Thursday, 12th December 2024

ಮಾರುತಿ ಸುಜುಕಿ ಇಂದ ಎಪಿಕ್ ನ್ಯೂ ಸ್ವಿಫ್ಟ್, ಝೆಡ್ ಸಿರೀಸ್ ಇಂಜಿನ್ ಜೊತೆಗೆ ಬಿಡುಗಡೆ

• ಕ್ರಾಂತಿಕಾರಿ ಹೊಸ Z-ಸಿರೀಸ್ 1.2 ಲೀ ಇಂಜಿನ್ ಅನ್ನುಹ ಒಂದಿರುವ ಎಪಿಕ್ ನ್ಯೂ ಸ್ವಿಫ್ಟ್‌ ಅನ್ವೇಷಣೆ, ತಂತ್ರಜ್ಞಾನ ಮತ್ತು ಸುಸ್ಥಿರತೆಯ ಸಂಯೋಜನೆ ಯಾಗಿದೆ
• ಸ್ಟಾಂಡರ್ಡ್ ಸೇಫ್ಟಿ ಫೀಚರ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು, 3 ಪಾಯಿಂಟ್ ಸೀಟ್‌ಬೆಲ್ಟ್‌ಗಳ ಜೊತೆಗೆ ರಿಮೈಂಡರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ್+ (ESP®), ಹಿಲ್ ಹೋಲ್ಡ್ ಅಸಿಸ್ಟ್,ಆಂಟಿ ಲಾಕ್ ಬ್ರೇಕಿಂಗ್ (ABS), ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್ (EBD) ಮತ್ತು ಬ್ರೇಕ್ ಅಸಿಸ್ಟ್ (ಬಿಎ) ಇತ್ಯಾದಿ ಇವೆ.
• 22.86 ಸೆಂಮೀ (9 ಇಂಚು) ಸ್ಮಾರ್ಟ್‌ಪಲ್ಏ ಪ್ರೋ+ ಟಚ್‌ಸ್ಕ್ರೀನ್, ವೈರ್ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಅರ್ಕಮಿಸ್ ಸರೌಂಡ್ ಸೆನ್ಸ್, ವೈರ್ಲೆಸ್ ಫೋನ್ ಚಾರ್ಜರ್, ಸುಜುಕಿ ಕನೆಕ್ಟ್ ಜೊತೆಗೆ ವಾಯ್ಸ್ ಕಮಾಂಡ್, ಎ ಮತ್ತು ಸಿ ಟೈಪ್ ಯುಎಸ್‌ಬಿ ಪೋರ್ಟ್‌ಗಳು, ಕ್ರೂಸ್ ಕಂಟ್ರೋಲ್, ಆಟೋ ಹೆಡ್‌ಲ್ಯಾಂಪ್‌ಗಳು ಮತ್ತು ಇನ್ನಷ್ಟು ಸೌಲಭ್ಯ
• ಹೊಸ 4ನೇ ತಲೆಮಾರಿನ ಸ್ವಿಫ್ಟ್ ಅತ್ಯಂ‌ತ ಇಂಧನ ದಕ್ಷ ಹ್ಯಾಚ್‌ಬ್ಯಾಕ್ ಆಗಿದ್ದು, 25.75 ಕಿ.ಮೀ/ಲೀ. ಮೈಲೇಜ್ ನೀಡುತ್ತದೆ ಮತ್ತು ಹಿಂದಿನ ತಲೆಮಾರಿನ ಸ್ವಿಫ್ಟ್‌ಗಿಂತ 14% ಸುಧಾರಣೆ ಹೊಂದಿದೆ
ಬೆಂಗಳೂರು: ಭಾರತದ ಅತಿದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್‌ಐಎಲ್) ಹ್ಯಾಚ್‌ಬ್ಯಾಕ್‌ ಸೆಗ್ಮೆಂಟ್‌ಗೆ ಹೊಸ ವ್ಯಾಖ್ಯಾನ ಬರೆದಿದ್ದು, ಎಪಿಕ್ ನ್ಯೂ ಸ್ವಿಫ್ಟ್‌ ಅನ್ನು ಹೆಮ್ಮೆಯಿಂದ ಪ್ರಸ್ತುತಪಡಿಸುತ್ತದೆ. ಯೂತ್‌ಫುಲ್ ಮತ್ತು ಉತ್ಸಾಹಿ ವಿನ್ಯಾಸವನ್ನು ಹೊಂದಿ ರುವ ಎಪಿಕ್ ನ್ಯೂ ಸ್ವಿಫ್ಟ್‌ ಹೊಸ ಮಾನದಂಡಗಳನ್ನು ರಚಿಸುತ್ತದೆ ಮತ್ತು ಈ ಹಿಂದಿನ ಕಾರುಗಳಂತೆ ತನ್ನ ಪರಂಪರೆಯನ್ನು ಆಧರಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹಿಸಾಶಿ ಟಕೆಯುಚಿ “2005 ರಲ್ಲಿ ಬಿಡುಗಡೆಯಾದಾಗಿನಿಂದಲೂ ಸ್ವಿಫ್ಟ್ ಬ್ರ್ಯಾಂಡ್‌ ಭಾರತದ ವಾಹನ ಕ್ಷೇತ್ರದಲ್ಲಿ ಪರಿಣಿತಿಗೆ ಹೆಸರಾಗಿದೆ. ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಸೆಗ್ಮೆಂಟ್‌ನಲ್ಲಿ ಇದು ಹೊಸ ಶಕೆಗೆ ನಾಂದಿ ಹಾಡಿದೆ ಮತ್ತು ಕೋಟ್ಯಂತರ ಗ್ರಾಹಕರ ಹೃದಯಗಳನ್ನು ಸೂರೆ ಮಾಡಿದೆ. ಎಪಿಕ್ ನ್ಯೂ ಸ್ವಿಫ್ಟ್ ಕುರಿತ ನಮ್ಮ ಧ್ಯೇಯವು ಕೂಡಾ ಸ್ವಿಫ್ಟ್‌ ಪ್ರಿಯರು ಮತ್ತು ಡ್ರೈವಿಂಗ್‌ ಪ್ರಿಯರ ಖುಷಿಗೆ ಹೊಸ ವ್ಯಾಖ್ಯಾನ ಬರೆಯುವ ಪರಂಪರೆಯನ್ನು ಆಧರಿಸಿದೆ. ಹೊಚ್ಚ ಹೊಸ ಝೆಡ್ ಸಿರೀಸ್ ಇಂಜಿನ್ ಭವಿಷ್ಯದ ಪವರ್‌ಟ್ರೇನ್ ಆಗಿದೆ ಮತ್ತು ಪರ್ಫಾರ್ಮೆನ್ಸ್‌ ಮತ್ತು ಸುಸ್ಥಿರತೆಯ ಹೊಸ ಆಯಾಮವನ್ನು ಹೊಂದಿದೆ ಮತ್ತು ಇದನ್ನು ಈ ಸೆಗ್ಮೆಂಟ್‌ ನಲ್ಲೇ ಅತ್ಯಂತ ದಕ್ಷವಾಗಿಸಿದೆ. ನಮ್ಮ ಗ್ರಾಹಕರ ನಿರೀಕ್ಷೆಯನ್ನು ಪೂರೈಸಲು ಮತ್ತು ಮೀರುವುದಕ್ಕೆ ನಾವು ಬದ್ಧವಾಗಿದ್ದೇವೆ ಮತ್ತು ಭಾರತದ ವಾಹನೋ ದ್ಯಮಕ್ಕೆ ಹೊಸ ರೂಪಾಂತರವನ್ನು ತರಲಿದೆ. ಇದಕ್ಕಾಗಿ ಅತ್ಯುತ್ತಮ ಕಾರ್ಯಕ್ಷಮತೆ ಯನ್ನು ಒದಗಿಸುವ ಸುಧಾರಿತ ತಂತ್ರಜ್ಞಾನವನ್ನು ನಾವು ಪರಿಚಯಿಸುತ್ತಿದ್ದೇವೆ.”
ಎಪಿಕ್ ನ್ಯೂ ಸ್ವಿಫ್ಟ್‌ ಬಿಡುಗಡೆಯ ಬಗ್ಗೆ ಮಾತನಾಡಿದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಸೇಲ್ಸ್‌ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ “ಭಾರತದಲ್ಲಿ 29 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಸ್ವಿಫ್ಟ್‌ ಬ್ರ್ಯಾಂಡ್‌ ಭಾರತೀಯರ ಹೃದಯದಲ್ಲಿ ವಿಶೇಷ ಭಾವವನ್ನು ಹೊಂದಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಪ್ರತಿ ತಲೆಮಾರೂ ಕೂಡಾ ತನ್ನ ಕಾಲಕ್ಕಿಂತ ಮುಂದಿದೆ ಮತ್ತು ಗ್ರಾಹಕರ ನಿರೀಕ್ಷೆಗಳನ್ನು ಮೊದಲೇ ಊಹಿಸಿ, ಪರಿಹರಿಸುತ್ತದೆ. ಎಪಿಕ್ ನ್ಯೂ ಸ್ವಿಫ್ಟ್‌ ಪರಿಚಯಿಸುವ ಮೂಲಕ ಮಾನದಂಡವನ್ನು ಇನ್ನಷ್ಟು ಎತ್ತರಕ್ಕೆ ಏರಿಸುವ ಪರಂಪರೆಯನ್ನು ನಾವು ಸೃಷ್ಟಿಸುತ್ತಿದ್ದೇವೆ. ಅಧಿಕ ಇಂಧನ ದಕ್ಷತೆ ಮತ್ತು ಕಡಿಮೆ ಎಮಿಷನ್‌ಗಳ ಜೊತೆಗೆ ಎರಡೂ ವಿಶ್ವಗಳ ಉತ್ತಮ ಅಂಶಗಳನ್ನು ಕ್ರಾಂತಿಕಾರಿ ಝೆಡ್‌ ಸಿರೀಸ್ ಇಂಜಿನ್ ಒದಗಿಸುತ್ತದೆ. ಆರು ಏರ್‌ಬ್ಯಾಗ್‌ಗಳು, 3 ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಇಎಸ್‌ಪಿ, ಇಬಿಡಿ ಜೊತೆಗೆ ಎಬಿಎಸ್‌, ಹಿಲ್ ಹೋಲ್ಡ್ ಅಸಿಸ್ಟ್‌ ಸೌಲಭ್ಯಗಳನ್ನು ಹೊಂದಿರುವ ಹೊಸ ಸ್ವಿಫ್ಟ್‌ ಸುಧಾರಿತ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಅತ್ಯುತ್ತಮ ಫೀಚರ್ ಅನ್ನು ಹೊಂದಿರುವುದರ ಜೊತೆಗೆ ಈ ಅಂಶಗಳಿಂದಾಗಿ ಎಪಿಕ್ ನ್ಯೂ ಸ್ವಿಫ್ಟ್‌ ಈ ಸೆಗ್ಮೆಂಟ್‌ನಲ್ಲೇ ಡ್ರೈವರ್‌ಗೆ ಹೆಚ್ಚು ಅನುಕೂಲಕರವಾಗಿದೆ.”
ಎಪಿಕ್ ನ್ಯೂ ಸ್ವಿಫ್ಟ್‌ ಐದು ಪ್ರಮುಖ ಅಂಶಗಳನ್ನು ಒಳಗೊಂಡಿದೆ: ಅದ್ಭುತ ಎಕ್ಸ್‌ಟೀರಿಯರ್‌, ಸ್ವಾಗತಿಸುವ ಇಂಟೀರಿಯರ್, ಸಮಗ್ರ ಸುರಕ್ಷತೆ, ಡ್ರೈವ್ ಮಾಡಲು ಖುಷಿ, ತಾಂತ್ರಿಕವಾಗಿ ಸುಧಾರಿತ.
ಅದ್ಭುತ ಎಕ್ಸ್‌ಟೀರಿಯರ್‌: ಸ್ವಿಫ್ಟ್‌ನ ಸ್ಪೋರ್ಟಿ ವಿನ್ಯಾಸವು ಉತ್ಸಾಹದ ಭಾವವನ್ನು ಉಂಟು ಮಾಡುತ್ತದೆ. ಡೈನಾಮಿಕ್‌ ಚಲನೆಯ ಭಾವವನ್ನು ಇದು ಒಳಗೊಂಡಿದ್ದು, ಆಕರ್ಷಕ ಹ್ಯಾಚ್‌ಬ್ಯಾಕ್‌ನ ವಿನ್ಯಾಸವನ್ನು ಹೊಂದಿದೆ. ಇದು ಬೋಲ್ಡ್ ಆಗಿರುವ ಬದಿಯ ಭಾಗವನ್ನು ಹೊಂದಿದ್ದು, ಸ್ವಿಫ್ಟ್‌ನ ಸಿಗ್ನೇಚರ್‌ ಸಿಲೂಯೆಟ್‌ ಅನ್ನು ಉಳಿಸಿಕೊಂಡಿದೆ ಮತ್ತು ಸ್ವಿಫ್ಟ್‌ನ ಐಕಾನಿಕ್ ಡಿಎನ್ಎ ಜೊತೆಗೆ ತಕ್ಷಣವೇ ಗುರುತಿಸುವಂಥದ್ದಾಗಿದೆ. ಆಕರ್ಷಕ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಬೂಮರಾಂಗ್ ಎಲ್‌ಇಡಿ ಡಿಆರ್‌ಎಲ್‌ಗಳು ಭವಿಷ್ಯದ ನೋಟವನ್ನು ಹೊಂದಿವೆ. ಇದಕ್ಕೆ ಇನ್ನಷ್ಟು ಆಕರ್ಷಕ ವಾದ ಸಂಗತಿಯೆಂದರೆ, ಗ್ಲಾಸಿ ಫ್ರಂಟ್ ಬ್ಲ್ಯಾಕ್ ಫ್ರಂಟ್ ಗ್ರಿಲ್, ಎಲ್‌ಇಡಿ ಫ್ರಂಟ್ ಫಾಗ್ ಲ್ಯಾಂಪ್‌ಗಳು, ಎಲ್ಇಡಿ ರಿಯರ್ ಕಾಂಬಿನೇಶನ್ ಲ್ಯಾಂಪ್‌ ಗಳಾಗಿದ್ದು, ವಿಶಿಷ್ಟ ಸಿಗ್ನೇಚರ್‌ ಅನ್ನು ಹೊಂದಿದೆ. ಅಲ್ಲದೆ, 38.10cm (15 ಇಂಚು) ಪ್ರಿಸಿಶನ್ ಕಟ್ ಟೂ ಟೋನ್ ಅಲಾಯ್ ವೀಲ್‌ಗಳು ಇದರ ಅಥ್ಲೆಟಿಕ್ ಪ್ರೊಫೈಲ್‌ಗೆ ಪೂರಕವಾಗಿದೆ.
