Sunday, 15th December 2024

Martyrs Day: ಹುತಾತ್ಮರ ದಿನಾಚರಣೆ ಇಂದು

ತುಮಕೂರು: ಸ್ವಾತಂತ್ರ್ಯ ಭಾರತಕ್ಕಾಗಿ ಸತ್ಯಾಗ್ರಹ ಸಮರದಲ್ಲಿ ಹೋರಾಡಿ ಬಲಿದಾನ ಮಾಡಿದ ಹುತಾತ್ಮರ ನೆನಪಿಗಾಗಿ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಸಂಸ್ಮರಣಾ ಸಮಿತಿ ಹಾಗೂ ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಉತ್ತರಾಧಿಕಾರಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಹುತಾತ್ಮರ ದಿನಾಚರಣೆ ಕಾರ್ಯ ಕ್ರಮವನ್ನು ನಗರದ ಸ್ವಾತಂತ್ರ್ಯ ಚೌಕದಲ್ಲಿ ಸೆ.13 ರಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಗೊರೂರಿನ ವಾಸಂತಿ ಲಕ್ಷ್ಮೀಮೂರ್ತಿ ನೆರವೇರಿಸುವರು.

ಅಧ್ಯಕ್ಷತೆಯನ್ನು ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ ವಹಿಸುವರು. ಕೆ.ಸಿ.ರೆಡ್ಡಿ ಫೌಂಡೇಷನ್‌ ಕಾರ್ಯದರ್ಶಿ ವಸಂತ ಕವಿತ ಉಪಸ್ಥಿತರಿರುವರು.

ಮುಖ್ಯ ಅತಿಥಿಗಳಾಗಿ ಸ್ವಾತಂತ್ರ್ಯ ಹೋರಾಟಗಾರರಾದ ಎಸ್.ವಿ ಗುಪ್ತ, ಕೆ.ಸಿ.ನಾರಾಯಣಪ್ಪ, ಹನುಮಂತಯ್ಯ, ಗಾಂಧಿ ಚಿಂತಕ ಎಲ್. ನರಸಿಂಹಯ್ಯ ಪಾಲ್ಗೊಳ್ಳುವರು. ವಿಶೇಷ ಆಹ್ವಾನಿತರಾಗ ಕ್ಯಾ. ಗೋಪಿನಾಥ್, ಆಶಾ ಪ್ರಸನ್ನಕುಮಾರ್, ಚಂದ್ರಶೇಖರ ಕರೇಗೌಡ ಹಲಗೇರಿ, ಶಿವಯೋಗಯ್ಯ ಬಿ. ಲೋಕನಗೌಡರು, ಬಿ.ಎಲ್. ಚಂದ್ರಶೇಖರ್ ಹಾಗೂ ಜಿ.ಎಸ್. ರವಿಶಂಕರ್ ಭಾಗವಹಿಸಲಿದ್ದಾರೆ.

ಹುತಾತ್ಮರ ಸ್ಮಾರಕ ಫಲಕಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಸ್ವಾತಂತ್ರ್ಯ ಹೋರಾಟಗಾರರು ಸವೋರ್ದಯ ಕಾರ್ಯಕರ್ತರು ರಾಷ್ಟ್ರಭಿಮಾನಿಗಳು, ವಿಧ್ಯಾರ್ಥಿಗಳು, ಸಾರ್ವಜನಿಕರು ತುಮಕೂರಿನ ಸ್ವಾತಂತ್ರ್ಯ ಚೌಕದಿಂದ ಸರ್ಕಾರಿ ಪಧವಿ ಪೂರ್ವ ಕಾಲೇಜಿನಲ್ಲಿರುವ ಮಹಾತ್ಮಗಾಂಧಿ ಸ್ಮಾರಕದವರೆಗೆ ರಾಷ್ಟ್ರೀಯತೆ ರಾಷ್ಟ್ರಭಿಮಾನ ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಜಯಕಾರಗಳೊಂದಿಗೆ ಪಾದಯಾತ್ರೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ರಾಷ್ಟ್ರಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು ಹಾಗೂ ಎಲ್ಲಾ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಆರ್.ಎಂ.ಸುದರ್ಶನ್ ಮನವಿ ಮಾಡಿದ್ದಾರೆ.