Thursday, 21st November 2024

40% ಸರ್ಕಾರ ಕುರಿತು ಪ್ರಧಾನಿ ಕಾರ್ಯಾಲಯ ಬಹಳ ಬೇಗ ವರದಿ ಕೇಳಿದೆ: ಎಂಬಿಪಿ ವ್ಯಂಗ್ಯ

ವಿಜಯಪುರ: ರಾಜ್ಯ ಬಿಜೆಪಿ ಸರ್ಕಾರ 40% ಸರ್ಕಾರ ಎನ್ನುವ ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಯಾಗಿ ವರದಿ ಕೇಳಿದ ಪ್ರಧಾನಿ ಕಾರ್ಯಾಲಯ ಕುರಿತು, ಪ್ರಧಾನಿ ಕಾರ್ಯಾಲಯವು ವರದಿಯನ್ನು ಬಹಳ ಬೇಗ ಕೇಳಿದ್ದಾರೆ ಎಂದು‌‌ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್ ವ್ಯಂಗ್ಯವಾಡಿದ್ದಾರೆ.

ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ತಾಂಡಾದ ದುರ್ಗಾ ದೇವಿ ಜಾತ್ರಾಹೋತ್ಸವದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಎಂ ಬಿ ಪಾಟೀಲ್, ಪಿಎಂ ಕಚೇರಿ ಬೇಗಾ ವರದಿ ಕೇಳಿದೆ. ಬಹಳ ಬೇಗ ಪ್ರಧಾನಿ ಕಾರ್ಯಾಲಯ ಎಚ್ಚೆತ್ತು ಕೊಂಡಿದೆ.

ಬೇರೆ ಕಡೆ ಎರಡನೇ ದಿನಕ್ಕೆ ಇಡಿ‌ ನೋಟೀಸ್, ಇನ್ಕಮ್ ಟ್ಯಾಕ್ಸ್ ನೊಟೀಸ್, ಸಿಬಿಐ ನೋಟೀಸ್ ಬರ್ತದೆ ಇಲ್ಲಿ ನಲವತ್ತು ಪರ್ಸೆಂಟ್ ಕಮೀಷನ್ ವಿಚಾರವನ್ನು ಒಂದು ವರ್ಷದ ಹಿಂದೆಯೇ ಬಹಿರಂಗವಾಗಿದೆ. ಕಾಂಟ್ರ್ಯಾಕ್ಟರ್ ಅಸೋಸಿ ಯೇಷನ್ ನವರು ಒಂದು ವರ್ಷದ ಹಿಂದೆಯೇ ಹೇಳಿದ್ದಾರೆ ಈಗಾ ನಲವತ್ತು ಪರ್ಸೆಂಟ್ ವಿಚಾರ ‌ಮುಚ್ಚಿ ಹಾಕೋಕೆ ಹೊರಟಿ ದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಒಂದು ರಿಪೋರ್ಟ್ ಕೇಳಿ, ತನಿಖೆ ಮಾಡಿ ಮುಚ್ಚಿ ಹಾಕಲಿಕ್ಕೆ ವರದಿ ಕೇಳಿರಬಹುದು‌ ಎಂದೆನಿಸುತ್ತಿದೆ. ವಿಧಾನಸಭಾ ಚುನಾವಣೆ ಬರ್ತಿದೆಯಲ್ಲ ಈ ಕಾರಣಕ್ಕಾಗಿ ಮುಚ್ಚಿ ಹಾಕಲು ಯತ್ನ ಮಾಡುತ್ತಿದ್ದಾರೆ. ಜನರು ಭ್ರಷ್ಟಾಚಾರ ವಿಚಾರದಲ್ಲಿ ಬೇಸರಗೊಂಡಿ ದ್ದಾರೆ. ಅದಕ್ಕಾಗಿ ಐ ವಾಶ್ ಮಾಡಲು ಹೊರಟಿದ್ದಾರೆ. ಇದನ್ನು ಯಾವ ರೀತಿ ತನಿಖೆ ಮಾಡಿ ಎಷ್ಟು ಜನರನ್ನು ಬಂದಿಸ್ತಾರೆ ಅವರ ಮೇಲೆ ಯಾವ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನ ಕಾದು ನೋಡೋಣ ಎಂದು ತಿಳಿಸಿದರು.

ಇದೆ ವೇಳೆ ಪಠ್ಯ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ ಎಂ.ಬಿ.ಪಾಟೀಲ್, ಬಸವಣ್ಣನರ ವಿಚಾರದಲ್ಲಿ ಪಠ್ಯದಲ್ಲಿ ತಿದ್ದುಪಡಿಗೆ ಸರ್ಕಾರ‌ ಮುಂದಾಗಿರೋ ಹಿನ್ನೆಲೆಯಲ್ಲಿ ರೊಹೀತ್ ಚಕ್ರತೀರ್ಥ ನೇತೃತ್ವದಲ್ಲಿ ಪರಿಷ್ಕರಣೆಯಾದ ಪಠ್ಯವನ್ನು ಸಾರಾಸಗಟಾಗಿ ತಿರಸ್ಕಾರ ಮಾಡಬೇಕು. ಚಕ್ರತೀರ್ಥ ಸಮೀತಿ ಬಸವಣ್ಣನವರಿಗೆ ಅಷ್ಟೇಯಲ್ಲಾ ಕುವೆಂಪು, ಆದಿಚುಂಚನಗಿರಿ ಸ್ವಾಮೀಜಿ, ಸಿದ್ದ ಗಂಗಾ ಸ್ವಾಮೀಜಿ, ನಾರಾಯಣಗುರು ಅವರಿಗೆ ಅಪಮಾನ ಮಾಡಿದ್ದಾರೆ. ಮಹಾತ್ಮ ಗಾಂಧೀಜಿಯನ್ನೂ ಬಿಟ್ಟಿಲ್ಲ. ಹೀಗಾಗಿ ಸಮೀತಿ ನೀಡಿದ ಪರಿಷ್ಕೃತ ಪಠ್ಯಕ್ರಮ ತಿರಸ್ಕಾರ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಬರಗೂರು ರಾಮಚಂದ್ರಪ್ಪ ಅವರು ಈ ‌ಹಿಂದೆ ಪರಿಷ್ಕರಿಸಿದ್ದ ಪಠ್ಯಗಳನ್ನು‌ ವಿದ್ಯಾರ್ಥಿಗಳಿಗೆ ನೀಡಬೇಕು. ಪಠ್ಯ ಪರಿಷ್ಕರಣೆಗೆ ರಾಜ್ಯ ಸರ್ಕಾರ ಹೊಸ ಸಮೀತಿ ಮಾಡಬೇಕು ಎಂದು ಎಂ.ಬಿ.ಪಾಟೀಲ್ ಒತ್ತಾಯಿಸಿದರು. ರಾಜ್ಯದ ಶ್ರೇಷ್ಠ ಸಾಹಿತಿಗಳು, ಚಿಂತಕರು,ವಿದ್ವಾಂಸರು, ಇತಿಹಾಸಕಾರರ ‌ನೇತೃತ್ವದ ಸಮೀತಿ‌ ರಚಿಸಲಿ. ವಿಶ್ವಾಸಾರ್ಹತೆ ಹೊಂದಿದ ಜನರ ನೇತೃತ್ವದಲ್ಲಿ ಹೊಸ ಪಠ್ಯ ಪರಿಷ್ಕರಣಾ‌ ಸಮೀತಿ ರಚನೆಯಾಗಲಿ, ಇತಿಹಾಸವನ್ನು ತಿರುಚದೇ ನಮ್ಮ‌ ಮುಂದಿನ ಪೀಳಿಗೆಗೆ ತಿಳಿಸೋ ಕೆಲಸ ಆಗಬೇ ಕೆಂದು ಎಂ ಬಿ ಪಾಟೀಲ್ ಮನವಿ ಮಾಡಿದರು.

ವಿರೋಧ ಪಕ್ಷದ ‌ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ದೆಹಲಿ ದಿಢೀರ್‌ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರನ್ನು ನಮ್ಮ ಪಕ್ಷದ ವರಿಷ್ಟರು‌ ಕರೆಸಿಕೊಂಡಿದ್ದಾರೆ. ಅದೇನು ಹೊಸದಲ್ಲಾ ನಮ್ಮ ಪಕ್ಷದ ಅಧ್ಯಕ್ಷರಾದ ಸೋನಿ ಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕರೆಸಿಕೊಂಡಿದ್ದಾರೆ. ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಇದರಲ್ಲಿ ಹೊಸದೆನಿಲ್ಲ ಎಂದು ಸ್ಪಷ್ಟಪಡಿಸಿದರು.