ಎಪಿಕ್ ನ್ಯೂ ಸ್ವಿಫ್ಟ್‌ನ ಡೈನಾಮಿಕ್ ಡಿಸೈನ್‌ಗೆ ಪೂರಕವಾಗಿ ಎರಡು ಹೊಸ ಬಾಡಿ ಕಲರ್‌ಗಳಾದ ಲಸ್ಟರ್ ಬ್ಲ್ಯೂ ಮತ್ತು ನಾವೆಲ್ ಆರೇಂಜ್ ಅನ್ನು ಇದು ಹೊಂದಿದೆ. ಮೂರು ಡ್ಯುಯೆಲ್ ಟೋನ್ ಕಲರ್ ಆಯ್ಕೆಗಳಾದ ಲಸ್ಟರ್ ಬ್ಲ್ಯೂ ಜೊತೆಗೆ ಮಿಡ್‌ನೈಟ್ ಬ್ಲ್ಯಾಕ್ ರೂಫ್‌, ಮಿಡ್‌ನೈಟ್ ಬ್ಲ್ಯಾಕ್ ರೂಫ್‌ ಜೊತೆಗೆ ಸಿಝ್ಲಿಂಗ್ ರೆಡ್, ಮಿಡ್‌ನೈಟ್ ಬ್ಲ್ಯಾಕ್ ರೂಫ್‌ ಜೊತೆಗೆ ಪರ್ಲ್‌ ಆಕ್ಟಿಕ್ ವೈಟ್ ಇದೆ.
ಸ್ವಾಗತಿಸುವ ಇಂಟೀರಿಯರ್‌:
4ನೇ ತಲೆಮಾರಿನ ಸ್ವಿಫ್ಟ್‌ನಲ್ಲಿ ಹೊಚ್ಚ ಹೊಸ ಕ್ಯಾಬಿನ್‌ನ ಪ್ರೀಮಿಯಂ ಇಂಟೀರಿಯರ್‌ಗಳಿವೆ. ಕ್ಯಾಬಿನ್‌ನಲ್ಲಿ ಹೊಸ ವಿನ್ಯಾಸವಿದ್ದು, ಡ್ಯಾಶ್‌ಬೋರ್ಡ್‌ಗೆ ‘ಸೆಂಟರ್ ಫ್ಲೋಟಿಂಗ್ ವಿನ್ಯಾಸ’ವಿದೆ. ಪಿಯಾನೋ ಬ್ಲ್ಯಾಕ್‌ ಟ್ರೀಟ್‌ಮೆಂಟ್ ಹಾಗೂ ಸ್ಯಾಟಿನ್ ಮ್ಯಾಟ್ ಸಿಲ್ವರ್ ಇನ್ಸರ್ಟ್‌ಗಳಿವೆ. ಇದರ ಜೊತೆಗೆ ವಿಶಿಷ್ಟ ಸಮ್ಮಿತೀಯ ಡಯಲ್‌ಗಳಿದ್ದು, ಇದರಲ್ಲಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಇದೆ. ಇದು ಇಂಟೀರಿಯರ್‌ಗೆ ಒಂದು ವಿಶಿಷ್ಟ ಲುಕ್ ಅನ್ನು ನೀಡುತ್ತದೆ. ಡ್ರೈವರ್ ಆಧರಿತ ಡ್ಯಾಶ್‌ಬೋರ್ಡ್‌ ಚಾಲಕರ ಕಡೆಗೆ 8 ಡಿಗ್ರಿ ತಿರುಗಿದ್ದು, ಚಾಲಕರು ಮತ್ತು ಕಾರಿನ ಮಧ್ಯೆ ಉತ್ತಮ ಸಂವಹನವನ್ನು ನಿರ್ಮಿಸುತ್ತದೆ.
ಫ್ಲಾಟ್ ಬಾಟಮ್ ಇರುವ ಸ್ಟೀರಿಂಗ್ ವೀಲ್‌, 22.86cm (9”) ಸ್ಮಾರ್ಟ್‌ಪ್ಲೇ ಪ್ರೋ+ ಇನ್ಫೋಟೇನ್ಮೆಂಟ್‌ ಸಿಸ್ಟಮ್‌, ಹಿಂಬದಿ ಸೀಟ್‌ನಲ್ಲಿ ಕುಳಿತಿರುವವರಿಗೆ ವೇಗವಾಗಿ ಚಾರ್ಜ್ ಆಗುವ ಎ ಮತ್ತು ಸಿ ಟೈಬ್ ಯುಎಸ್‌ಬಿ ಪೋರ್ಟ್‌ಗಳು, ರಿಯರ್ ಎಸಿ ವೆಂಟ್‌ಗಳು, ಕ್ರೂಸ್ ಕಂಟ್ರೋಲ್ 60:40 ರಿಯರ್ ಸ್ಪ್ಲಿಟ್‌ ಸೀಟ್‌ಗಳು ಮತ್ತು ಕೀಲೆಸ್‌ ಎಂಟ್ರಿ ಸೌಲಭ್ಯವಿದ್ದು, ಅತ್ಯಂತ ಆರಾಮ ಮತ್ತು ಅನುಕೂಲವು ಪ್ರಯಾಣಿಕರಿಗೆ ಸಿಗುತ್ತದೆ.
