Thursday, 12th December 2024

ಕನ್ನಡಕ್ಕಾಗಿ ಕೈ ಎತ್ತಿದರೆ ನಿಮ್ಮ ಕೈ ಕಲ್ಪವೃಕ್ಷವಾಗುತ್ತದೆ: ಶಾಸಕ ಮತ್ತಿಮಡು

ಕಸಾಪ ಮಹಾಗಾಂವ ವಲಯ ಉದ್ಘಾಟನೆ

ಕಮಲಾಪುರ: ಕನ್ನಡ ಸಾಹಿತ್ಯಕ್ಕೆ ಕಕ ಭಾಗದ ಕೊಡುಗೆ ಅಪಾರ, ಸಾಮಾಜಿಕ ನ್ಯಾಯ ಹಾಗೂ ವಾಸ್ತವಿಕತೆಯ ನೆಲೆಗಟ್ಟಿನ ಮೇಲೆ  ರಚಿತವಾದ ವಚನ ಶಾಸ್ತ್ರ ನೀಡಿದ ಹೆಮ್ಮೆ ನಮಗಿದೆ, ಒಂದು ಕಡೆ ಕವಿ ಹೇಳುತ್ತಾರೆ ಕನ್ನಡ ಕೇವಲ ಭಾಷೆಯಲ್ಲ ನಮ್ಮೆಲ್ಲರ ಉಸಿರಾಗಿದೆ,  ಕನ್ನಡಕ್ಕಾಗಿ ಕೈ ಎತ್ತಿದರೆ ನಿನ್ನ ಕೈ ಕಲ್ಪ ವೃಕ್ಷವಾಗುತ್ತದೆ ಎಂದು ಶಾಸಕ ಬಸವರಾಜ ಮತ್ತಿಮುಡ ಹೇಳಿದರು.

ಕಮಲಾಪುರ ತಾಲೂಕಿನ ಮಹಾಗಾಂವ ಗ್ರಾಮದ  ಶ್ರೀ ಮಹಾಂತೇಶ್ವರ ಪ್ರಾಥಮೀಕ (ಕಳ್ಳಿಮಠ)ಯಲ್ಲಿ ಮಂಗಳವಾರ  ಕಮಲಾ ಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ಹಮ್ಮಿಕೊಂಡ  ಮಹಾಗಾಂವ ಕಸಾಪ ವಲಯ ಉದ್ಘಾಟನೆ ಹಾಗೂ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನ ಶಿಲ್ಪಿ  ಡಾ.ಅಂಬೇಡ್ಕರ್  ಅವರು ಹಲವಾರು ಅಪಮಾನಗಳನ್ನು ಕಂಡರು ಕುಗ್ಗದೇ ಶೋಷಿತ ಜನಾಂಗಕ್ಕೆ ನ್ಯಾಯ ಒದಗಿಸಲು ಹೋರಾಡಿ ಯಶಸ್ಸನ್ನು ಕಂಡ ಮಹಾನ್ ಮಾನವತಾವಾದಿಯಾಗಿದ್ದಾರು, ಅವರು ತಮ್ಮ ಜೀವಿತಾವಧಿಯಲ್ಲಿ ಪ್ರತಿ ಕ್ಷಣವು ಜ್ಞಾನ ಮತ್ತು ಸಾಮಾಜಿಕ ಸಮಾನತೆಗಾಗಿ ಹೋರಾಡಿ ನಮ್ಮೆಲ್ಲರಿಗೂ ನ್ಯಾಯ ಒದಗಿಸಿದ್ದಾರೆ.

ಹಿರಿಯ ಲೇಖಕರು ಹಾಗೂ ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ಶಕುಂತಲಾ ಪಾಟೀಲ ವಿಶೇಷ ಉಪನ್ಯಾಸ ನೀಡಿ ಅಂದು ಜ್ಞಾನ ದಾಹವಿತ್ತು, ಇಂದು ಹಣ ದಾಹವಿದೆ, ನಮಗೆ ಸಾಕು ಎನ್ನುವ ಸಾಹುಕಾರ ಬೆಕು,ಹೆಚ್ಚು ದುಡ್ಡು ಬೇಕು ಎಂಬ  ಬೇಡುವ ಭಿಕಾರಿ ಬೇಡ, ಚಿಕ್ಕಂದಿನಿಂದಲೇ ಸಾಮಾಜಿಕ ನ್ಯಾಯದ ಕಲ್ಪನೆ ಹೊತ್ತು ಹೊರಟ ಡಾ. ಅಂಬೇಡ್ಕರ್ ಅವರಿಗೆ ಎದುರಾದ ಸಂಕಷ್ಟಗಳಿಗೆ ಕೊನೆಯೇ ಇರಲಿಲ್ಲ, ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ಎದೆಗುಂದದೆ‌ ಮುನ್ನುಗ್ಗಿ  ಸಮ ಸಮಾಜ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಬೆಳೆಸಿದರು.

ಮಾಜಿ ಜಿಪಂ ಅಧ್ಯಕ್ಷ ಶಿವಪ್ರಭು ಪಾಟೀಲ ಮಹಾಗಾಂವ, ಕಸಾಪ ಕಮಲಾಪುರ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಮಾತನಾ ಡಿದರು. ಮಹಾಗಾಂವ ಕಸಾಪ ನೂತನ ಅಧ್ಯಕ್ಷ ಅಂಬಾರಾಯ ಮಡ್ಡೆ ಪ್ರಾಸ್ತವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಹಾಗಾಂವ ಕಳ್ಳಿಮಠದ ಶ್ರೀ ವಿರುಪಾಕ್ಷ ದೇವರು ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿದರು. ಹರಸೂರ ಶ್ರೀ ಕರಿಸಿದ್ದೇಶ್ವರ ಶಿವಾಚಾರ್ಯ, ನಿವೃತ್ತ ಉಪನ್ಯಾಸಕ ಶಿವಲಿಂಗಯ್ಯ ಕಳ್ಳಿಮಠ, ನ್ಯಾಯವಾದಿ ಶಿವಕುಮಾರ ಪಸಾರ  ಮಹಾ ಗಾಂವ, ಮಹಾಗಾಂವ  ಪಿಕೆಪಿಎಸ್ ಅಧ್ಯಕ್ಷ  ಗಿರೀಶ್ ಪಾಟೀಲ ಸೇರಿ ಅನೇಕರು ಇದ್ದರು.

*
ಕನ್ನಡ ಭಾಷೆ ನಮ್ಮ ಆಸ್ಮಿಯತೆಯ ಪ್ರತಿಕವಾಗಿದೆ, ಕನ್ನಡ ಉಳಿಸಿ ಬೆಳೆಸುವಲ್ಲಿ ಕಸಾಪ ಕಾರ್ಯ ಶ್ಲಾಘನೀಯ, ಮಠಗಳು ಸಮಾಜದಲ್ಲಿ ಸರ್ವ ಜನಾಂಗದ ಮಧ್ಯೆ ಸ್ವಾಮರಸ್ಯ ಬೆಳೆಸುತ್ತಿವೆ.

ಶರಣಬಸ್ಸಪ್ಪ ಪಾಟೀಲ ಅಷ್ಟಗಿ,
ನಿರ್ದೇಶಕ ಡಿಸಿಸಿ ಬ್ಯಾಂಕ್ ಕಲಬುರಗಿ