಕಿ ಆಧಾರ್ ಕಾರ್ಡ್ ಪಡೆದುಕೊಂಡಿದ್ದು ಕಳೆದ ಆರು ತಿಂಗಳ ಹಿಂದೆ ಹುಬ್ಬಳ್ಳಿ ಯಿಂದ ಬಸ್‌ನಲ್ಲಿ ಬರುವಾಗ ಮತ್ತೊಮ್ಮೆ ಆಧಾರ್ ಕಾರ್ಡ್ ಕಳೆದುಹೋಗಿತ್ತು.
ಶನಿವಾರ ರಾತ್ರಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಕರೆ ಮಾಡಿ ಆಟೋ ಸ್ಪೋಟ ಪ್ರಕರಣ ಸಂಬಂಧ ಕೂಡಲೇ ತುಮಕೂರು ಎಸ್‌ಪಿ ಅವರನ್ನು ಸಂಪರ್ಕಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಎಸ್‌ಪಿ ರಾಹುಲ್ ಕುಮಾರ್ ಶಹಪುರ್ ವಾಡ್ ಅವರನ್ನು ಸಂಪರ್ಕ ಮಾಡಿ ಮಾಹಿತಿ ನೀಡಲಾಗಿದೆ. ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ನಿನ್ನೆ ನಮ್ಮ ಮನೆಗೆ ಪೊಲೀಸರು ಬಂದು ಪರಿಶೀಲನೆ ಮಾಡಿದ್ದಾರೆ ಎಂದು ತಿಳಿಸಿದರು.