ಮಗ್ರ ಸುರಕ್ಷತೆ:
ಎಪಿಕ್ ನ್ಯೂ ಸ್ವಿಫ್ಟ್‌ನಲ್ಲಿ ಸುರಕ್ಷತೆಯು ಪ್ರಮುಖ ಕೇಂದ್ರವಾಗಿದ್ದು, ಅನಿರೀಕ್ಷಿತ ಸನ್ನಿವೇಶದಲ್ಲಿ ಹಾನಿಯನ್ನು ನಿವಾರಿಸಲು ಆಕ್ಟಿವ್ ಮತ್ತು ಪ್ಯಾಸಿವ್ ಸೇಫ್ಟಿ ಫೀಚರ್‌ಗಳ ಸಮಗ್ರ ಶ್ರೇಣಿ ಇದೆ. 6 ಏರ್‌ಬ್ಯಾಗ್‌ಗಳು, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ಹಾಗೂ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್‌ ಡಿಸ್ಟ್ರಿಬ್ಯೂಶನ್ (ಇಬಿಡಿ) ಮತ್ತು ಬ್ರೇಕ್ ಅಸಿಸ್ಟ್ (ಬಿಎ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ್ (ಇಎಸ್‌ಪಿ), ಹಿಲ್ ಹೋಲ್ಡ್ ಅಸಿಸ್ಟ್ ಮತ್ತು 3 ಪಾಯಿಂಟ್‌ ಸೀಟ್ ಬೆಲ್ಟ್‌ಗಳನ್ನು ಹೊಂದಿದ್ದು, ಸಮಗ್ರ ರಕ್ಷಣೆ ಮತ್ತು ಸ್ಥಿರತೆಯನ್ನು ಒದಗಿಸುತ್ತದೆ. ಇದರ ಜೊತೆಗೆ, ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ ರಿವರ್ಸ್‌ ಕ್ಯಾಮೆರಾ ಕೂಡಾ ಇದೆ. ಇದರಿಂದ ಅನುಕೂಲ ಮತ್ತು ಮನಃಶಾಂತಿಗೆ ಹೆಚ್ಚುವರಿ ಸೌಲಭ್ಯ ಸಿಕ್ಕಂತಾಗುತ್ತದೆ.
ಡ್ರೈವ್ ಮಾಡಲು ಖುಷಿ:
ಎಪಿಕ್ ನ್ಯೂ ಸ್ವಿಫ್ಟ್‌ನಲ್ಲಿ ಝೆಡ್ ಸಿರೀಸ್‌ ಅನ್ನು ಪರಿಚಯಿಸಲಾಗಿದ್ದು, ಹೊಸ ಕಾಲದ ಸಂಚಾರಕ್ಕೆಂದೇ ಇದನ್ನು ವಿನ್ಯಾಸ ಮಾಡಲಾಗಿದೆ. ಅತ್ಯುತ್ತಮ ಕಾರ್ಯಕ್ಷಮತೆಗಾಗಿ ವಿನ್ಯಾಸ ಮಾಡಿದ ಇದು 1197 ಸಿಸಿ ಇಂಜಿನ್ ಇದೆ. ಇದು ಕಡಿಮೆ ಇಂಗಾಲವನ್ನು ಹೊರಸೂಸುತ್ತದೆ. ಮಾರುತಿ ಸುಜುಕಿಯ ಅತ್ಯಾಧುನಿಕ ಝೆಡ್ ಸಿರೀಸ್ ಇಂಜಿನ್‌ 60 ಕಿ.ವ್ಯಾ ಪವರ್ ಅನ್ನು 5700 ಆರ್‌ಪಿಎಂನಲ್ಲಿ (81.58ಪಿಎಸ್‌ @5700ಆರ್‌ಪಿಎಂ) ನಲ್ಲಿ ಮತ್ತು 111.7ಎನ್‌ಎಂ ಪೀಕ್ ಟಾರ್ಕ್ ಅನ್ನು @4300ಆರ್‌ಪಿಎಂನಲ್ಲಿ ಒದಗಿಸುತ್ತದೆ. ಹೊಸ ಕಾಲದ ಝೆಡ್ ಸಿರೀಸ್‌ ಭಾರತೀಯ ಡ್ರೈವಿಂಗ್‌ಗೆ ಅತ್ಯಂತ ಸೂಕ್ತವಾಗಿದ್ದು, ಈ ಸೆಗ್ಮೆಂಟ್‌ನಲ್ಲಿ ಅತ್ಯುತ್ತಮ ಇಂಧನ ದಕ್ಷತೆಯನ್ನು ಒದಗಿಸುವುದರ ಜೊತೆಗೆ ಉತ್ತಮ ಅಕ್ಸಲರೇಶನ್ ಪರ್ಫಾರ್ಮೆನ್ಸ್‌ಗೆ ಕಡಿಮೆ ಟಾರ್ಕ್ ಡೆಲಿವರಿ ಮಾಡುತ್ತದೆ. ಈ ಸೆಗ್ಮೆಂಟ್‌ನಲ್ಲಿ ಅತ್ಯಂತ ಇಂಧನ ದಕ್ಷ ಹ್ಯಾಚ್‌ಬ್ಯಾಕ್ ಆಗಿದೆ. ಇಂಜಿನ್ ಕೂಲಿಂಗ್‌ಗೆ ಲಾಂಬ್ಡಾ ಏರ್‌ ಪ್ಲೋ ಸೆನ್ಸರ್‌ ಅನ್ನು ಹೊಂದಿದ್ದು, ಲೀಟರಿಗೆ 25.75 ಕಿ.ಮೀ ಅದ್ಭುತ ಇಂಧನ ದಕ್ಷತೆಯನ್ನು ಹೊಂದಿದೆ ಮತ್ತು ಹಿಂದಿನ ಆವೃತ್ತುಗೆ ಹೋಲಿಸಿದರೆ 14% ಸುಧಾರಣೆಯನ್ನು ಕಂಡಿದೆ. ಹೈಡ್ರಾಲಿಕ್ ಕ್ಲಚ್ ತಾಂತ್ರಿಕತೆಯನ್ನು ಪರಿಚಯಿಸಲಾಗಿದ್ದು, ಕ್ಲಚ್ ಎಂಗೇಜ್‌ಮೆಂಟ್ ಮತ್ತು ಡಿಸ್‌ಎಂಗೇಜ್‌ಮೆಂಟ್ ಅನ್ನು ಇನ್ನಷ್ಟು ಮೃದುವಾ ಗಿಸುತ್ತದೆ. ಅನುಕೂಲಕರ ಆಟೋ ಗೇರ್ ಶಿಫ್ಟ್ (ಎಜಿಎಸ್) ಟ್ರಾನ್ಸ್‌ಮಿಶನ್‌ ಕೂಡಾ ಇದ್ದು, ಆಟೋಮ್ಯಾಟಿಕ್ ಅನುಕೂಲವನ್ನೂ ಇದು ನೀಡುತ್ತದೆ.
ಹೊಸ ಸ್ವಿಫ್ಟ್‌ನಲ್ಲಿ ಅತ್ಯಂತ ಜನಪ್ರಿಯವಾದ ಡ್ರೈವ್ ಮಾಡಲು ಮೋಜಿನದಾಗಿರುವ ಡೈನಾಮಿಕ್ ಹ್ಯಾಂಡ್ಲಿಂಗ್ ಸಾಮರ್ಥ್ಯವಿದ್ದು, ಹೊಚ್ಚ ಹೊಸ ಸಸ್ಪೆನ್ಷನ್‌ ಜೊತೆಗೆ ರೈಡ್ ಕಂಫರ್ಟ್ ಅನ್ನೂ ನೀಡುತ್ತದೆ.
ತಾಂತ್ರಿಕವಾಗಿ ಸುಧಾರಿತ: ಇದರ ಅದ್ಭುತ ಮೆಕಾನಿಕಲ್ ಪರಿಣಿತಿಯ ಜೊತೆಗೆ, ಹೊಸ ಸ್ವಿಫ್ಟ್‌ ಹಲವು ಅತ್ಯಾಧುನಿಕ ತಂತ್ರಜ್ಞಾನದ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಅಲ್ಲದೆ, ಇದು 22.86cm (9”) ಸ್ಮಾರ್ಟ್‌ಪ್ಲೇ ಪ್ರೋ+ ಟಚ್‌ಸ್ಕ್ರೀನ್‌ ಇನ್‌ಫೊಟೇನ್ಮೆಂಟ್ ಸಿಸ್ಟಮ್ ಅನ್ನೂ ಒಳಗೊಂಡಿದ್ದು, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸೌಲಭ್ಯವಿದೆ, ಅಲ್ಲದೆ, ಅರ್ಕಮಿಸ್ ಸರೌಂಡ್ ಸೆನ್ಸ್‌, ವೈರ್‌ಲೆಸ್ ಚಾರ್ಜರ್, ಸುಜುಕಿ ಕನೆಕ್ಟ್‌ ಜೊತೆಗೆ ಸುಧಾರಿತ ವಾಹನ ಮಾಹಿತಿ ಮತ್ತು ಅಲರ್ಟ್‌ಗಳಿವೆ.
