Saturday, 5th October 2024

ಪುರಸಭೆ: ಸಾಮಾನ್ಯ ಸಭೆ

ಚಿಂಚೋಳಿ: ಪುರಸಭೆ ಕಾರ್ಯಲಯದ ಸಭಾಂಗಾಣದಲ್ಲಿ ಪುರಸಭೆ ಅಧ್ಯಕ್ಷೆ ಜಗದೇವಿ ಗಂಡತಿ, ಉಪಾಧ್ಯಕ್ಷೆ ಸುಲೋಚನಾ ಕಟ್ಟಿ ಅವರ ನೇತೃತ್ವದಲ್ಲಿ ಸಾಮಾನ್ಯ ಸಭೆ ಜರುಗಿತ್ತು.

ಪುರಸಭೆ ಮುಖ್ಯಧಿಕಾರಿ ಕಾಶಿನ್ನಾಥ ಧನ್ನಿ ಅವರು ಸಭೆಯ ಅನುಮೋದನೆಗೆ, ಪಿ.ಡಬ್ಲ್ಯೂ ಇಲಾಖೆಯ ವತಿಯಿಂದ ಹೈ-ಟೇಕ್ ಗ್ರಂಥಾಲಯ ನಿರ್ಮಾಣ ಮಾಡಲು ಸಿಎ ಸೈಟ್ ನೀಡುವ ಬಗ್ಗೆ, ಚಿಂಚೋಳಿ ಹಾಗೂ ಚಂದಾಪೂರ ಪ್ರಮುಖ ಬೀದಿಗಳಿಗೆ ಗಣ್ಯ ಮಾನ್ಯರ ಹೆಸರಿಡುವುದು.

ವಿಕಲಚೇತನರಿಗೆ ಕಲಾ ಭವನ ನಿರ್ಮಾಣ ಮಾಡಲು ಸ್ಥಳ ಒದಗಿಸುವ ಬಗ್ಗೆ, ಪುರ ಸಭೆಯ ವ್ಯಾಪ್ತಿಯ ಸರಕಾರಿ ಜಮೀನು ಪುರಸಭೆಗೆ ಹಸ್ತಾಂತರಿಸುವುದು ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಕೈಗೊಳುತ್ತಿರುವ ಕಾಮಗಾರಿಗಳ ಬಗ್ಗೆ ನಾಗರೋಸ್ಥಾನ 4ರ ಅನುದಾನ ಡದಿಯಲ್ಲಿ ಶೇ.24.10, 7.25 ಹಾಗೂ ಶೇ 5ರ ಅನುದಾನದಲ್ಲಿ ಎಸ್ಸಿ ಎಸ್ಟಿ ಹಾಗೂ ಸಾಮಾನ್ಯ ವರ್ಗದ ವಿಕಲಚೇತನರಿಗೆ ಪ್ರೋತ್ಸಾಹಧನ, ಐ.ಎ.ಎಸ್, ಕೆ. ಎ. ಎಸ್ ವಿಕಲಚೇತನರಿಗೆ ಲ್ಯಾಪ್ ಟಾಪ್, ತ್ರಿಚಕ್ರ ವಾಹನ ಸೇರಿ ದಂತೆ ವಿವಿಧ ಸಾಲಭ್ಯಗಳ ಕುರಿತು ಅನುಮೋದನೆಗಾಗಿ ಕೋರಿಕೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯ ಸರ್ವಾನುಮತದಿಂದ ಸದಸ್ಯ ಆನಂದ ಟೈಗರ್ ಅವರನ್ನು ಸ್ಥಾಯಿ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾ ಯಿತು.

ಸಮಿತಿಯ ಸದಸ್ಯರನ್ನಾಗಿ ರಾಧಾಬಾಯಿ ಓಲಗೇರಿ, ಬಸವರಾಜ ಶಿರಸಿ, ಅನ್ವರ್ ಕತಿಬ್, ರೂಪಕಲಾ ಕಟ್ಟಿಮನಿ, ನಾಗೇಂದ್ರಪ್ಪ ಗುರಂಪಳ್ಳಿ, ಜಗನ್ನಾಥ ಗುತ್ತೇದಾರ್, ಶಿವಕುಮಾರ ಪೋಚಾಲಿ, ಸಂತೋಷ ಮಾಳಪ್ಪನೂರ್, ಅಬ್ದುಲ್ ಬಾಶೀದ್, ಕವಿತಾ ಕಡಬೂರ್ ರವರನ್ನು ನೇಮಕ ಮಾಡಲಾಯಿತು.