Wednesday, 11th December 2024

ಪ್ರತ್ಯೇಕ ಒಕ್ಕೂಟ ಮಾಡುವ ಉದ್ದೇಶ

ಶಿರಸಿ: ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಮುಂದಿನ ದಿನದಲ್ಲಿ 70 ಸಾವಿರ ಲೀಟರ್ ಹಾಲಿನ ಉತ್ಪಾದನೆ ಮಾಡುವಲ್ಲಿ ಯಶಸ್ವಿಯಾಗುತ್ತೇವೆನ್ನುವ ವಿಶ್ವಾಸವಿದ್ದು, ಇಲ್ಲಿಯೇ ಪ್ರತ್ಯೇಕ ಒಕ್ಕೂಟ ಮಾಡುವ ಉದ್ದೇಶವಿದೆ ಎಂದರು.

ಅಂತೆಯೇ ಇದೀಗ ಚುನಾವಣೆ ನಡೆಯುತ್ತಿದ್ದು, ಇದರಲ್ಲಿಯೂ ರಾಜಕೀಯ ನಡೆಯುತ್ತಿದೆ. ಇಲ್ಲವಾದಲ್ಲಿ ನಾನು ಅವಿರೋಧವಾಗಿ ಆಯ್ಕೆಯಾಗುವ ಸಂಭವ ಇತ್ತು ಎಂದು ಎಂದರು. ಆದರಲ್ಲಿ ರಾಜಕೀಯ ತರವಲ್ಲ ಎಂದರು.