ಇತ್ತೀಚಿನ 4ನೇ ತಲೆಮಾರಿನ ಸ್ವಿಫ್ಟ್‌ ಹ್ಯಾಚ್‌ಬ್ಯಾಕ್‌ ಸೆಗ್ಮೆಂಟ್‌ಗೆ ಹೊಸ ವ್ಯಾಖ್ಯಾನ ನೀಡುತ್ತದೆ ಮತ್ತು ಗ್ರಾಹಕರಿಗೆ ಅದ್ಭುತ ಸ್ಟೈಲ್‌, ಕಾರ್ಯಕ್ಷಮತೆ ಮತ್ತು ಅನ್ವೇಷಣೆಯನ್ನು ಒದಗಿಸುತ್ತದೆ. ಎಪಿಕ್ ನ್ಯೂ ಸ್ವಿಫ್ಟ್‌ನಲ್ಲಿ ಭವಿಷ್ಯದ ಡ್ರೈವಿಂಗ್ ಅನುಭವವಿದ್ದು, ಇಡೀ ದೇಶದಲ್ಲಿರುವ ಮಾರುತಿ ಸುಜುಕಿ ಅರೆನಾ ಡೀಲರ್‌ಶಿಪ್‌ಗಳಲ್ಲಿ ಈಗ ಲಭ್ಯವಿದೆ.
ನಿಮ್ಮ ಸ್ಟೈಲ್‌ಗೆ ಹೊಂದಿಕೆಯಾಗುವ ಕಸ್ಟಮೈಸ್ಡ್ ಅಕ್ಸೆಸರಿಗಳು
ಸ್ವಿಫ್ಟ್‌ನ ಸ್ಪೋರ್ಟ್ಸ್‌ ಶೈಲಿಗೆ ಪೂರಕವಾಗಿ ಎರಡು ಕಸ್ಟಮ್ ಅಕ್ಸೆಸರಿ ಪ್ಯಾಕೇಜ್‌ಗಳೂ ಕೂಡಾ ಎಪಿಕ್ ನ್ಯೂ ಸ್ವಿಫ್ಟ್‌ಗೆ ಇದೆ. ಇದರಲ್ಲಿ ರೇಸಿಂಗ್‌ ರೋಡ್‌ ಸ್ಟಾರ್™ ಮತ್ತು ಥ್ರಿಲ್ ಚೇಸರ್™ ಇದೆ. ಸ್ವಿಫ್ಟ್‌ನ ಅಭಿಮಾನಿಗಳ ಆದ್ಯತೆಗಳು ಮತ್ತು ಆಶಯಕ್ಕೆ ಇದು ಪೂರಕವಾಗಿರುತ್ತದೆ.
ರೇಸಿಂಗ್ ರೋಡ್‌ಸ್ಟಾರ್™ ಅಕ್ಸೆಸರಿ ರೇಂಜ್‌ನಲ್ಲಿ ಆಕರ್ಷಕ ಎಕ್ಸ್‌ಟೀರಿಯರ್ ಮತ್ತು ಇಂಟೀರಿಯರ್ ಅಕ್ಸೆಸರಿಗಳ ಸ್ಟೈಲ್‌ನ ಕಾರ್ಬನ್ ಪ್ಯಾಟರ್ನ್‌ ಇದೆ. ಅಲ್ಲದೆ, ಹೊಸ ಸ್ವಿಫ್ಟ್‌ ಅನ್ನು ರೇಸಿಂಗ್ ಸರ್ಕ್ಯೂಟ್‌ನಲ್ಲಿ ಫ್ಲಾಶ್ ಆನ್ ಫರಿ ಜೊತೆಗೆ ನಿಮ್ಮ ಹೊಸ ಸ್ವಿಫ್ಟ್‌ ಅನ್ನು ರೂಪಿಸುವ ಸ್ಟೈಲಿಂಗ್ ಕಿಟ್‌ಗಳಿವೆ.
ಥ್ರಿಲ್ ಚೇಸರ್™ ಪ್ಯಾಕೇಜ್ ಅನ್ನು ಥ್ರಿಲ್ ಮತ್ತು ಚೇಸ್‌ನ ಉತ್ಸಾಹಕ್ಕೆ ಪೂರಕವಾಗಿ ವಿನ್ಯಾಸ ಮಾಡಲಾಗಿದ್ದು, ಎನರ್ಜೆಟಿಕ್ ಎಕ್ಸ್‌ಟೀರಿಯರ್ ಮತ್ತು ಸುಂದರವಾದ ಇಂಟೀರಿಯರ್ ಸ್ಟೈಲ್‌ನ ಅಕ್ಸೆಸರಿಗಳು ಇದ್ದು, ನಿಮ್ಮೊಳಗಿನ ಡ್ರೈವಿಂಗ್ ಉತ್ಸಾಹಕ್ಕೆ ಹೊಸ ಹುರುಪು ನೀಡಲಿದೆ.
ಹೆಚ್ಚುವರಿ ಐಚ್ಛಿಕ ಅಕ್ಸೆಸರಿ ಹೈಲೈಟ್‌ಗಳಲ್ಲಿ, ವಿವಿಧ ಬಣ್ಣಗಳ ಫ್ರಂಟ್ ಗ್ರಿಲ್‌ಗಳು, ವಿಂಡೋ ಫ್ರೇಮ್ ಕಿಟ್‌, ಸೀಟ್ ಕವರ್‌ಗಳು, ಕಾರ್ಬನ್ ಮತ್ತು ಪೇಂಟ್ ಮಾಡಿದ ಇಂಟೀರಿಯರ್ ಸ್ಟೈಲಿಂಗ್‌ ಕಿಟ್‌ಗಳು, ಹೊರ ಸ್ಟೈಲಿಂಗ್ ಕಿಟ್‌ಗಳು, ಹುಡ್ ಮತ್ತು ರೂಫ್‌ ಗ್ರಾಫಿಕ್‌ಗಳು ಇತ್ಯಾದಿ ಇವೆ. ಅನುಕೂಲ ಮತ್ತು ಆರಾಮದಾಯಕವಾದ ಅಕ್ಸೆಸರಿಗಳ ಪೈಕಿ ನೈಸರ್ಗಿಕ ಸಾರದಿಂದ ತಯಾರಿಸಿದ ಪ್ಯೂರೋಗಾನಿಕ್™ ಪರ್ಫ್ಯೂಮ್‌ ಇದ್ದು, ಇದು ವಿವಿಧ ಅರೊಮ್ಯಾಟಿಕ್ ಫ್ರಾಗ್ರನ್ಸ್, ವ್ಯಾಕ್ಯೂಮ್ ಕ್ಲೀನರ್‌ಗಳು, ಟೈರ್ ಇನ್‌ಫ್ಲೇಟರ್‌ಗಳು ಇತ್ಯಾದಿಯನ್ನು ಒಳಗೊಂಡಿದೆ. ತಂತ್ರಜ್ಞಾನ ಆಧರಿತ ಅಕ್ಸೆಸರಿಗಳ ಪೈಕಿ ಫ್ರಂಟ್ ಪಾರ್ಕಿಂಗ್ ಸೆನ್ಸರ್‌ಗಳು, ಮಲ್ಟಿ ಮೀಟಿಯಾ ಆಪ್ಷನ್‌ಗಳು ಫಾಸ್ಟ್‌ ಚಾರ್ಜರ್‌ಗಳಿವೆ.
ಮಾರುತಿ ಸುಜುಕಿ ಜಿನ್ಯೂನ್ ಅಕ್ಸೆಸರಿಗಳ ವೆಬ್‌ಸೈಟ್‌ನಲ್ಲಿ ಒಂದೇ ಕ್ಲಿಕ್‌ನಲ್ಲಿ ಎಪಿಕ್ ನ್ಯೂ ಸ್ವಿಫ್ಟ್‌ಗೆ ಲಭ್ಯವಿರುವ ಸಂಪೂರ್ಣ ಅಕ್ಸೆಸರಿಗಳ ರೇಂಜ್ ಅನ್ನು ನೋಡಿ – https://www.marutisuzuki.com/genuine-accessories
ಎಪಿಕ್ ನ್ಯೂ ಸ್ವಿಫ್ಟ್‌ ಅನ್ನು ತಮ್ಮ ಸಮೀಪದ ಮಾರುತಿ ಸುಜುಕಿ ಅರೆನಾ ಶೋರೂಮ್‌ನಲ್ಲಿ ಗ್ರಾಹಕರು ಬುಕ್ ಮಾಡಬಹುದು ಅಥವಾ www.marutisuzuki.com ಗೆ ಲಾಗಿನ್ ಮಾಡಿಯೂ ಬುಕ್ ಮಾಡಬಹುದು. ಹೊಸ ಸ್ವಿಫ್ಟ್ ಅನ್ನು ರೂ. XX XXX/- ಮಾಸಿಕ ಸಬ್‌ಸ್ಕ್ರಿಪ್ಷನ್ ಫೀ ಆಧಾರದಲ್ಲಿ ಮಾರುತಿ ಸುಜುಕಿ ಸಬ್‌ಸ್ಕ್ರೈಬ್‌ ಮೂಲಕವೂ ಖರೀದಿ ಮಾಡಬಹುದು. ಹೊಚ್ಚ ಹೊಸ ಮಾರುತಿ ಸುಜುಕಿ ಸ್ವಿಫ್ಟ್‌ಗೆ ಸಬ್‌ಸ್ಕ್ರೈಬ್‌ ಮಾಡಲು ಇಲ್ಲಿ ಕ್ಲಿಕ್ ಮಾಡಬಹುದು.